ಕಂಗಳ ಮುಂದೆ ಮಾಣಿಕವಿದ್ದು, ಕಾಣಲರಿಯರಯ್ಯ.
ಬಾಗಿಲ ಮುಂದೆ ಹಾಲಸಾಗರವಿದ್ದು,
ಒರತೆಯ ನೀರಿಗೆ ಹಾರುವರಂತೆ,
ಕಂಗಳ ಮುಂದೆ ಮಹಾಶರಣಿನಿದ್ದು, ಕತ್ತಲೆ ಎನಲೇಕೆ?
ಇನ್ನು ಬೇರೆ ಲಿಂಗವನರಸಿಹೆನೆನಲೇಕೋ
ಆ ಮಹಾಶರಣ ನಮ್ಮ ಅಪ್ಪಣಪ್ರಿಯ ಚನ್ನಬಸವಣ್ಣಾ.
*****