
ಹೇಗೆ ಸಹಿಸಲೇ ಇದರಾಟ ತಾಳಲಾರೆ ತುಂಟನ ಕಾಟ ಸಣ್ಣದಾದರೂ ಶುದ್ಧ ಕೋತಿ ಸಾಕಮ್ಮ ಇದ ಸಾಕಾಟ! ನೂರು ಇದ್ದರೂ ಸಾಲದು ಬಟ್ಟೆ ನಿಮಿಷ ನಿಮಿಷಕೂ ಒದ್ದೆ! ತೂಗೀ ತೂಗೀ ತೂಕಡಿಸುತ್ತಿರೆ ನಗುವುದು ಬೆಣ್ಣೇ ಮುದ್ದೆ! ಕೇಕೆ ಹೊಡೆವುದು ಕೋಗಿಲೆಯಂತೆ ಗರ್ಜನೆಯಂತ...
ಮನವ ಗೆದ್ದೆವೆಂದು ತನುವ ಕರಗಿಸಿ, ಕಾಯವ ಮರಗಿಸಿ ನಿದ್ರೆಯ ಕೆಡಿಸಿ, ವಿದ್ಯೆಯ ಕಲಿತೆನೆಂಬ ಬುದ್ಧಿಹೀನರಿರಾ, ನೀವು ಕೇಳಿರೋ, ನಮ್ಮ ಶರಣರು ಮನವನೆಂತು ಗೆದ್ದರೆಂದರೆ, ಕಾಮ, ಕ್ರೋಧವ ನೀಗಿ, ಮೋಹ ಮದ ಮತ್ಸರವ ನಿಶ್ಚೈಸಿ, ಆಕೆ ರೋಷವಳಿದು, ಜಗದ ಪಾಶವ...
ಹೂವರಳಿ ನಿಂತು ಕಾಯಾಗಲೆಂದು ಕಾದೂ ಕಾದೂ ಕಣ್ಣು ಬೆಳ್ಳಗಾಗುತ್ತವೆ ಮೊಗ್ಗಿದ್ದಾಗಿದ್ದ ಮುರುಕ ಮೊನಚೆಲ್ಲಾ ಬಿಚ್ಚಿಟ್ಟ ಎಸಳಿನೊಳಗೆ ಮುದುರಿ ಹೋಗುತ್ತದೆ ಅದೇ ಅರಳಿದಾಗ ನಕ್ಕಿದ್ದು ಅರುಣೋದಯದಂತೆ ಕ್ಷಣಿಕ ಬಿಸಿಲೇರಿದಂತೆಲ್ಲಾ ಈ ಹೂಗಳಿಗೆ ಅಗ್ನಿದಿವ...
ಹಾರೋಹಳ್ಳಿ ಶ್ರೀನಿವಾಸ ಅಯ್ಯರ್ ದೊರೆಸ್ವಾಮಿ ಅವರು ಎಚ್.ಎಸ್.ದೊರೆಸ್ವಾಮಿ ಎಂದೇ ಪ್ರಸಿದ್ಧರು ಸ್ವಾತಂತ್ರ – ಸ್ವಾಭಿಮಾನದ ಸಾಕ್ಷಿಪ್ರಜ್ಞೆಯಂತೆ ಬದುಕುತ್ತಿರುವ ಅವರಿಗೀಗ ತೊಂಬತ್ತರ ಸಂಭ್ರಮ (ಜ: ಏಪ್ರಿಲ್ ೧೦. ೧೯೧೮). ಗುರುವಾರ ‘ದೊರೆಸ್...
ಆ ಸರ್ಕಲ್ಲೇ ಹಾಗೆ ಭಯಪಡಬೇಡಿ, ಸುತ್ತ ಮುತ್ತಲಿನ ದೊಡ್ಡ ದೊಡ್ಡ ಇಮಾರತಿಯ ಕೆಳಗೆಲ್ಲ ಒಳಗೆಲ್ಲ ಹೊರಗೆಲ್ಲ ಸುತ್ತೆಲ್ಲ ಕಾಯುತ್ತಿರುತ್ತಾರೆ ಬೇಟೆಗಾರರು. ಹಸಿರು ಲೈಟು ಕಣ್ಣುಹೊಡೆದದ್ದೇ ಸಾಕು ಅದೇನು ತರಾತುರಿ ಬೇಟೆ ಎಲ್ಲಿ ತಪ್ಪೀತೇನೋ ಎನ್ನುವ ಓಟ...
ಗಂಗೋತ್ರಿಯಲ್ಲಿ ರಾತ್ರಿ ರೋಡುಗಳೇಕೆ ನಡೆಯುವುದಿಲ್ಲ ಕಟ್ಟಡಗಳೇಕೆ ತೆರೆಯುವುದಿಲ್ಲ ಮರಗಳು ನಿಂತದ್ದೇಕೆ ಮಣ್ಣು ಮಲಗಿದ್ದೇಕೆ ಸಮಯ ಯಾಕೆ ತುಂಡಾಗಿದೆ ಹೀಗೆ ಯಾಕೆ ಲೈಟು ಕಂಬಗಳಿಂದ ಬೆಳಕು ಸ್ಖಲಿಸಿ ವ್ಯವಾಗುತ್ತಿದೆ ನನಗೆ ಗೊತ್ತಿರುವ ಸಮುದ್ರದಂಡೆಗ...
ಭೂಮಿ ಭೂಮೀಂತ ಯಾವಾಗ ನೋಡು ಸುತ್ತೀ ಸುತ್ತೀ ಒದ್ದಾಡ್ತೀಯ ಆದರೆ ಅವಳ ನೆರಳು ಬಿದ್ದರೆ ಸಾಕು ಯಾಕೆ ಗ್ರಹಣ ಹಿಡಿದವನಂಗಾಡ್ತೀಯಾ? *****...














