Home / ಕವನ / ಕವಿತೆ / ಕಾರ್ಪೊರೇಶನ್ ಸರ್ಕಲ್ಲಿನ ರಸ್ತೆಗಳು

ಕಾರ್ಪೊರೇಶನ್ ಸರ್ಕಲ್ಲಿನ ರಸ್ತೆಗಳು

ಆ ಸರ್ಕಲ್ಲೇ ಹಾಗೆ ಭಯಪಡಬೇಡಿ,
ಸುತ್ತ ಮುತ್ತಲಿನ ದೊಡ್ಡ ದೊಡ್ಡ ಇಮಾರತಿಯ
ಕೆಳಗೆಲ್ಲ ಒಳಗೆಲ್ಲ ಹೊರಗೆಲ್ಲ
ಸುತ್ತೆಲ್ಲ ಕಾಯುತ್ತಿರುತ್ತಾರೆ ಬೇಟೆಗಾರರು.

ಹಸಿರು ಲೈಟು ಕಣ್ಣುಹೊಡೆದದ್ದೇ ಸಾಕು
ಅದೇನು ತರಾತುರಿ
ಬೇಟೆ ಎಲ್ಲಿ ತಪ್ಪೀತೇನೋ ಎನ್ನುವ ಓಟ,
ಅಬ್ಬಾ! ಸುತ್ತೆಲ್ಲ ಬಣ್ಣ ಬಣ್ಣದ ಕಾರುಗಳ
ವೀರ ಭಂಟರು ಬೇಟೆಗಾರರು ಬರುತ್ತಿದ್ದಾರೆ.

ವಿಧಾನಸೌಧದೆಡೆಗೆ ನುಗ್ಗಿ
ಲೂಟಿ ಮಾಡುವ ರಾಜಕೀಯದವರು-
ಮ್ಯಾಜೆಸ್ಟಿಕ್ ಹೊಕ್ಕು
ಪರ್ಸ್ ಸರ ಹಾರಿಸುವ ಲಘಂಗರು-
ಎಮ್.ಜಿ ರೋಡಿಗೆ ಧಾವಿಸಿ
೫೦%ದ ಸೇಲ್ ಬೋರ್ಡ್ ಹಾಕಿ
ಹಳೇ ಸ್ಟಾಕ್ ಮಾರುವ ಮೋಸಗಾರರು-
ಜೆ. ಸಿ ರೋಡ್, ಕೆ. ಅರ್ ಮಾರ್ಕೆಟ್ಟಿನ
ಡುಪ್ಲಿಕೇಟ್ ಸಾಮಾನಿನ ಖದೀಮರು-
ಸರ್ಕಲ್ಲಿನ ಸುತ್ತ ಧಾವಿಸಿ ಓಡುತ್ತಿದ್ದಾರೆ.

ಇಡೀದಿನ ಬೇಟೆಯಾಡಿ ಗಹಗಹಿಸುವ ಇವರು-
ಡುಪ್ಲಿಕೇಟ್ ಮೋಡಕಾ ತುಂಬಿಕೊಂಡ ಹೋದ ಅವರು-
ಪರ್ಸ ಕಳೆದುಕೊಂಡು
ಮನೆ ಸೇರಲೂ ಕಾಸಿಲ್ಲದೆ ಆಟೋಹಿಡಿದು
ಚಿಲ್ಲರೆ ಹೊಂದಿಸಿ ಉಸಿರುಬಿಟ್ಟಿದ್ದೇನು.
ಇಲ್ಲಿ ಮೋಸ ಹೊಂದಿ ಕಣ್ಣೀರು ಸುರಿಸುವ
ಜಗಳ ಹೊತ್ತಿಕೊಳ್ಳುವ ಸಂಜೆಯ ಸಮಯ.
ಅಲ್ಲಿ ನಡುರಾತ್ರಿಯವರೆಗೂ
ಗುಂಡು ಹಾಕಿ ಕೇಕೆಹೊಡೆಯುವ ಸಂಭ್ರಮ

ಗೊತ್ತಿರಲಿ ನಿಮಗೆ,
ಉದ್ದುದ್ದಾಗಿ, ಅಡ್ಡಡ್ಡಾಗಿ ಡೊಂಕಾಗಿ
ಇಂಬಾಗಿ ಕಾಣಿಸಿಕೊಳ್ಳುವ ರಸ್ತೆಗಳ
ಸುತ್ತ ಮುತ್ತಲಿನ ದೊಡ್ಡ ದೊಡ್ಡ
ಇಮಾರತಿಯ ಕೆಳಗೆಲ್ಲ ಒಳಗೆಲ್ಲ
ಹೊರಗೆಲ್ಲ ಸುತ್ತೆಲ್ಲ ಕಾಯುತ್ತಿರುತ್ತಾರೆ
ಬೇಟೆಗಾರರು.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...