ಮಲಗೆನ್ನ ಮುದ್ದುಮರಿ ಚಿನ್ನ ನಿದ್ದೆ ನೇವರಿಸುತಿದೆ ಕಣ್ಣ ನಡುರಾತ್ರಿ ದಾಟುತಿದೆ ಗಡಿಯ ಇರುಳು ಬಿಚ್ಚಿದೆ ಕಪ್ಪು ಜಡೆಯ ಲೋಕವೇ ಮಲಗಿರಲು ಹೊದ್ದು ಆಟ ಸುರುಮಾಡುವರೆ ಮುದ್ದು? ಕಣ್ಣೆ ಇದು, ಕಾಂತಿಯಾ ಚಿಲುಮೆ ಹುಣ್ಣಿಮೆಗು ಇಲ್ಲ ಈ ಹಿರಿಮೆ ನಿನ್ನ ಕ...

ಜಂಗಮವೇ ಗುರು, ಜಂಗಮವೇ ಲಿಂಗ, ಜಂಗಮವೇ ಪ್ರಾಣವೆಂದರೆ, ಇಲ್ಲವೆಂಬ ಅಂಗಹೀನರಿರ ನೀವು ಕೇಳಿರೋ. ಜಂಗಮವು ಗುರುವಲ್ಲದಿದ್ದರೆ ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರವ ಹಿಂಗಿಸುವನೆ? ಜಂಗಮ ಪ್ರಾಣವಲ್ಲದಿದ್ದರೆ, ಪ್ರಾಣಕ್ಕೆ ಪ್ರಸಾದವ ಕೊಡುವನೆ? ಜಂಗಮ...

ನಾವು ಗೂಡಿನಲ್ಲಿ ಬೆಚ್ಚಗೆ ಕಾವು ಕೂಟ್ಟು ಬೆಳೆಸಿ ಹೂಮಾಂಸ ಅರಳಿ ಹರಳೆಯಾಗಿ, ಹುಲ್ಲೆಸಳಾಗಿ ಇದ್ದಂಥವು ಬರುಬರುತ್ತಾ ರೆಕ್ಕೆ ಪುಚ್ಚಗಳಾಗಿ ಜೊತೆಗೆ ಕೊಕ್ಕು ಉಗುರುಗಳೂ ಆಗಿ ನಂತರ ಮುದಿಯಾದ ನಮ್ಮನ್ನೇ ಕುಕ್ಕಿ ಗಾಯಗೊಳಿಸಿ ಈ ಗೂಡನೂಡೆದು ದೂಡಿ ಹಾರ...

ಪ್ರಿಯ ಸಖಿ, ಅವನು ಸತ್ತು ಮಲಗಿ ಗಂಟೆಗಳೇ ಕಳೆದಿವೆ. ನಿಧಾನಕ್ಕೆ ಬರುವವರೆಲ್ಲಾ ಬಂದ ನಂತರ ಶವಸಂಸ್ಕಾರವೂ ನಡೆದಿದೆ. ಇಷ್ಟರವರೆಗೆ ನೋವಿನ ಹಿನ್ನೆಲೆಯಲ್ಲಿ ಮರೆಯಾಗಿದ್ದ ಹಸಿವು ಈಗ ಅವನ ಸಂಬಂಧಿಕರ ದೇಹದಲ್ಲಿ ಬೆಂಕಿಯಂತೆ ಸುಡುತ್ತಿರುವುದು ಗೋಚರಿಸ...

ಚಳಿಗಾಲದ ಅಗ್ಗಿಷ್ಟಿಕೆಯ ಬಿಸಿ ಒಳ ಹೊರಗೆಲ್ಲ ಸುಟ್ಟು ಕರಕಲು ಬೆಚ್ಚನೆಯ ಬೂದಿಯೊಳಗೆ  ಸದಾ ಅವಳ ಚಿತ್ರ. ಮೊಳಕೆಯೊಡೆಯುತ್ತವೆ ಮುರುಟಿದ ಕಾಳುಗಳು ಬರಸೆಳೆತದ ಚಿಗುರು ಎಲೆ ಹುಚ್ಚು ಹಿಡಿಸುವ ಹಚ್ಚೆಯ ಚಿತ್ತಾರ ಮನೆ ತುಂಬ ರಂಗೋಲಿಯ ಚಿತ್ತಾಕರ್ಷಕ ಗೆ...

ಆ ಅಪರಾಹ್ನ ಥಟ್ಟನೆ ಬಂದು ನನ್ನ ಮನಸ್ಸನ್ನು ಆಕ್ರಮಿಸಿದ ಶಬ್ದ: ಕ್ರ್‍ವಾಕ್. ದಣಿದಿದ್ದೆ.  ಮಧ್ಯಾಹ್ನ ಊಟ ತಡವಾಗಿ ಮುಗಿಸಿ ಬೆತ್ತದ ಈಸಿಚೇರಿನಲ್ಲಿ ಅಡ್ಡಾಗಿದ್ದೆ. ನಿದ್ದೆಯೇನೂ ಹಿಡಿದಿರಲಿಲ್ಲ.  ಮಂಪರಿನಲ್ಲೂ ಇರಲಿಲ್ಲ. ಮನಸ್ಸಿನಲ್ಲೆ ಮೆಸ್ಸಿನ...

ಸೂರ್ಯನೂ ಅಷ್ಟೆ ನಮ್ಮ ಐ.ಟಿ.ಬಿ.ಟಿ ಹುಡುಗರಂತೆ ಮೇಲಕ್ಕೇರಿದ ಮೇಲೆ ಜನ್ಮ ಸ್ಥಳ ಮರೆತು ಪಶ್ಚಿಮಕ್ಕೆ ವಲಸೆ ಹೋಗುತ್ತಾನೆ ಅಲ್ಲೇ ಕೆಲಸದಲ್ಲಿ ಮುಳುಗಿ ಹೋಗುತ್ತಾನೆ ಅಲ್ಲಿ ಏನು ಕಥೆಯೋ ಏನೋ ನಮಗಂತೂ ದೂರದಿಂದ ಬಣ್ಣ ಬಣ್ಣವಾಗಿ ದೊಡ್ಡದಾಗಿ ಕಾಣಿಸುತ್...

“ಅನು ನೀವು ಹೀಗೆ ಮಾಡಬಹುದಾ?” ಅಫೀಸಿಗಿನ್ನೂ ಅನು ಕಾಲಿಟ್ಟಿಲ್ಲ. ಆಗಲೇ ಬಾಣದಂತೆ ಪ್ರಶ್ನೆ ತೂರಿಬಂತು ಅಭಿಯಿಂದ. “ಏನ್ ಮಾಡಿದೆ ಅಭಿ? ನಾನೇನು ಮಾಡಿಲ್ಲವಲ್ಲ” ಅಶ್ಚರ್ಯದಿಂದ ಕಣ್ಣಗಲಿಸಿ ಕೇಳಿದಳು. “ಏನೂ ಮಾಡ...

1...89101112...53

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...