ಚಳಿಗಾಲದ ಅಗ್ಗಿಷ್ಟಿಕೆಯ ಬಿಸಿ
ಒಳ ಹೊರಗೆಲ್ಲ ಸುಟ್ಟು ಕರಕಲು
ಬೆಚ್ಚನೆಯ ಬೂದಿಯೊಳಗೆ ಸದಾ ಅವಳ ಚಿತ್ರ.
ಮೊಳಕೆಯೊಡೆಯುತ್ತವೆ ಮುರುಟಿದ ಕಾಳುಗಳು
ಬರಸೆಳೆತದ ಚಿಗುರು ಎಲೆ
ಹುಚ್ಚು ಹಿಡಿಸುವ ಹಚ್ಚೆಯ ಚಿತ್ತಾರ
ಮನೆ ತುಂಬ ರಂಗೋಲಿಯ
ಚಿತ್ತಾಕರ್ಷಕ ಗೆರೆಗಳು
ಪ್ರಶಾಂತ ಕಡಲಿಗೆ ನೀಲಿ ಕೋಟು
ಜೇಬು ತುಂಬೆಲ್ಲ ರಂಗು ರಂಗಿನ ಮುತ್ತುಗಳು
ಕಬಳಿಸಿದಷ್ಟು ಇನ್ನೂ ಗುಳುಗುಳಿಸುವ ರತ್ನಗಳು
ಚಿವುಟಿದಷ್ಟೂ ಚಿಗಿಯುವ
ಕೊರಡು ಕೊನರುವ ಸೃಷ್ಟಿ ಲಯ
ಪ್ರೀತಿಯೊಳಗಿನೋನ್ಮಾದಕೆ ಬಿಡದ ಛಲ.
*****


















