Home / ಕವನ / ಕವಿತೆ

ಕವಿತೆ

ಬಹಿಷ್ಠೆ ಹಸ್ತಿನಿ ಹೆಣ್ಣು ಗಜಮೈಥುನ ರಾಡಿಯಲ್ಲಿ ಸದಾ ತೆರೆದಿಟ್ಟ ಓಣಿ. ಓಣಿ ಓಣಿಗೆ ಬಸಿರಾದ ಹಿಡಿಂಬೆ ತೊಡೆ ಬಿಸಾಕಿದ ನನ್ನ ನಿರ್ಗತಿಕ ಪಿಂಡಗಳು ಚರಂಡಿಯಲ್ಲಿ ನಡುಗಿದವು ತಿಂತಿಣಿ ಬೆಳೆದು ಬೀದಿಗಳಲ್ಲಿ ಅಲೆದು ಹಸಿದು ಕೆಲವು ತಾವು ತಾವೇ ತಿಂದವು...

ಅದಾವ ಕ್ಷಣದಲೊ ಗಮ್ಯತೆ ಸೇರಿ ಮಾಸವೊಂದರಲ್ಲೇ ಅಸ್ತಿತ್ವ ತೋರಿ ಅಸ್ಪಷ್ಟತೆಯಲ್ಲೇ ಪ್ರಭಾವ ಬೀರಿ ನಿನ್ನಾಟ ಒಡಲಲಿ ಬಾರಿ ಮತ್ತೇರಿ ಸೃಷ್ಟಿಕ್ರಿಯೆಯ ಆ ಕೈಚಳಕ ಹೊತ್ತು ತಂದಿದೆ ವರ್ಣಿಸಲಾಗದ ಪುಳಕ ಒದಿವಾಗ ಅವ ಎಡ ಬಲಕ ರೋಮಾಂಚನದ ಸಿಹಿಸಿಂಚನ ಮನಕ ನಿ...

ಎಡಬಿಡದೆ ಸುರಿದ ಮಹಾ ಮಾರಿ ಮಳೆಗೆ ರೆಕ್ಕೆಪುಕ್ಕಗಳೆಲ್ಲಾ ಒದ್ದೆಮುದ್ದೆಯಾಗಿ ನೆಲಕ್ಕೆ ಕವುಚಿಬಿದ್ದ ಮರಿ ಹಕ್ಕಿ ಛಳಿಗೋ, ತೇವಕ್ಕೋ ಗಡಗಡನೆ ನಡುಗುತ್ತಾ ರೆಕ್ಕೆ ಬಿಚ್ಚಲಾಗದೇ ಮತ್ತಷ್ಟು ಮುದುಡುತ್ತಾ ತನ್ನ ಅಸಹಾಯಕತೆಗೆ ಬಿಕ್ಕುತ್ತಾ ಮನದೊಳಗೆ ಒಂ...

ಕಾವ್ಯವನ್ನು ಸುಶ್ರಾವ್ಯವಾಗಿ ವಾಚಿಸಿದರೇನು ತಪ್ಪಿಲ್ಲವೆನ್ನುತ್ತಾರೆ ಭಟ್ಟರು ಕಾವ್ಯವನ್ನು ಹೆಚ್ಚೆಂದರೆ ಬರಿ ಶ್ರವ್ಯವಾಗಿ ವಾಚಿಸಬಹುದು, ನಿಜವೆಂದರೆ ಕಾವ್ಯವಿರುವುದು ವಾಚನಕಲ್ಲವೇ ಅಲ್ಲ ನೇರ ಪಚನಕ್ಕೆನ್ನುತ್ತಾರೆ ಸನ್ಮಾನ್ಯ ಶ್ರೀ ಶರ್ಮರು. **...

ಕರುಣ ಹರಿಸಿ, ದಾರಿ ತೋರಿ ತಾರಿಸೆನ್ನನು ವರವ ನೀಡಿ, ನನ್ನ ತೀಡಿ ಮುನ್ನಡೆಸು ಇನ್ನು ಓ ತಾಯೆ ನೀ ದಾಯೆ ಕಾಯೆ ಎನ್ನನು ನಿನ್ನ ಹೃದಯ ಗಂಗೆ ಹರಿದು ಹರಿಸಲಿನ್ನು ನಿನ್ನ ನಾರಿ ಹೃದಯವಹುದು ಕಮಲ ನನ್ನ ಮನವು ಇಹುದು ತುಮುಲ ತಾಕಲಾಟ ಚನ್ನ ಚಲುವ ಚಿನ್ನ ...

ಅವನನ್ನು ಪ್ರೀತಿಸಿದ ಹುಡುಗಿ ಒಮ್ಮೆ ಅವನೊಳಗೆ ಮತ್ತೊಮ್ಮೆ ಅವನನ್ನು ತನ್ನೊಳಗೆ ಹುದಿಗಿಸಿಕೊಂಡು ಮುತ್ತಿನ ಮಳೆ ಸುರಿಮಳೆ ಅಮೆರಿಕದ ಬಿಳಿಗೊಂಬೆಗೆ ನವಾಬ್, ಗಲ್ಲ ತುಟಿ ಒತ್ತಿ ಮುತ್ತಿ ಮೇಲಕ್ಕೆತ್ತಿ ಸತ್ಯದ ಕತೆ ಬಿಚ್ಚುವಿಕೆಯ ಹೊಯ್ದಾಟ ಏನೂ ಇಲ್ಲ...

ವಿಶ್ವದಂಗಳ ತೃಣ-ತೃಣದ ಕಣವದು ಜೀವ ಜಾಲದ ಬದುಕಿಗೆ ನನಗೆ ನಿನಗೆಂದೆಣಿಸುವೇತಕೆ ಉರಿದು ಬೀಳೋ ಅಸ್ಥಿಯ ಭ್ರಾಂತಿಗೆ | ಎನಿತು ರೂಪರೂಪ ಭೇದವು ಒಂದೇ ಜೀವದಿ ಸಮತೆಯು ವಿಕಾಸ ದೃಷ್ಟಿಗೆ ಸೃಷ್ಟಿಗರ್ಭದ ಮೂರ್ತ ಮೂರ್ತದ ದರುಶನ ನವ್ಯ ನವಕೆ ಶುಭೋದಯವು ನಿತ...

ಅಮ್ಮ ಪಾತ್ರೆ ಹಿಡಿದು ಬಡಿಸಿದಳು. ಪಾಯಸ ಅಲ್ಲಿ ಬರೀ ಪ್ರೀತಿ ಸಿಹಿ. ಅಪ್ಪ ಕನ್ನಡಿ ಹಿಡಿದು ತೋರಿಸಿದ ಬಿಂಬಗಳ ಎಲ್ಲವೂ ಕಾಲಘಟ್ಟದಲ್ಲಿ ಕರಗುವ ಹನಿಗಳು. ಅಕ್ಕ ತಬ್ಬಿದಳು ಲೋಕದ ಮಾಯೆಯ ಪ್ರೇಮ ಕರಗಿ ನೀರಾಗಿ ನದಿಯಾದಳು. ತಂಗಿ ಹಂಚಿದಳು ಸ್ನೇಹದ ದಿ...

ನಾಲ್ಕು ದಿನಗಳ ಕಾಲ ಬೇರೆಯೂರಿಗೆ ಸಾಗಿ ನಿನ್ನ ಕನಸನು ಮರೆತು ನನ್ನಂತೆ ನಾನಿದ್ದು ಮತ್ತೆ ಹಿಂದಿರುಗುವೆನು, ಅಗಲಿಕೆಯ ದಿನಗಳಲ್ಲಿ ಇನಿತಾದರೂ ನಿನ್ನ ನೆನಪುಗಳು ಭುಗಿಲೆದ್ದು ಮನವ ಕೆರಳಿಸದಿರಲಿ, ವಿರಹ ಮಾಡಲಿ ನಿದ್ದೆ! ಮೌನ ಮಸಣದಲೆನ್ನ ಮನದಳಲ ಮಣ...

ಪ್ರೀತಿ ಇಲ್ಲದ ಮೇಲೆ ಕನ್ನಡ ಆಕಾಶವಾಣಿ ಕೇಂದ್ರದಿ ಮೂಡಿ ಬರುವ ಕಾರ್ಯಕ್ರಮಗಳು ನಾನು ದಿನಂಪ್ರತಿ ಆಲಿಸಿದ್ದು ಹೇಗೆ? ಪ್ರೀತಿ ಇಲ್ಲದ ಮೇಲೆ ಆಕಾಶವಾಣಿ ವಿವಿಧ ಕಾರ್ಯಕ್ರಮ ಆಲಿಸಿ ಸಂತೋಷಪಟ್ಟಿದ್ದು ಹೇಗೆ? ಪ್ರೀತಿ ಇಲ್ಲದ ಮೇಲೆ ಅಭಿಲಾಷದ ಚಿತ್ರಗೀತ...

(ಒಂದು ಐತಿಹಾಸಿಕ ಕತೆ) ಹ್ಹಃ ಹ್ಹಃ ಹ್ಹಃ! ಅಹ್ಹಃ ಅಹ್ಹಃ ಅಹ್ಹಃ!! ಗಝುನಿ ಮಹಮೂದನಿಗೆ ಹಿಡಿಸಲಾರದ ನಗೆ. ನಕ್ಕು ನಕ್ಕು ಅವನ ಹೊಟ್ಟೆ ನೋಯುತ್ತಿದ್ದಿತು. ಆದರೂ ಅವನ ಆ ತಿರಸ್ಕಾರದ ನಗೆ ತಡೆಯಲಾರದಾಯಿತು. ಅದೊಂದು ಸುಪ್ರಸಿದ್ದವಾದ ಸೋಮನಾಥ ದೇವಾಲಯ. ಭಾರತದ ವೈಭವವನ್ನು ವಿಶ್ವಕ್ಕೆ ತೋ...

ಸರಲಾಕ್ಷ ಹುಲಿಮೀಸೆಯು ಮನೆಯಲ್ಲಿ ಬಂದಿರಲಾರಂಭಿಸಿದಂದಿನಿಂದ ತಾನು ತೊಂದರೆಗೊಂಡು ಬೇಸತ್ತು ಹೋಗಿರುವೆನೆಂದು ವಸತಿಗೃಹದ ಸ್ವಾಮಿನಿಯಾದ ಲೀಲಾಬಾಯಿಯು ದೂರಿಕೊಳ್ಳುತ್ತಿದ್ದಳು. “ಕೆಟ್ಟ ಮೋರೆಯವರೂ ಅಸಭ್ಯರೂ ಸುಟ್ಟಮನೆಯವರೂ ಸುಡದ ಮನೆಯವರೂ ತೆರವಿಲ್ಲದೆ ನನ್ನ ಮನೆಗೆ ಬರುತ್ತಿರುವ...

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....