ಕರುಣ ಹರಿಸಿ, ದಾರಿ ತೋರಿ ತಾರಿಸೆನ್ನನು
ವರವ ನೀಡಿ, ನನ್ನ ತೀಡಿ ಮುನ್ನಡೆಸು ಇನ್ನು
ಓ ತಾಯೆ ನೀ ದಾಯೆ ಕಾಯೆ ಎನ್ನನು
ನಿನ್ನ ಹೃದಯ ಗಂಗೆ ಹರಿದು ಹರಿಸಲಿನ್ನು
ನಿನ್ನ ನಾರಿ ಹೃದಯವಹುದು ಕಮಲ
ನನ್ನ ಮನವು ಇಹುದು ತುಮುಲ ತಾಕಲಾಟ
ಚನ್ನ ಚಲುವ ಚಿನ್ನ ದಾ ನಿನ್ನೊಡಲ
ತಡೆಯದೇ ಇಳಿದು ಅಳಿಯಲೆನ್ನ ಭವಮಾಟ
ಶೂಲಿನೀ ನಿನ್ನ ತ್ರಿಶೂಲ ತಿಮಿರ ತಿವಿಯಲಿ
ಶಿವೆ ನೀ ನಿನ್ನ ಶಕ್ತಿ ಈಯಲೆನಗೆ ಚರಮ ಮುಕ್ತಿ
ಆವ ಪಾಪ ಪಾಶವೇನು ಘಾಸಿಮಾಡದಾಗಲಿ
ಪರಮ ಪವಿತ್ರೆ ನಿನ್ನ ಪಾದಪದ್ಮಗಳಿಗೆನ್ನ ಭಕ್ತಿ
*****


















