ಮನುಷ್ಯನ ಬದುಕಿನಲ್ಲಿ ಬಯಸಿದ್ದನ್ನೆಲ್ಲಾ ಮಾಡುವುದಕ್ಕೆ ಕಾಲವಿಲ್ಲ, ಇಷ್ಟಪಟ್ಟದ್ದನ್ನೆಲ್ಲಾ ಪಡೆಯುವುದಕ್ಕೆ ಅವಕಾಶವಿಲ್ಲ… ಹೀಗಂದದ್ದು ಎಕ್ಲೀಸಿಯಾಸ್ಪರ ತಪ್ಪು. ಈಗ ಮನುಷ್ಯ ಏಕ ಕಾಲದಲ್ಲೇ ಪ್ರೀತಿಸಬೇಕು, ದ್ವೇಷಿಸಬೇಕು. ಅಳುವುದಕ್ಕೂ ನಗ...

ತೂಕಡಿಕೆಯನು ಕಳೆಯದೇಕೆ ಕುಳಿತಿಹೆ ಗೆಳೆಯ? ಸಾಕು, ಸುತ್ತಲು ನೋಡು ಕಣ್ತೆರೆದು ನಿಂದು; ಲೋಕದಲಿ ವಂದೆ ಮಾತರಮೆಂಬುದೊಂದೆ ಮಾ ತೀ ಕಿವಿಯನೊಡೆಯುತಿರೆ ಉಚ್ಛಳಿಸಿ ಬಂದು. ಮತಜಾಲದಲ್ಲಿ ಸಿಲುಕಿ, ಅತಿ ಜಾತಿಯಲ್ಲಿ ಕುಲುಕಿ, ಗತಿಗೆಟ್ಟು ಸರ್‍ವರಲಿ ನೀನಾ...

ಸರಿಯೇನೆ ದೀಪಿಕಾ ಇದು ಸರಿಯೇನೇ? ಈ ಜಂಭ, ನಾಲಿಗೆಯಲಿ ಬೆನ್ನಿರಿಯುವ ಉರಿವ್ಯಂಗ್ಯ ಅಡಬಹುದೇನೇ ದೀಪಿಕಾ ಕಾಡಬಹುದೇನೇ? ಮಾತಲ್ಲಿ ಕೂದಲು ಸೀಳಿ ಬಗೆಯಬಹುದೇನೇ ಎದೆಯ ನನ್ನ ಮನೆಯಲ್ಲೇ ನನ್ನ ಹುಗಿಯಬಹುದೇನೇ? ಇಲ್ಲವೆ, ಕೈಗೆ ಬಿದ್ದರೂ ನಾ ಕೇಳದೆ ಹಣ್ಣ...

ಅವರವರ ಮಾತಲ್ಲಿ ಅವರಲ್ಲಿಹುದು ಸಮ್ಮತ ವಾದವೇತಕೋ ಮನುಜ|| ವಾದ ಪ್ರತಿವಾದ ಧರ್‍ಮಶಾಸ್ತ್ರ ಭಕ್ತಿಯಾರಸ ಅವರವರಲ್ಲಿಹುದು ಸಮಂಜಸ ವಾದವೇತಕೋ ಮನುಜ|| ಮಾತು ಮಾತಲ್ಲಿಹುದು ಮಾಣಿಕ್ಯ ಗೀತ ಘೋಷ ಸತ್ಯ ಸಾರ್‍ಥಕವಿಹುದು ಮತ ಭೇದವೇಕಯ್ಯಾ ವಾದವೇತಕೋ ಮನುಜ|...

ಬಾಯ್ತೆರೆದು ಎಲ್ಲ ನುಂಗಲು ಕಾದಿರುವ ದೈತ್ಯ ಹಸಿವು ಚೂರೇ ಚೂರು ಒಡಲಿಗೆ ಬಿದ್ದೊಡನೆ ಅಕ್ಷಯಗೊಳುವ ರೊಟ್ಟಿಯದ್ಭುತಕ್ಕೆ ಬೆಕ್ಕಸ ಬೆರಗು. ಗಳಿಗೆ ಬಟ್ಟಲು ಖಾಲಿಯಲ್ಲ ರೊಟ್ಟಿ ಮುಗಿಯುವುದಿಲ್ಲ. *****...

ಸೂಜಿ ಮೊನೆ ಹೊತ್ತ ಸಂಬಂಧದ ಚೌಕಟ್ಟಿನ ಸಂ-ಸಾರ ದಾರವಾಗಿ ಒಡಲಲಿ ಸೇರಿದ ಕ್ಷಣ ಶುರುವಾಗಿದೆ ಹಸೀನಾದ ಬಾಳ ಬಟ್ಟೆ ನೇಯ್ಗೆ ಕೆಲಸ ಗೊತ್ತಿರದ ಕೈಗಳು ಮಾಡಿದ ಸೂಜಿ ಎಸಳು ಪ್ರೀತಿಯಿಂದ ಹೊಸೆದ ದಾರ ಎತ್ತಣದ ಸಂಬಂಧಗಳು ಇತ್ತಣವಾಗಿ. ಒಮ್ಮೊಮ್ಮೆ ಬೆಸೆದು ...

ಏನೇನೂ ಬೇಡವೆಂದು ತಪಸ್ಸು ಮಾಡಲು ಊರಾಚೆಗೆ ಹೋದ ಸನ್ಯಾಸಿಗೆ ಇಲಿಗಳ ಕಾಟ ತಪ್ಪಿಸಲು ಬೆಕ್ಕು ತಂದ ಬೆಕ್ಕಿಗೆ ಹಾಲೆಂದು ಹಸು ತಂದ ಹಾಲು ಕರೆಯಲು ಹೆಣ್ಣು ತಂದ ಮತ್ತಿನ್ನೇನು ಸನ್ಯಾಸಿ ಸಂಸಾರಿಯಾದ. *****...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...

ತಿಮ್ಮಣ್ಣ ನಮ್ಮೂರಿನ ಪಕ್ಕದ ಹಳ್ಳಿಯಲ್ಲಿನ ಅಡುಗೆ ಭಟ್ಟ ತಿಪ್ಪಾಭಟ್ಟರ ಮಗ. ತಿಪ್ಪಾಭಟ್ಟರಿಗೆ ಮದುವೆಯಾಗಿ ಹತ್ತು ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ. ಕೊನೆಗೆ ಪಕ್ಕದ ಮನೆಯ ಕಮಲಾಕ್ಷಮ್ಮನ ಸಲಹೆ ಮೇರೆಗೆ ಮಗುವಾದರೆ ತಿರುಪತಿಗೆ ಹೋಗಿ ಬರುವ ಹರಕೆ ಹೊತ್ತರು. ತಿಮ್ಮಪ್ಪನ ಕೃಪಾಕಟಾಕ್ಷವೋ ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...