ಹಕ್ಕಿಯಾಗೈ ಚುಕ್ಕಿಯಾಗೈ
ಹಾರು ಮುಗಿಲಿನ ತೋಟಕೆ ||

ಜೇನುತುಪ್ಪಾ ಜಾರಿ ಸುರಿದಿದೆ
ಚಾಚು ತಮ್ಮಾ ನಾಲಿಗೆ
ವಾಣಿ ವೃಕ್ಷದಿ ಗಾನ ಸುರಿದಿದೆ
ಬಿಚ್ಚು ತಮ್ಮಾ ಹಾಲಿಗೆ

ಹರನೆ ಬಂದನು ಬಂದೆನೆಂದನು
ಪಕ್ಷಿ ಕಂಠದಿ ನಕ್ಕನು
ರಾಜಯೋಗಿಯ ತೇಜಪುಂಜದ
ಮಿಂಚು ಗೊಂಚಲ ಕೊಟ್ಟನು

ಜ್ಞಾನ ಯೋಗಿಯ ಕರ್ಮ ಯೋಗಿಯೆ
ಅಪ್ಪು ಮನುಕುಲ ಮಲ್ಲಿಗೆ
ಮಧುರ ಮಧುವನ ರುಚಿರ ಶಿವಬನ
ಆಗು ಶಾಂತಿಯ ಸಂಪಿಗೆ
*****