ನೀ…
ಎಳೆ ಬಾಲೆ ನೀರೆ
ಎಳೆ ನಿಂಬಿನ್ಹಾಂಗೆ
ತಿಳಿ ಆಗಸದಾಗೆ
ಮಿನುಗುಟ್ಟುವ ಚುಕ್ಕಿಗಳ ನಡುವೆ
ಚಂದ್ರಮನ ಮೊಗದ್ಹಾಂಗೆ ||

ಜೋಗದಿ ನೀ ಜಲ ಧಾರೆಯ್ಹಾಂಗೆ
ಅರುಣದ ನೀ ಅರುಣ ಕಿರಣದ್ಹಾಂಗೆ
ಚಿಗುರಲ್ಲಿ ನೀ ಎಳೆ ಚಿಗುರಿನ್ಹಾಂಗೆ||

ಮೊಗ್ಗಲ್ಲಿ ನೀ ಎಳೆ ಮೊಗಿನ್ಹಾಂಗೆ
ಮಂಜಲ್ಲಿ ನೀ ಮಂಜಿನ ಹನಿಹಾಂಗೆ
ಮುತ್ತಲ್ಲಿ ನೀ ಮುತ್ತಿನ ಮಣಿಹಾಂಗೆ
ಹೊಳೆ ಹೊಳೆಯುತಲಿ ಬೆಳಗು ಮಾಣಿಕ್ಯದ್ಹಾಂಗೆ||

ಹಾಲ್‌ಗಲ್ಲ ಹಾಲ್ ಜೇನು
ಸವಿಯಲೇನು ಸವಿಜೇನು
ಮೃದುವಾಗಿ ನೀನು ಬೆಳೆದರೇನು ಚೆನ್ನು
ಬೆಳೆದು ನೀ ಬೆಳಗು ಕನ್ನಡದಾ ಮಣ್ಣನ್ನು
ಕನ್ನಡದಾ ಮಣ್ಣನ್ನು||
*****