ಬಲ್ಪಿನ ಬೆಳಕು

ಅಂಗಡಿಗೆ ಹೋಗಿ ಒಂದು ಬೆಂಕಿಪೆಟ್ಟಗೆ ಕೊಂಡು ತರುವಷ್ಟು ಸಲೀಸಾಗಿ ನಾವು ಬಲ್ಪನ್ನು ಖರೀದಿಸುತ್ತೇವೆ. ಅದರ ಗುಣಮಟ್ಟದ ಬಗ್ಗೆ ಯಾರು ತಲೆಕಡಿಸಿಕೂಳ್ಳುತ್ತಾರೆ? ಯಾವುದೋ ಕಂಪೆನಿಯ ಬ್ರಾಂಡಿನ ಬಲ್ಪನ್ನು ತಂದರಾಯಿತು. ಮನೆಯಲ್ಲಿ ಹೋಲ್ಲರಿಗೆ ಸಿಕ್ಕಿಸಿ ಸ್ವಿಚ್ ಹಾಕಿದಾಗ ಆ ಬಲ್ಪ್‌ಝಗ್ಗನೆ ಬೆಳಗಿದರಾಯಿತು ಆಲ್ಲವೇ? ಆದು ಉರಿಯುತ್ತ  ಉರಿಯುತ್ತ ಒಂದಿನ ರುಸ್ ಎಂದರೆ ಅಂಗಡಿಗೆ ಹೋಗಿ ಇನ್ನೂಂದು ಬಲ್ಪ್ ತಂದು ಹೋಲ್ಡರಿಗೆ ಸಿಕ್ಕಿಸುತ್ತೇವೆ.

ಕೆಲವೊಮ್ಮೆ ಬಲ್ಪನ್ನು ಹೋಲ್ಡರಿಗೆ ಹಾಕಿದೊಡನೆ ಫಟ್ ಸದ್ಧಿನೊಂದಿಗೆ ಅದರೊಳಗಿನ ಲೋಹದ ತಂತು ತುಂಡಾಗುವುದಿದೆ. ಆಗ ಅದಕ್ಕೆ ತೆತ್ತ 10 ಆಥವಾ 12 ರೂಪಾಯಿ ದೊಡ್ಡ ಸಂಗತಿಯೇನಲ್ಲ ಎಂದು ಮೋಸವಾಗಿದ್ದು ಗೊತ್ತಿದ್ದೂ ಸುಮ್ಮನಾಗುತ್ತೇವೆ.

ಆದ್ದರಿಂದಲೇ ನಾವು ಬಲ್ಪಿನ ಗುಣಮಟ್ಟದ ಬಗ್ಗೆ ತಿಳಿದಿರಬೇಕಾಗುತ್ತದೆ. ಮನೆಗಳಲ್ಲಿ ಸಾಮಾನ್ಕವಾಗಿ ಬಳಸುವ ಬಲ್ಪ್‌ಗಳಿಗೆ ಜಿಎಲ್ಎಸ್ (ಜನರಲ್ ಲೈಟಿಂಗ್ ಸರ್ವಿಸ್) ಬಲ್ಪ್‌ಗಳು ಎಂದು ಹೆಸರು. ಗುಣಮಟ್ಟದ ನಿಯಮಗಳ ಪ್ರಕಾರ ಇವು ಕನಿಷ್ಟ ಪಕ್ಷ 960 ಗಂಟೆಗಳು ಉರಿಯಬೇಕು. (ಅಂದರೆ ದಿನಕ್ಕೆ ಸರಾಸರಿ 4 ತಾಸು ಉರಿಸಿದರೆ ಅವು 240 ದಿನಗಳು ಆಥವಾ 6 ತಿಂಗಳುಗಳ ಆವಧಿ ಉರಿಯಬೇಕು) ಈ ವಿಚಾರ ಬಹಳಷ್ಟು ಜನರಿಗೆ ತಿಳಿದಿಲ್ಲ.

ಈ ಹಿನ್ನೆಲೆಯಲ್ಲಿ ಅಹ್ಮದಾಬಾದಿನ ಕನ್ಸೂಮರ್ ಎಜುಕೇಶನ್ ಆಂಡ್ ರೀಸರ್ಚ್ ಸೊಸೈಟಿ 16 ಬ್ರಾಂಡ್ ಗಳ ಬಲ್ಪ್‌ಗಳ ಪರೀಕ್ಷೆ ನಡೆಸಿತು. ಆಂಕರ್, ಬಜಾಜ್, ಸೀಮಾ ಸುಪರ್, ಕ್ರಾಂಪ್ಟನ್, ಡೈಮಂಡ್, ಆಮರ್ ಜ್ಯೋತಿ, ಜಿಇ  ಕ್ರಿಷ್ಟಲ್ ಕ್ಲಿಯರ್, ಖ್ಯೆತಾನ್, ಮೈಸೂರ್, ಓಸ್ರಂ ಕ್ಲಾಸಿಕ್ ಕ್ಲಿಯರ್, ಫಿಲಿಪ್ಸ್ ಕ್ಲಾಸಿಕ್ ಟೋನ್ ಕ್ಲಿಯರ್, ಸೂರ್ಯ ಸುಪರ್, ಸಿಲ್ವಾನಿಯಾ ಲಕ್ಷ್ಯಣ್ ಮತ್ತು ವಿಪ್ರೊ. ಇವೆಲ್ಲ 230 ವೋಲ್ಲೇಜಿನ ಬಲ್ಪ್‌ಗಳು. ಇವಲ್ಲದೆ 250 ವೋಲ್ಠೇಜಿನ ಓರಿಯಂಟ್ ಮತ್ತು ಪ್ರಕಾಶ್ ಲೈಟ್ಸ್ ಬಲ್ಪ್‌ಗಳನ್ನು ಪರೀಕ್ಷಿಸಿದರು.

ಈ ಎಲ್ಲ ಜಿಎಲ್ಎಸ್ ಬಲ್ಪ್‌ಗಳಲ್ಲಿ ಐಎಸ್ಐ ಆಂಕಿತ ಛಾಪಿಸಲಾಗಿತ್ತು. ಯಾಕೆಂದರೆ ಭಾರತದಲ್ಲಿ ಈ ಬಲ್ಪ್‌ಗಳಿಗೆ ಬಿಐಎಸ್ (ಬ್ಯೂರೋ ಅಥ್ ಇಂಡಿಯನ್ ಸ್ವಾಂಡರ್ಡ್ಸ್) ಸರ್ಟಿಫೀಕೇಶನ್ ಕಡ್ಡಾಯ. ಇವನ್ನು ಬಿಐಎಸ್  ಇಂಡಿಯನ್ ಸ್ಟಾಂಡರ್ಡ್ಸ್ ಐಎಸ್ 410-1976 ಆನುಸಾರ ಗುಣಮಟ್ಟ ಪರೀಕ್ಷೆಗೆ ಒಳಪಡಿಸಲಾಯಿತು. ಆ ಸ್ಟಾಂಡರ್ಡಿನ ಪ್ರಕಾರ ಪ್ರತಿಯೊಂದು ಬ್ರಾಂಡಿನ ನಿರ್ದಿಷ್ಟ ಸಂಖ್ಯೆಯ ಬಲ್ಪ್‌ಗಳನ್ನು ಮೂರು ವಿಧದ ಪರೀಕ್ಷೆಗಳಿಗೆ ಒಡ್ಡಲಾಯಿತು. ಪ್ರತಿಯೊಂದು ಬ್ರಾಂಡಿಗೆ ಸಂಬಂಧಿಸಿ ಮಾರ್ಕಿಂಗ್ ಮತ್ತು ಇತರ ಗುಣಲಕ್ಷಣಗಳ ಬಗ್ಗೆ 35 ಬಲ್ಪ್‌ಗಳನ್ನು ಆರಂಭದ ಬೆಳಕಿನ (ಲ್ಯುಮೆನ್) ಮತ್ತು ಬಳಸುವ ವಿದ್ಯುತ್ ವಾಟ್ ಗಳ ಬಗ್ಗೆ 25 ಬಲ್ಪ್‌ಗಳನ್ನು ಹಾಗೂ ಬಾಳ್ವಿಕೆ ಬಗ್ಗೆ 20 ಬಲ್ಪ್‌ಗಳನ್ನು ಪರೀಕ್ಷಿಸಲಾಯಿತು.

ಬಾಳ್ವಿಕೆ ಪರೀಕ್ಷೆ
ಒಂದು ಬಲ್ಪ್‌ಒಟ್ಟು ಎಷ್ಟು ತಿಂಗಳು ಉರಿಯುತ್ತದೆ ಎಂಬುದೇ ಬಳಕೆದಾರರಿಗೆ ಮುಖ್ಯ ವಿಷಯ. ಪ್ರತಿಯೊಂದು ಬ್ರಾಂಡಿನ 20 ಸ್ವಾಂಪಲ್ ಬಲ್ಪ್‌ಗಳನ್ನು ಆಂದರೆ 320 ಬಲ್ಪ್‌ಗಳನ್ನು ನಮೂದಿತ ವೋಲ್ಟೇಜಿನಲ್ಲಿ ಉರಿಸುವ ಮೂಲಕ ಆವುಗಳ ಬಾಳ್ವಿಕೆ ಪರೀಕ್ಷಿಸಲಾಯಿತು. ಆ ಸ್ಸಾಂಡರ್ಡಿನ ಪ್ರಕಾರ ಯಾವುದೇ ಬಲ್ಪ್‌ ಕನಿಷ್ತ 1,250
ಗಂಟೆಗಳು ಉರಿಯತಕ್ಕದ್ದು. ಆವನ್ನು ಪ್ರತಿದಿನವೂ ತಲಾ 15 ನಿಮಿಷಗಳ ಅವಧಿಗೆ ಎರಡು ಬಾರಿ ಸ್ವಿಚ್ ಆಫ್ ಮಾಡಲಾಗುತ್ತಿತ್ತು. ಒಟ್ಟು ಉರಿಸಿದ ಗಂಟೆಗಳನ್ನು ಗಣಿಸುವಾಗ ಈ ಅವಧಿಯನ್ನು ಲೆಕ್ಕ ಹಾಕಲಿಲ್ಲ.

ಬಾಳ್ವಿಕೆಗೆ ಸಂಬಂಧಿಸಿದಂತೆ ಬಲ್ಪ್‌ಗಳ ಬೆಳಕಿನ ಪರೀಕ್ಷೆಯನ್ನು ಜರಗಿಸಲಾಯಿತು. ಬಲ್ಪ್‌ಗಳಲ್ಲಿ ವೋಲ್ಟೇಜ್  ಮುದ್ರಿಸಿರುತ್ತಾರೆ ಆಲ್ಲವೇ? ಆ ವೋಟ್ಟೇಜಿನಲ್ಲಿ ಬಲ್ಪನ್ನು ಮೊದಲ ಬಾರಿ ಉರಿಸಿದಾಗ ಎಷ್ಟು ಲ್ಯುಮೆನ್ (ಬೆಳಕನ್ನು ಅಳೆಯುವ ಫಟಕ) ಬೆಳಕು ನೀಡಿತು ಎಂದು ಆಳೆಯಲಾಯಿತು. ಅದೇ ಬಲ್ಪ್‌ 750 ಗಂಟೆಗಳು ಉರಿದಾಗ ನೀಡುವ ಬೆಳಕನ್ನು ಅಳೆಯಲಾಯಿತು. ಈ ಬೆಳಕು, ಆರಂಭದ ಬೆಳಕಿನ ಪರಿಮಾಣದ ಶೇ. 85ಕ್ಕಿಂತ ಕಡಿಮೆ ಇರಬಾರದು. ಈ ಪರೀಕ್ಷೆಯಲ್ಲಿ ಎಲ್ಲ ಬ್ರಾಂಡ್ಗಳ ಸ್ಯಾಂಪಲ್ ಬಲ್ಪ್‌ಗಳೂ ಪಾಸಾದವು.

ಅನಂತರದ ಹಂತದಲ್ಲಿ ಸುಟ್ಟು ಹೋಗದೆ ಉಳಿದಿದ್ದ ಎಲ್ಲ ಬಲ್ಪ್‌ಗಳನ್ನು ತಲಾ 1,250 ಗಂಟೆಗಳವರೆಗೆ ಉರಿಸಲಾಯಿತು. ಹೀಗೆ ಉರಿಸಿ, 20 ಬಲ್ಪ್‌ಗಳ ಸರಾಸರಿ ಬಾಳ್ವಿಕೆ ಲೆಕ್ಕ ಹಾಕಿದಾಗ ಅದು 950 ಗಂಟೆಗಳಿಗಿಂತ ಕಡಿಮೆ ಇರಬಾರದು . ಇದು ಸ್ಸಾಂಡರ್ಡ್. ಆಂಕರ್, ಬಜಾಜ್, ಕ್ರಾಂಪ್ಟನ್ ಮತ್ತು ಇಐಇ ಅಮರ್ ಜ್ಯೋತಿ ಬಲ್ಪ್‌ಗಳು ಈ ಪರೀಕ್ಷೆಯಲ್ಲಿ ಪಾಸಾಗಲಿಲ್ಲ.

ಪರೀಕ್ಷೆಯಲ್ಲಿ 1,250 ಗಂಟೆಗಳ ವರೆಗೆ ಉರಿದ ಬಲ್ಪ್‌ಗಳು ಒಟ್ಟು ಎಷ್ಟು ಗಂಟೆಗಳ ಕಾಲ ಉರಿಯುತ್ತವೆ ಎಂಬ ಕುತೂಹಲದಿಂದ ಸಿಇಆರ್ ಸೊಸೈಟಿ ಅವನ್ನು ಉರಿಸುತ್ತಲೇ ಹೋಯಿತು. ಇದರ ಫಲಿತಾಂಶ ಹೀಗಿದೆ : 230 ವೋಲ್ಟೇಜಿನ ಬಲ್ಪ್‌ಗಳಲ್ಲಿ ಸರಾಸರಿ ಗರಿಷ್ಠ ಬಾಳ್ವಿಕೆ ಜಿಇ ಬ್ರಾಂಡಿನ ಬಲ್ಪ್‌ಗಳದ್ದು. 1,481.31 ಗಂಟೆಗಳು. ಎರಡನೆಯ ಸ್ಥಾನ 1.448.91 ಗಂಟೆಗಳ ಸರಾಸರಿಯ ಸಿಲ್ವಾನಿಯಾ ಲಕ್ಷ್ಯಣ್ ಬಲ್ಪ್‌ಗಳ ಪಾಲಾಯಿತು. 250 ವೋಲ್ಟೇಜ್ ವರ್ಗದಲ್ಲಿ ಪ್ರಕಾಶ್ ಲೈಟನ ಬಲ್ಪ್‌ಗಳು 1,402.66 ಗಂಟೆಗಳ ಸರಾಸರಿ ದಾಖಲಿಸಿದವು.

ಸುಟ್ಟು ಹೋಗುವ ಬಲ್ಪ್‌ಗಳ ಬಗ್ಗೆ ಸ್ಟಾಂಡರ್ಡ್ ಏನೆನ್ನುತ್ತದೆ? 700 ಗಂಟೆಗಳಿಗಿಂತ ಕಡಿಮೆ ಉರಿಯುವ ಬಲ್ಪ್‌ಗಳು ಮತ್ತು 750 ಗಂಟೆಗಳು ಉರಿದೊಡನೆ ನಿಗದಿತ ಬೆಳಕು ನೀಡದಿರುವ ಬಲ್ಪ್‌ಗಳು ಇವೆರಡರ ಒಟ್ಟು ಸಂಖ್ಯೆ (20 ಸ್ಯಾಂಪಲ್ ಬಲ್ಪ್‌ಗಳಲ್ಲಿ) 4 ಮೀರಬಾರದು. ಕ್ರಾಂಪ್ಪನ್ ಬ್ರಾಂಡಿನ 7 ಬಲ್ಪ್‌ಗಳು ಮತ್ತು ಬಜಾಜ್ ಬ್ರಾಂಡಿನ 5 ಬಲ್ಪ್‌ಗಳು 700 ಗಂಟೆಗಳು ಉರಿಯುವ ಮುನ್ನವೇ ಸುಟ್ಟುಹೋದವು.

ಬೆಳಕು
ಬಾಳ್ವಿಕೆ ದೀರ್ಘವಾಗಿರಬೇಕಲ್ಲದೆ ಬಲ್ಪಿನ ಬೆಳಕೂ ಪ್ರಕಾಶಮಾನವಾಗಿರಬೇಕು. ಪ್ರತಿಯೊಂದು ಬ್ರಾಂಡಿನ 25 ಬಲ್ಪ್‌ಗಳನ್ನು ಪರೀಕ್ಷೆ ಮಾಡಲಾಯಿತು. 60 ವಾಟ್ಸ್ ಮತ್ತು 230 ವೋಲ್ಟೇಜಿನ ಬಲ್ಪಿನ ಆರಂಭದ ಬೆಳಕು 646.35 ಲ್ಯುಮೆನ್ ಗಿಂತ ಕಡಿಮೆ ಇರಬಾರದು. 60 ವಾಟ್ಸ್ ಹಾಗೂ 250 ವೋಲ್ಟೇಜಿನ ಬಲ್ಪಿನ ಆರಂಭದ ಬೆಳಕು 646.35
ಲ್ಯುಮೆನ್ ಗಿಂತ ಕಡಿಮೆ ಆಗಬಾರದು. ಖಯತಾನ್ ಹೊರತಾಗಿ ಇತರ ಎಲ್ಲ ಬ್ರಾಂಡಿನ ಬಲ್ಪ್‌ಗಳು ಅಷ್ಟು ಬೆಳಕು ನೀಡಿದವು. ಆದರ ಖೈತಾನಿನ ಬಲ್ಪ್‌ಗಳಿಗೆ ಭಾರೀ ಸೋಲು. ಅದರ 25 ಸ್ಯಾಂಪಲ್ ಬಲ್ಪ್‌ಗಳಲ್ಲಿ 24 ಬಲ್ಪ್‌ಗಳು ಇಷ್ಟು ಬೆಳಕು ನೀಡಲಿಲ್ಲ. ಆವುಗಳ ಆರಂಭದ ಬೆಳಕು660.3 ಲ್ಯುಮೆನ್ಗಿಂತ ಕಡಿಮೆ ಇತ್ತು. ಸ್ಟಾಂಡರ್ಡಿನ ಪ್ರಕಾರ ಜಾಸ್ತಿಯೆಂದರೆ 4 ಬಲ್ಪ್‌ಗಳು ಈ ಪರೀಕ್ಷೆಯಲ್ಲಿ ಆನುತ್ತೀರ್ಣವಾಗಬಹುದು.

1,250 ಗಂಟೆಗಳ ಬಳಿಕ
ಪರೀಕ್ಷೆಯಲ್ಲಿ 1,250 ಗಂಟೆಗಳು ಉರಿದ ಬಲ್ಪ್‌ಗಳನ್ನು, ಅನಂತರ ಅವು ನೀಡುವ ಬೆಳಕೆಷ್ಟು ಎಂಬ  ಕುಕೂಹಲದಿಂದ ಇನ್ನಷ್ಟು ಉರಿಸಲಾಯಿತು. (ಸ್ಟಾಂಡರ್ಡಿನಲ್ಲಿ ಈ ಪರೀಕ್ಷೆ ಇಲ್ಲ). ಆ ಎಲ್ಲ ಬಲ್ಪ್‌ಗಳ ಬೆಳಕು ಆರಂಭದ ಬೆಳಕಿನ ಶೇ. 84 ರಿಂದ ಶೇ. 94 ಪ್ರಮಾಣದಲ್ಲಿತ್ತು. ಆಂಕರ್ ಮತ್ತು ಕ್ರಾಂಪ್ಟನ್ ಬ್ರಾಂಡಿನ ಬಲ್ಪ್‌ಗಳನ್ನು ಈ ರೀತಿ ಪರೀಕ್ಷಿಸಲು ಸಾಧ್ಯವಾಗಲಿಲ್ಲ. ಯಾಕೆಂದರೆ ಆವುಗಳ ಎಲ್ಲ 20 ಸ್ಯಾಂಪಲ್ ಬಲ್ಪ್‌ಗಳೂ ಬಾಳ್ವಿಕೆ ಪರೀಕ್ಷೆಯಲ್ಲಿ 1,260ಗಂಟೆಗಳ ಮುನ್ನವೇ ಸುಟ್ಟುಹೋದವು.

ಆರಂಭದ ವಿದ್ಯುತ್ ಬಳಕೆ
ಯಾವುದೇ ವಿದ್ಯುದುಪಕರಣದ ಬಳಕೆಯ ಪ್ರಧಾನ ಅಂಶ ಆದರ ವಿದ್ಯುತ್ ಬಳಕೆ. ನಾವು ಉರಿಸುವ ಬಲ್ಪ್‌ಹೆಚ್ಚು
ವಿದ್ಯುತ್ ಕಬಳಿಸಿದರೆ ನಮ್ಮ ವಿದ್ಯುತ್ ಬಿಲ್ ಜಾಸ್ತಿಯಾಗುತ್ತದೆ. ಸ್ವಾಂಡರ್ಡ್ ಏನೆನ್ನುತ್ತದೆ? ಅದರ ಪ್ರಕಾರ 60 ವಾಟ್ಗಳ ಬಲ್ಪ್‌ ಉರಿಸಲು 62.9 ವಾಟ್ಗ್ಟಳಿಗಿಂತ ಜಾಸ್ತಿ ವಿದ್ಯುತ್ ಬಳಕೆ ಆಗಬಾರದು. ಜೊತೆಗೆ 25 ಬಲ್ಪ್‌ಗಳನ್ನು ಪರೀಕ್ಷಿಸತಕ್ಕದ್ದು ಹಾಗೂ ಇವುಗಳಲ್ಲಿ ಮಿತಿಗಿಂತ ಜಾಸ್ತಿ ವಿದ್ಯುತ್ ಬಳಸುವ ಬಲ್ಪ್‌ಗಳ ಸಂಖ್ಯೆ 4 ದಾಟಬಾರದು.

ಈ ಪರೀಕ್ಷೆಯಲ್ಲಿಯೂ ಖ್ಯೆತಾನ್ ಬಲ್ಪ್‌ಗಳು ಸೋತವು. ಅದರ ಬಲ್ಪ್‌ಗಳ ಬೆಳಕು ಕಡಿಮೆ. ಆದರ ಆವು ಬಳಸಿದ ವಿದ್ಯುತ್ ಆಧಿಕ! ಖೈತಾನಿನ 25 ಸ್ವಾಂಪಲ್ ಬಲ್ಪ್‌ಗಳಲ್ಲಿ 18 ಈ ಪರೀಕ್ಷೆಯಲ್ಲಿ ಸೋತವು. ಇತರ ಬ್ರಾಂಡ್ ಗಳ ಬಲ್ಪ್‌ಗಳ ವಿದ್ಯುತ್ ಬಳಕೆ ನಿಗದಿತ ಮಿತಿಯೊಳಗಿತ್ತು.

ಜಿಎಲ್ಎಸ್ ಬಲ್ಪ್‌ಗಳಲ್ಲಿ ಈ ಮಾಹಿತಿ ಮುದ್ರಸಬೇಕೆಂಬುದು ನಿಯಮ (ಬಲ್ಪ್‌ನಲ್ಲಿ ಮತ್ತು ಪ್ಯಾಕಿಂಗ್ ಪೊಟ್ಟಣದಲ್ಲಿ): ಉತ್ಪಾದಕರ ಗುರುತು, ಬಲ್ಪಿನ ವೋಲ್ಟೇಜ್, ಬಲ್ಪಿನ ವಾಟ್ಸ್, ಕಾಯ್ಲಿನ ವಿಧ, ಉತ್ಪಾದನಾ ದೇಶದ ಹೆಸರು. ಎಲ್ಲ ಬ್ರಾಂಡ್ಗಳ ಸ್ಯಾಂಪಲ್ಗಳಲ್ಲಿ ಇದನ್ನು ಪಾಲಿಸಲಾಗಿತ್ತು.

ಬಲ್ಪಿನ ಆಳತೆ, ಇನ್ಸುಲೇಶನಿನ ಪ್ರತಿರೋಧ, ಸೋಲ್ಡರಿಂಗ್, ಬಲ್ಪಿನ ಲೋಹ ಭಾಗದ ಉಷ್ಣಾಂಶ ಏರಿಕೆ ಇತ್ಯಾದಿ ಆಂಶಗಳನ್ನು ಪರೀಕ್ಷಿಸಲಾಯಿತು. ಈ ವಿಚಾರದಲ್ಲಿ ಎಲ್ಲ ಬಲ್ಪ್‌ಗಳೂ ಕ್ರಮಬದ್ಧವಾಗಿದ್ದವು.

ಬಲ್ಪಿನ ಬೆಳಕಿನ ವೆಚ್ಚ
ಬಲ್ಪಿನಿಂದ ಬೆಳಕು ಪಡೆಯಲು ತಗಲುವ ವೆಚ್ಚ ಎಷ್ಟು? ಇದರ ಲೆಕ್ಕಾಚಾರ ಸುಲಭ. ಬಲ್ಪಿನ ಬೆಲೆ, ಬಲ್ಪ್‌1,000 ಗಂಟೆ ಉರಿಯಲು ಬಳಕೆಯಾಗುವ ವಿದ್ಯುತ್ ಮತ್ತು ವಿದ್ಯುತ್ತಿನ ಬೆಲೆ (ಕಿಲೋವಾಟ್ ಗೆ ರೂ. 4 ಎಂದು ಪರಿಗಣಿಸಿ) ಆಧಾರದಿಂದ ಇದನ್ನು ಲೆಕ್ಕ ಹಾಕಬಹುದು. ಈ ರೀತಿ ಗಣಿಸಿದಾಗ 1,000 ಗಂಟೆಗಳಿಗೆ ಕನಿಷ್ಠ ವೆಚ್ಚ ಓಸ್ರಂ ಕ್ಕಾಸಿಕ್ ಬಲ್ಪಿನದು ರೂ. 245.04 ಮತ್ತು ಗರಿಷ್ಠ ವೆಚ್ಚ ಖೈತಾನ್ ಬಲ್ಪಿನದು ರೂ. 262.76.

ಈ ಪರೀಕ್ಷಯ ಫಲಿತಾಂಶಗಳನ್ನು ಗಮನಿಸಿದಾಗ ಒಂದಂಶ ಖಚಿತವಾಗುತ್ತದೆ. ಮನೆ ಮನೆಯಲ್ಲಿ ದಿನ ದಿನವೂ ಬೆಳಕು ನೀಡುವ ಸಾದಾ ಬಲ್ಪ್‌ಗಳನ್ನು ಖರೀದಿಸುವಾಗ ಅದಕ್ಕಿಂತ ಮುಂಚೆ ನಿಮಗೆ ಅತಿ ದೀರ್ಫ ಬಾಳ್ವಿಕೆ ನೀಡಿದ ಬ್ರಾಂಡಿನ ಬಲ್ಪನ್ನೇ ಖರೀದಿಸುವುದು ಉತ್ತಮ ಅಲ್ಲವೇ?
ಉದಯವಾಣಿ 20.5.2004

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಒಬ್ಬೊಬ್ಬ ಸೂರ್ಯನ ಕೊಡಿ
Next post ನಗೆಡಂಗುರ-೧೩೦

ಸಣ್ಣ ಕತೆ

  • ಮುದುಕನ ಮದುವೆ

    ಎಂಬತ್ತುನಾಲ್ಕು ವರ್ಷದ ನಿವೃತ್ತ ಡಾಕ್ಟರ್ ಶ್ಯಾಮರಾಯರಿಗೆ ೩೮ ವರ್ಷದ ಗೌರಮ್ಮನನ್ನು ಮದುವೆಯಾದಾಗ ಅದು ವೃತ್ತಪತ್ರಿಕೆಗಳಲ್ಲಿ ದೊಡ್ಡ ಅಕ್ಷರಗಳಲ್ಲಿ ಬಂದು ಒಂದು ರೀತಿಯ ಆಶ್ಚರ್ಯ, ಕೋಲಾಹಲ ಎಬ್ಬಿಸಿತ್ತು. ಡಾ.… Read more…

  • ಅಜ್ಜಿಯ ಪ್ರೇಮ

    ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ಕಳ್ಳನ ಹೃದಯಸ್ಪಂದನ

    ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

cheap jordans|wholesale air max|wholesale jordans|wholesale jewelry|wholesale jerseys