ಸುಗ್ಗಿ ಕಾಲ ಬಂದೈತೆ
ಹಿಗ್ಗನ್ನು ತಂದು ಕೊಟ್ಟೈತೆ
ಸಂಕ್ರಾಂತಿ ಮೇಳ ಹಿಂಗೊಂದು ತಾಳ
ಹೆಜ್ಜೆಯ ಗೆಜ್ಜೆಗೆ ಕಟ್ಟೈತೆ ||
ತಂದಾನಿ ತಾನೊ ತಾನಿ ತಂದಾನೋಽಽಽಽ

ಮಲ್ಲಯ್ಯನ ನೆನೆದು
ಸೋನೆ ಮುತ್ತಲ್ಲಿ ಮುತೈದೆ ಕುಂತು
ರಾಶಿ ರಾಶಿ ರಾಗೀಯ ಬೀಸೈತೆ
ರಾಗ ತಂದು ಕೊಟ್ಟೈತೆ ||
ತಂದಾನಿ ತಾನೊ ತಾನಿ ತಂದಾನೋಽಽಽಽ

ಭತ್ತದ ಕೊಯ್ಲು ತೂಗಿ
ಕಬ್ಬಿನ ಹಾಲು ಸುರಿದೈತೆ
ಜೋಕಾಲಿ ಹಾಡನ್ನು ಹಾಡೈತೆ ||
ತಂದಾನಿ ತಾನೋ ತಾನಿ ತಂದಾನೋಽಽಽಽ

ಹಾಗೊಂದು ಕಾಲ ಹೀಗೊಂದು ಕಾಲ
ಆಡಿಪಾಡಿ ಚಿಗುರ ಬೆಳ್ಳಿ ಚುಕ್ಕಿ
ತಂದು ಕೊಟ್ಟೈತೆ ಮುತ್ತಿನ ಸಾಲು
ತುಂಬೈತೆ ಹಿಗ್ಗನ್ನು ತಂದು ಕೊಟ್ಟೈತೆ ||
ತಂದಾನಿ ತಾನೋ ತಾನಿ ತಂದಾನೋಽಽಽಽ

ಅಂಗೈಲಿ ಸ್ವರ್ಗವ ತೋರಿ
ಅಂಬರದಾಗೆ ಸೆರಗ ಹಾಸೈತೆ
ಸೊಬಗನ್ನು ತಂದು ಕೊಟ್ಟೈತೆ
ಸುವ್ವಿ ಸುವ್ವಾಲೆ ಹಾಡೈತೆ ||
ತಂದಾನಿ ತಾನೋ ತಾನಿ ತಂದಾನೋಽಽಽಽ
*****

Latest posts by ಹಂಸಾ ಆರ್‍ (see all)