ಎಲ್ಲಿ ನೋಡಿದಲ್ಲೆಲ್ಲ ನೀರೇ ನೀರು! ತಾನೇ ತಾನಾಗಿ ಮೆರೆಯುವ ಮೊರೆಯುವ ನೀರು! ನನೆ ಕೊನೆಯಿಲ್ಲದ, ಚಿರಂಜೀವಿಯಾದ ನೀರು! ಮುಗಿಲನಣಕಿಸುವ ದಟ್ಟನೀಲಿಯಾದ ನೀರು! ಅಹಾ! ನೀರೆ! ನಿನ್ನ ಸೌಭಾಗ್ಯವೇ ಸೌಭಾಗ್ಯ! ನಿನ್ನ ಚಿರಜೀವಿಪಟ್ಟವೇ ಪಟ್ಟ! ತಬ್ಬುತಿರು...

ಒಂದಂಕಿ ಗೊಳಗೊಳಕಿ ಯಾಡಂಕಿ ಮುಳಗಳಿಕಿ ಮೂರಂಕಿ ಮುತ್ತೈದಿ ಕೇಳು ಗುರುವೆ ನಾಕ೦ಕಿ ನೆಲ್ಲಕ್ಕಿ ಐದ೦ಕಿ ಪಲ್ಲಕ್ಕಿ ಪಂಚಲಿಂಗದ ಪಾದಾ ತೋರು ಗುರುವೆ ಸರದಾರ ದೊರಿಸಾಮಿ ಮುಕ್ಕಣ್ಣ ಗುರುಸಾಮಿ ಎಲ್ಲಿ ಬಿಟ್ಟೆಲ್ಲೀಗೆ ಪಾರೋತಿನಾ ಚಿನ್ನಿ ಸಕ್ಕರಿ ಚಲುವಿ ಚ...

ಎನಿತುಕಾಲ ಹುದುಗಿ ಕೊಳೆವುದು ಎನಿತುಕಾಲ ನೆಲದಲಡಗಿ, ಕೊಳಚೆಯಾಗಿ ಕಳೆವುದು? ಮಳೆಯ ಹನಿಯು ತಟ್ಟಿ ಕರೆದರೂ ಬೆಳಕ ಕಿರಣ ಇಣಿಕಿ ನಡೆದರೂ ಮನದ ಆಸೆ ಕೊನರದಿಹುದು ಕೊಳೆಕೊಳೆವುದು ಕಸದಲಿ ಹಿರಿಯ ಕನಸ ಕಂಡಿತಾದರೂ ಚಿಗಿದು ಬೆಳೆಯ ಬಯಸಿತಾದರೂ ಕಸದ ರಾಶಿ ...

ಅಹಾ ನನ್ನ ಚೆಂದದ! ಚಂದಿರೆಯೆ! ಕುಂದದ ಕುಡಿಮಲರೆ! ಅಹಾ! ನಾನು ಕೈಕೊಂಡ ಜಿದ್ದೇ! ನನ್ನ ಮೈಗೊಂಡ ಮುದ್ದೆ! ಅಧರದಲ್ಲಿ ಮುದ್ದಾಗಿ ಉದರದಲ್ಲಿ ಮುತ್ತಾಗಿ ಇದಿರು ಮೂರ್‍ತಿಗೊಂಡು ನಿಂತ ಜೀವದ ಹೂವೇ! ಬ್ರಹ್ಮಾಂಡವನೊಳಗೊಂಡ, ನಾನು ಹೊತ್ತು ಹೆತ್ತ-ಪಿಂಡವ...

ತಪ್ಪು ಸರಿಯಾವುದೆಂದೆಂಬ ಚರ್ಚೆಯೊ ಳು ಪರರ ಗೆಲಿದುಪಯೋಗ ಬಹಳಿಲ್ಲವಾ ತಪ್ಪಾಗದಂದದ ಜೀವನವೆಮ್ಮದಾಗದಿರೆ ತಪ್ಪು ತಿದ್ದಲಿಕೆಂದೆಷ್ಟೊಂದು ವಿಶ್ವದಿನವಂತೆ ಶಪಿಸಿದೊಡೇನು ಬಿರುಸಿನಲಾ ಮೇಣಕಾಗದವಾ – ವಿಜ್ಞಾನೇಶ್ವರಾ ***** ಮೇಣಕಾಗದ = Plasti...

ಆದಿಯಲಿ, ದೈವಾಜ್ಞೆಯಲ್ಲಿ ಬ್ರಿಟನ್ ಭೂಮಾತೆ ನೀಲಜಲರಾಶಿಯಿಂದುದ್ಭವಿಸಿದಂದು, ಆದರಿಸಿ, ಅಭಿಮಾನದೇವತೆಗಳೊಲಿದು, ದಯ ಪಾಲಿಸಿದರಾಕೆಗೀ ಶಾಸನವ ಹರಸಿ- “ಆಳೌ, ಬ್ರಿಟಾನಿಯಾ! ಆಳ ತೆರೆಗಳನು! ಎಂದಿಗೂ ಬ್ರಿಟನನಡಿಯಾಳೆನಿಸಿಕೊಳನು!” ನಿನ್ನ ಪುಣ್...

ನಂಬಬೇಡ ಮನುಜ ಮನಸಿಗೆ ಮನವು ನಿನ್ನಯ ಸವಾರಿ ಲಗಾಮು ನಿನ್ನ ಕೈಯಲ್ಲಿರಲಿ ಇಲ್ಲದಿದರೆ ಆಗುವುದು ಬಲುಭಾರಿ ನಿನ್ನಂತೆ ಮನವು ನಟಿಸುವುದು ಮತ್ತೆ ನಿನ್ನ ವಶೀಕರಿಸುವುದು ಅದು ಹೇಳಿದಂತೆ ಕುಣಿಯುವಿ ಮತ್ತೆ ನಿನ್ನ ಒಡೆತನ ಅದು ಅಪಹರಿಸುವುದು ಯುಗಯುಗಕ್ಕ...

ಪಕ್ಕದ ಮನೆ ಹುಡುಗ ರಂಗನಾಥ ಅವನು ಇನ್ನೂ ಅವಿವಾಹಿತ ವಯಸ್ಸು ಆಗಿದೆ ಮೂವತ್ತಾರು ಇವನೊಪ್ಪದ ಹುಡುಗಿಯರು ನೂರಾರು ಇವನನ್ನೊಪ್ಪಿದ ಹುಡುಗಿಯರು ಕೆಲವು ಅವರನ್ನು ತಿರಸ್ಕರಿಸಲು ಕಾರಣ ಹಲವು ಕೆಲವರದು ಮೂಗು ಸೊಟ್ಟ; ಹಲ್ಲುಬ್ಬು ಇನ್ನೂ ಕೆಲವು ಹುಡುಗಿಯ...

ಕೆಲವು ದೇಶಗಳು ರಶಿಯದ ಹಾಗೆ ಬಹಳ ಬೃಹತ್ತಾಗಿ ಕೆಲವು ಮಾಲಿಯ ಹಾಗೆ ಸಂಕ್ಷಿಪ್ತ ದೊಡ್ಡ ದೇಶದ ಜನ ಒಬ್ಬರಿಗೊಬ್ಬರು ಅಪರಿಚಿತ ಒಂದು ಕೊನೆಯಿಂದ ಇನ್ನೊಂದು ಕೊನೆ ತನಕ ತಲುಪಲು ದಿನಗಳು ವಾರಗಳು ಮಾಸಗಳು ಬೇಕು ಪ್ರತಿ ಯಾತ್ರೆಯೂ ಒಂದು ಮಹಾಯಾತ್ರೆ ಅಥವಾ...

ಉಗ್ರನೊಳಗುಗ್ರನ ಶಾಂತನೊಳು ಶಾಂತನ ಉದಾಸೀನನೊಳುದಾಸೀನನನ್ನು ಒಲಿವವರೊಳೆತ್ತುವನ ಹಗೆವವರೊಳಿಳಿಸುವನ ಇಂತೆಲ್ಲಪರಿಯೊಳೂ ಕಾಂಬನನ್ನು ಅದು ಅವನು ಅವಳೆಂಬ ಬಗೆಬಗೆಯ ನೆಲೆಯೊಳಗೆ ಸೊಗದುಕ್ಕಗಳ ನನಗೆ ತೋರುತಿಹನ ಕುರಿತು ಚಿಂತಿಸೆ ಬೆರಗ ತರುವವನ ಎಂತು ನಾ...

1...34567...876

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...