ಮೂಲ: ಟಾಮಸ್ ಗುಡ್‌ಮನ್ ಡ್ರೆಸನ್ (ಐಸ್‌ಲ್ಯಾಂಡಿಕ್ ಕವಿ)
ಎಲ್ಲಿ ಶುರುವಾಯಿತೋ ಈ ಯಾತ್ರೆ
ಯಾರೂ ತಿಳಿದಂತಿಲ್ಲ;
ಯಾರ ನಿರ್ದೇಶನ ಇದಕ್ಕೆ
ಎನ್ನುವುದೂ ಗೊತ್ತಿಲ್ಲ;
ಹಾಗಿದ್ದೂ ಮೆರವಣಿಗೆಗೆ
ಎಲ್ಲಾ ಸೇರಿದ್ದೇವೆ.
ಕೆಲವರು ಅನಾಸಕ್ತರು,
ಹಾಗೇ ಉತ್ಸಾಹಿಗಳೂ ಇದ್ದೇವೆ.
ಗಂಟುಮೂಟೆ ಸರಕು,
ಮರುಧರೆಯ ಭಯಾನಕ ಪಯಣ;
ಹೆಜ್ಜೆ ಮೇಲೆ ಹೆಜ್ಜೆ ಇಟ್ಟು
ಇಷ್ಟಿಷ್ಟೇ ಸಾಗುತ್ತದೆ.
ಹೆಳವನ ನಿಧಾನಗತಿಯಲ್ಲಿ
ಯುಗಯುಗ ಸವೆಸುತ್ತ ನಡೆದ
ಈ ಮಹಾಯಾತ್ರೆಯ ಗುರಿ
ಸಾವಿನ ಬಸಿರಲ್ಲಿದೆ.
*****















