
ಅಸ್ತಿತ್ವ ಮರೆತು ವ್ಯಕ್ತಿತ್ವ ಕಳೆದು ಇನ್ನೊಂದು ಅಭಿನಯಕ್ಕೆ ಸಿದ್ದವಾಗುತ್ತದೆ ಹಸಿವೆ. ಅದಕ್ಕೆ ಗಳಿಗೆಗೊಂದು ಪಾತ್ರ ರೊಟ್ಟಿ ನೆಪ ಮಾತ್ರ. *****...
ಎಚ್ಚರಿಸುತ್ತಿರು ನೀನು ಎನ್ನಂತರಾತ್ಮವೇ ನಾ ಎಡವುವಲ್ಲಿ, ನಡೆಯುವಾಗ ಹೆಜ್ಜೆ ತಪ್ಪಿದಲ್ಲಿ| ಅನ್ಯರ ಅಂತರಂಗ ಅರಿಯದೆ ಅವರ ಪ್ರಶ್ನಿಸುವಲ್ಲಿ ಅವರ ಆಳವ ತಿಳಿಯದೆ ಮೂರ್ಖತನದಿ ಅಳೆಯುವಲ್ಲಿ|| ಧೈರ್ಯ ತುಂಬುತ್ತಿರು ನೀನು ನಾ ಅಧೈರ್ಯನಾಗಿ ನಿಂತಲ್ಲಿ|...
ಇಂತಿಂತಿಷ್ಟೇ ಔಷದಿಗೆಂದು ಖರ್‍ಚಿಸಿ ಅಷ್ಟಷ್ಟೇ ಉಳಿಸಿಕೊಳ್ಳುತ್ತಾರೆ ನಾಳೆಯ ಊರುಗೋಲು ಕೊಳ್ಳಲು – ನಾಡದ್ದಿನ ಹೊಲಸು ತೊಳೆಯುವವರಿಗೆ ಕೊಡಲು – ನಂತರ, ಹೆಣ ಹೊರುವವರಿಗೊಂದಿಷ್ಟು ಇಟ್ಟು ತರಸ್ಕರಿಸಿಕೊಳ್ಳುವ ಮಕ್ಕಳು ಮೊಮ್ಮಕ್ಕಳಿಂದ...
ಕಡಲ ಕರುಳು ಬಳ್ಳಿಯಲ್ಲರಳಿದ ಹೂ-ಮಗನೆ ಎಲೆ ಎಲೆ ಅಲೆಯೊಳಗಣ ನಿತ್ಯ ಹರಿದ್ವರ್‍ಣನೆ ಅಂಬಿಗನೆ- ಹೇಳು ಆ ದಂಡೆಯಲ್ಲೇನಿದೆ? ಹುಟ್ಟಿನ ಹರಿಕಾರನೆ ಮತ್ಸ್ಯಕನ್ನಿಕೆಯ ಪ್ರಿಯಕರನೆ ಅಂಬಿಗನೆ- ಹೇಳು ಆ ದಂಡೆಯಲ್ಲೇನಿದೆ? ಸುಳಿಗಾಳಿಯ ಸನ್ಮಿತ್ರನೆ ಮಳಲ ಮಾನ...
ನಾವು ತಿನ್ನುವುದಕ್ಕೆ ಅನ್ನ ಕೇಳಿದೆವು ಅವರು ಹುಳ ಬಿದ್ದ ಅಕ್ಕಿ ಕೊಟ್ಟರು ನಾವು ಹುಳ ದೇವರಿಗೆ ಕೊಟ್ಟು ಅಕ್ಕಿಯನ್ನು ಕಣ್ಣಿಗೊತ್ತಿಕೊಂಡು ಅನ್ನ ಮಾಡಿ ಉಂಡೆವು! ಈಗ ಅವರು ತಿನ್ನುವ ಅನ್ನಕ್ಕೇ ಹುಳ ಬಿದ್ದಿದೆ ಅವರು ಹುಳುಗಳನ್ನು ನಿಷ್ಕಾರುಣ್ಯವಾಗ...
ಚಿತ್ರಗಳೆಲ್ಲಾ ಒಂದೇ ಚೌಕಟ್ಟಿಗೆ ಹೊಂದಿಕೊಳ್ಳುವಂತಿದ್ದರೆ ಈಟಿ ಬಿಲ್ಲುಗಳು ಸೆಟೆದುಕೊಳ್ಳದಿದ್ದರೆ ಮಲ್ಲಿಗೆಯ ಮಂಪರೇ ನೆಲಮುಗಿಲ ಹಬ್ಬಿನಿಂತಿದ್ದರೆ, ಹೀಗೆಲ್ಲ ಆಗುವಂತಿದ್ದರೆ, ಕನಸುಗಳ ಜೀವ ಚಿಗುತುಕೊಳ್ಳುವುದೇ ಹಾಗೆ ಗಾಜು ಗುಜ್ಜಿನ ಬೆಳಕಿಗಿಂತ...
ತಿಂಗಳಿತ್ತಲ್ಲ ಒಂದು ಕ್ಷಣ ಹಿಂದೆ ಆಕಾಶದ ಅಂಗಳ ತುಂಬ ಕಣ್ಣ ಮಿಣುಕಿಸುವ ನಗುವ ನಕ್ಷತ್ರಗಳೂ ಇದ್ದುವು ಎಣಿಕೆಗೆ ಸಿಗದ ಅಕ್ಷಯ ರೂಪಿಗಳು. ನೋಡ ನೋಡುತ್ತ ಕರಿಯ ಮೊಡಗಳೆದ್ದು ಹರಿಹಾಯ್ದು ಸರಿ ರಾತ್ರಿಯಲಿ ಮಳೆ ಬಂತೇ ಬಂತು ತಣ್ಣನೆ ಗಾಳಿ ಹಿತವಾದ ಸೀರ...













