ಇಂತಿಂತಿಷ್ಟೇ ಔಷದಿಗೆಂದು ಖರ್‍ಚಿಸಿ
ಅಷ್ಟಷ್ಟೇ ಉಳಿಸಿಕೊಳ್ಳುತ್ತಾರೆ
ನಾಳೆಯ ಊರುಗೋಲು ಕೊಳ್ಳಲು –
ನಾಡದ್ದಿನ ಹೊಲಸು
ತೊಳೆಯುವವರಿಗೆ ಕೊಡಲು –
ನಂತರ,
ಹೆಣ ಹೊರುವವರಿಗೊಂದಿಷ್ಟು ಇಟ್ಟು
ತರಸ್ಕರಿಸಿಕೊಳ್ಳುವ ಮಕ್ಕಳು
ಮೊಮ್ಮಕ್ಕಳಿಂದ
ಭಾರವಾಗದೇ ಭೂಮಿ ಸೇರಲು –
*****
ಇಂತಿಂತಿಷ್ಟೇ ಔಷದಿಗೆಂದು ಖರ್‍ಚಿಸಿ
ಅಷ್ಟಷ್ಟೇ ಉಳಿಸಿಕೊಳ್ಳುತ್ತಾರೆ
ನಾಳೆಯ ಊರುಗೋಲು ಕೊಳ್ಳಲು –
ನಾಡದ್ದಿನ ಹೊಲಸು
ತೊಳೆಯುವವರಿಗೆ ಕೊಡಲು –
ನಂತರ,
ಹೆಣ ಹೊರುವವರಿಗೊಂದಿಷ್ಟು ಇಟ್ಟು
ತರಸ್ಕರಿಸಿಕೊಳ್ಳುವ ಮಕ್ಕಳು
ಮೊಮ್ಮಕ್ಕಳಿಂದ
ಭಾರವಾಗದೇ ಭೂಮಿ ಸೇರಲು –
*****