ಯಲ್ಲಪ್ಪ ಟಿ

ಅಕ್ಟೋಬರ್‍ ೨, ೧೯೭೦ ರಂದು ಜನಿಸಿದ ಇವರು ಬೆಂಗಳೂರು ವಿಶ್ವವಿದ್ಯಾಲಯದಿಂದ ಎಂ.ಎ ಮತ್ತು ಎಂ.ಫಿಲ್ ಪದವಿಯನ್ನು ಪಡೆದಿದ್ದಾರೆ. ಇಪ್ಪತ್ತೆರಡರ ಅಳಲು ಇವರ ಪ್ರಬಂಧ ಸಂಕಲನ ಹಾಗು ಕಡಲಿಗೆ ಕಳಿಸಿದ ದೀಪ, ನವಿಲಿಗೆ ಬಿದ್ದ ಕತ್ತಲ ಕನಸು, ಕಣ್ಣ ಪಾಪೆಯ ಬೆಳಕು, ಮತ್ತು ಚಿಟ್ಟೆ ಮತ್ತು ಜೀವಯಾನ ಇವರ ಕವನ ಸಂಕಲನಗಳು. ಇವರಿಗೆ ೨೦೦೮ರ ‘ನಾಡೋಜ ಚೆನ್ನವೀರ ಕಣವಿ’ ಪ್ರಶಸ್ತಿ, ಸಂಕ್ರಮಣ ಕಾವ್ಯ ಸ್ಪರ್‍ಧೆಯ ಬಹುಮಾನ, ಸಾಹಿತ್ಯ ಸ್ಪರ್‍ಧೆಯ ಬಹುಮಾನ, ‘ಕಡಲಿಗೆ ಕಳಿಸಿದ ದೀಪ’ ಕೃತಿಗೆ ಕರ್‍ನಾಟಕ ರಾಜ್ಯ ಸಾಹಿತ್ಯ ಅಕಾಡಮೆ ಪ್ರಶಸ್ತಿ, ೨೦೦೮ನೇ ಸಾಲಿನ ಜಿ ಎಸ್ ಶಿವರುದ್ರಪ್ಪ ಕಾವ್ಯ ಪ್ರಶಸ್ತಿ ಲಭಿಸಿದೆ.
#ಕವಿತೆ

ಅವರು ಮತ್ತು ನಾವು

0

ನಾವು ತಿನ್ನುವುದಕ್ಕೆ ಅನ್ನ ಕೇಳಿದೆವು ಅವರು ಹುಳ ಬಿದ್ದ ಅಕ್ಕಿ ಕೊಟ್ಟರು ನಾವು ಹುಳ ದೇವರಿಗೆ ಕೊಟ್ಟು ಅಕ್ಕಿಯನ್ನು ಕಣ್ಣಿಗೊತ್ತಿಕೊಂಡು ಅನ್ನ ಮಾಡಿ ಉಂಡೆವು! ಈಗ ಅವರು ತಿನ್ನುವ ಅನ್ನಕ್ಕೇ ಹುಳ ಬಿದ್ದಿದೆ ಅವರು ಹುಳುಗಳನ್ನು ನಿಷ್ಕಾರುಣ್ಯವಾಗಿ ಕೊಂದುಬಿಟ್ಟು ಅನ್ನಕ್ಕಾಗಿ ದೇವರಿಗೇ ಕೈ ಚಾಚುತ್ತಿದ್ದಾರೆ! ಸಾಯುವಾಗ ನಾವು ಕುಡಿಯುವುದಕ್ಕೆ ನೀರು ಕೇಳಿದೆವು ಅವರು ಆಕಾಶದಲ್ಲಿ ನಿಂತು […]

#ಕವಿತೆ

ಹತ್ತಿ… ಚಿತ್ತ… ಮತ್ತು…

0

ಹಚ್ಚಿಟ್ಟ ಹಣತೆಯಲ್ಲಿ ಹೊಸೆದು ಬತ್ತಿಯಾಗಿರುವ ಹತ್ತಿ ಮಿಂದು ಮಡಿಯುಟ್ಟ ಭಕ್ತನಂತೆ ತೈಲದಲ್ಲಿ ಮುಳುಗಿ ತಮದ ಕತ್ತಲ ಸುಡುತ ಬೆಳಕ ಬಟ್ಟೆಯ ತೊಡುವ ಯೋಗಿಯಂತೆ! ತನ್ನೊಡಲ ನೂಲಿನಲೇ ಜೇಡ ತನ್ನ ಜೀವಜಾಲದ ಕೇಡ ತಾನೇ ಬಗೆದು ಪ್ರಾಣ ನೀಗುವಂತೆ ಹತ್ತಿಯ ಬೀಜದಂತೆ ಚಿತ್ತ ಹತ್ತಿ ಉರಿಯುವ ಬತ್ತಿಯಾಗಿ ಬತ್ತಿಯನೇ ಸುಡುವ ತೈಲವೂ ಆಗಿ ಹೊತ್ತಿ ಉರಿಯುವ ಬೆಳಕೂ […]