Day: October 24, 2020

#ಕವಿತೆ

ಮೊಟ್ಟೆ

0
ಸವಿತಾ ನಾಗಭೂಷಣ
Latest posts by ಸವಿತಾ ನಾಗಭೂಷಣ (see all)

ಪಂಚೇಂದ್ರಿಯಗಳಿಗೆ ಒಲಿದು ಅವು ಹೇಳಿದ ಹಾಗೆ ನಲಿದು ಕುಣಿ ಅಂದರೆ ಕುಣಿದು ಕಾಡಿ ಬೇಡಿ ಪಡೆದೆ ಮಿರಿಮಿರಿ ಮಿಂಚೊ ಮೊಟ್ಟೆ, ಕಿಚ್ಚಾ ಹಚ್ಚೊ ಮೊಟ್ಟೆ ಕಳ್ಳುಬಳ್ಳಿಯಾ ಹಂಗಿಲ್ಲದಾ ಮೊಟ್ಟೆ, ನಿಲುವು ನಡೆಯಿಲ್ಲದಾ ಮೊಟ್ಟೆ ಒತ್ತಿದರೂ ಒಡೆಯದೆ ಕುಟ್ಟಿದರೂ ಸಿಡಿಯದೆ ಮಂಕುಬೂದಿಯನೆರಚಿ ಮಿಕನನ್ನಾಗಿಸಿ ಮಣಿಸಿ ಬೆರಕಿ ಗುಣವ ಕಲಿಸಿ ನಕ್ಕಿತವ್ವಾ ಮೊಟ್ಟೆ ಮಿರ್‍ರನೆ ಮಿಂಚೊ ಮೊಟ್ಟೆ, ಮಾಯಾ […]

#ಕವಿತೆ

ಹತ್ತಿ… ಚಿತ್ತ… ಮತ್ತು…

0
ಅಕ್ಟೋಬರ್‍ ೨, ೧೯೭೦ ರಂದು ಜನಿಸಿದ ಇವರು ಬೆಂಗಳೂರು ವಿಶ್ವವಿದ್ಯಾಲಯದಿಂದ ಎಂ.ಎ ಮತ್ತು ಎಂ.ಫಿಲ್ ಪದವಿಯನ್ನು ಪಡೆದಿದ್ದಾರೆ.ಇಪ್ಪತ್ತೆರಡರ ಅಳಲು ಇವರ ಪ್ರಬಂಧ ಸಂಕಲನ ಹಾಗು ಕಡಲಿಗೆ ಕಳಿಸಿದ ದೀಪ, ನವಿಲಿಗೆ ಬಿದ್ದ ಕತ್ತಲ ಕನಸು, ಕಣ್ಣ ಪಾಪೆಯ ಬೆಳಕು, ಮತ್ತು ಚಿಟ್ಟೆ ಮತ್ತು ಜೀವಯಾನ ಇವರ ಕವನ ಸಂಕಲನಗಳು.

ಇವರಿಗೆ ೨೦೦೮ರ ‘ನಾಡೋಜ ಚೆನ್ನವೀರ ಕಣವಿ’ ಪ್ರಶಸ್ತಿ, ಸಂಕ್ರಮಣ ಕಾವ್ಯ ಸ್ಪರ್‍ಧೆಯ ಬಹುಮಾನ, ಸಾಹಿತ್ಯ ಸ್ಪರ್‍ಧೆಯ ಬಹುಮಾನ, ‘ಕಡಲಿಗೆ ಕಳಿಸಿದ ದೀಪ’ ಕೃತಿಗೆ ಕರ್‍ನಾಟಕ ರಾಜ್ಯ ಸಾಹಿತ್ಯ ಅಕಾಡಮೆ ಪ್ರಶಸ್ತಿ, ೨೦೦೮ನೇ ಸಾಲಿನ ಜಿ ಎಸ್ ಶಿವರುದ್ರಪ್ಪ ಕಾವ್ಯ ಪ್ರಶಸ್ತಿ ಲಭಿಸಿದೆ.
ಯಲ್ಲಪ್ಪ ಟಿ
Latest posts by ಯಲ್ಲಪ್ಪ ಟಿ (see all)

ಹಚ್ಚಿಟ್ಟ ಹಣತೆಯಲ್ಲಿ ಹೊಸೆದು ಬತ್ತಿಯಾಗಿರುವ ಹತ್ತಿ ಮಿಂದು ಮಡಿಯುಟ್ಟ ಭಕ್ತನಂತೆ ತೈಲದಲ್ಲಿ ಮುಳುಗಿ ತಮದ ಕತ್ತಲ ಸುಡುತ ಬೆಳಕ ಬಟ್ಟೆಯ ತೊಡುವ ಯೋಗಿಯಂತೆ! ತನ್ನೊಡಲ ನೂಲಿನಲೇ ಜೇಡ ತನ್ನ ಜೀವಜಾಲದ ಕೇಡ ತಾನೇ ಬಗೆದು ಪ್ರಾಣ ನೀಗುವಂತೆ ಹತ್ತಿಯ ಬೀಜದಂತೆ ಚಿತ್ತ ಹತ್ತಿ ಉರಿಯುವ ಬತ್ತಿಯಾಗಿ ಬತ್ತಿಯನೇ ಸುಡುವ ತೈಲವೂ ಆಗಿ ಹೊತ್ತಿ ಉರಿಯುವ ಬೆಳಕೂ […]

#ಕವಿತೆ

ಬದುಕು ಚಿಗುರುವುದೆಂದರೆ

0
ಆಂಗ್ಲಭಾಷಾ ಉಪನ್ಯಾಸಕಿ
ಪ್ರಕಟಿತ ಕೃತಿಗಳು: ಏಣಿ ಮತ್ತು ಪದಗಳೊಂದಿಗೆ ನಾನು[ ಕವನ ಸಂಕಲನಗಳು,] ಪಾಶ್ಚಿಮಾತ್ಯ ಸಾಹಿತ್ಯ ಲೋಕ [ಅಂಕಣಬರಹ ಕೃತಿ]
ಪ್ರಶಸ್ತಿಗಳು:ಏಣಿ ಕವನ ಸಂಕಲನಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಮತಿ ಶಾರದಾ ರಾಮಲಿಂಗಪ್ಪ ದತ್ತಿ ಪ್ರಶಸ್ತಿ,
ಸಂಕ್ರಮಣ ಕಾವ್ಯ ಪ್ರಶಸ್ತಿ ೨೦೧೬, ರವಿಕಿರಣ ಸಾಹಿತ್ಯ ಪ್ರತಿಷ್ಠಾನ ಬೆಂಗಳೂರು ಪ್ರಥಮಕಥಾ ಬಹುಮಾನ ೨೦೧೮ , ತುಷಾರ ಮಾಸ ಪತ್ರಿಕೆಯ ಕ್ಯಾಲಿಫೋನರ್ಿಯಾ ಕಾವ್ಯಾಂಜಲಿ ತೃತೀಯ ಕಥಾ ಬಹುಮಾನ ೨೦೧೮ ಇತ್ಯಾದಿ ಬಹುಮಾನ ಬಂದಿದೆ.ಮೊಗವೀರ ಮಾಸಪತ್ರಿಕೆ ಮುಂಬಯಿ ೨೦೧೭ರ ಸಮಾಧಾನಕರ ಕಥಾ ಬಹುಮಾನ, ಕರಾವಳಿ ಮುಂಜಾವು ದಿನಪತ್ರಿಕೆಯದೀಪಾವಳಿ ಕಥಾ ಸ್ಪಧರ್ೆಗಳಲ್ಲಿ ಬಹುಮಾನ ಇತ್ಯಾದಿ ಬಂದಿರುತ್ತವೆ.
ನಾಗರೇಖಾ ಗಾಂವಕರ
Latest posts by ನಾಗರೇಖಾ ಗಾಂವಕರ (see all)

ನನ್ನ ನಾ ನಿನ್ನ ನೀ ತಿಳಿದುಕೊಳ್ಳುವುದು. ನನ್ನೊಳಗೆ ನೀ ನಿನ್ನೊಳಗೆ ನಾ ಬೆಳಕಾಗುವುದು ಒಳಮೈ ಹೊರಮೈ ಕಾಯಿಸಿಕೊಳ್ಳುವುದು ಕಿರಣಕ್ಕೊಡ್ಡಿ ಮನಸ್ಸನ್ನು ದುಡಿಸಿಕೊಳ್ಳುವುದು ಹಸಿರ ಮತ್ತೆ ಮತ್ತೆ ಮೆದ್ದು ಮುದಗೊಳ್ಳುವುದು ಬೆಳಕ ಆಸರೆಗಾಗಿ ಕನಸ ಕಟ್ಟುವುದು ನೀರ ಮೇಲಿನ ನಡೆಗೂ ಗುರಿಯ ಇಡುವುದು ಬೇಲಿ ಗೂಟಕ್ಕೆ ಹಬ್ಬಿದ ಬಳ್ಳಿ ಗೂಟ ಗೂಟವ ದಾಟಿ ಬೇಲಿಯನ್ನೆ ಹಸಿರ ಕೋಣೆಯಾಗಿಸಿ […]