
“ದೇವರೆಂದರೇನು ಅಜ್ಜ, ದೇವರೆಂದರೇನು ? ಹೇಳು ಅವನು ಯಾರು, ಏನು, ತಿಳಿಯಬೇಕು ನಾನೂ” “ಬಾನು ಬುವಿಯ ಕೈಗೆ ಕೊಟ್ಟ ಬೆಳಕಿನೂರೆಗೋಲು, ಜೀವ ಎಂದೊ ಕುಡಿದು ಮರೆತ ತಾಯಿಯೆದೆಯ ಹಾಲು, ಕಲ್ಲು ಮಣ್ಣು ಬಳಸದೇನೆ ಕಟ್ಟಿಕೊಂಡ ಮನೆ. ಏಸ...
ನೀ ಕೇಳಿದ್ದು ಕೊಡುವೆನು ಗೆಳತಿ ಆಗು ನನ್ನ ಮನೆಯೊಡತಿ ನಾ ಕೇಳಿದ್ದು ಕೊಟ್ಟರೆ ಗೆಳೆಯ ಕೊಡುವೆಯ ಚಿನ್ನದ ಬಳೆಯ ಚಿನ್ನದ ಬಳೆಗಳು ನೂರು ಕುದುರೆಗಳೆಳೆಯುವ ತೇರು ನೀ ಕೇಳಿದ್ದು ಕೊಡುವೆನು ಗೆಳತಿ ಆಗು ನನ್ನ ಮನೆಯೊಡತಿ ನಾ ಕೇಳಿದ್ದು ಕೊಟ್ಟರೆ ಗೆಳೆಯ...
ಹಿಂಗ್ಯಾಕ ಮಾಡ್ತಾನ ಮಠದಯ್ಯಾ ಕೀಲಾಡಿ ಕುಂಡೀಯ ಕಟದಯ್ಯಾ ||ಪಲ್ಲ|| ಕಾವೀಯ ಕೂಲಾವಿ ಮ್ಯಾಲಕ್ಕ ಹಾಕ್ಯಾನ ಕಾಮೀನಿ ಭಾಮೀನಿ ಅಂತಾನ ಹಣಿಪಟ್ಟಿ ಬಿಳಿಪಟ್ಟಿ ಈಬತ್ತಿ ಹಚ್ಯಾನ ಹಿಂದ್ಯಾಕ ನನಸೀರಿ ಎಳಿತಾನ ||೧|| ಗಂಡುಳ್ಳ ಗರತೇರ ಹಿಂದ್ಹಿಂದ ಹೋಗ್ತಾನ ...
ಹಸಿವಿನ ನಂತರ ರೊಟ್ಟಿಯೋ ರೊಟ್ಟಿಯ ನಂತರ ಹಸಿವೋ ನಮಗೆ ತಿಳಿದಿಲ್ಲ. ಆದರೂ ಹಸಿವಿನಲಿ ರೊಟ್ಟಿಗಾಗಿ ಹುಡುಕಾಟ ರೊಟ್ಟಿಗೆ ಹಸಿವಿನ ಕಾಡುವಿಕೆ ತಪ್ಪಿಲ್ಲ. *****...
ಉದಯಿಸು ರವಿತೇಜನೇ ನೀನು ಹೊಂಗಿರಣವ ಹೊರ ಸೂಸುತ| ನಿನ್ನ ಸ್ವಾಗತಿಸೆ ಕಾದಿಹಳು ಇಬ್ಬನಿ ತಬ್ಬಿಕೊಂಡು ಬಾಹುಬಂಧನದಿ ಕರಗಿ ನೀರಾಗಲು ಹುಲ್ಲ ಹಾಸಿಗೆಮೇಲೆ ಮಲಗಿ|| ಉದಯಿಸು ರವಿತೇಜನೇ ನೀನು ಹಕ್ಕಿಗಳ ಇಂಚರವನಾಲಿಸುತ| ಉದಯಿಸು ರವಿತೇಜನೇ ನೀನು ಝುಳು ...
ಅವರಿವರ ವಿಕೃತಿಯನುಸುರದೆಲೆ ಪೊರೆವೆಮ್ಮ ಪ್ರಕೃತಿ ಗುಣವನಷ್ಟೇ ತೆರೆದು ಪೇಳಲೆಷ್ಟೊಂದು ಶ್ರಮಿಸಿದರು ಖರೆ ಸೋತೆನಾ ದೀಪದಂತೆ ಬೆಳಕೀವ ವರದೀಪ ಬೇಡದಿಹ ಬಿಸಿಯ ಕೊಡುವಂತೆ – ವಿಜ್ಞಾನೇಶ್ವರಾ *****...













