ನೀ ಕೇಳಿದ್ದು ಕೊಡುವೆನು ಗೆಳತಿ
ಆಗು ನನ್ನ ಮನೆಯೊಡತಿ

ನಾ ಕೇಳಿದ್ದು ಕೊಟ್ಟರೆ ಗೆಳೆಯ
ಕೊಡುವೆಯ ಚಿನ್ನದ ಬಳೆಯ

ಚಿನ್ನದ ಬಳೆಗಳು ನೂರು
ಕುದುರೆಗಳೆಳೆಯುವ ತೇರು

ನೀ ಕೇಳಿದ್ದು ಕೊಡುವೆನು ಗೆಳತಿ
ಆಗು ನನ್ನ ಮನೆಯೊಡತಿ

ನಾ ಕೇಳಿದ್ದು ಕೊಟ್ಟರೆ ಗೆಳೆಯ
ಕೊಡುವೆಯ ಕಾವಲು ಪಡೆಯ

ಕಾವಲು ಪಡೆ ನಿನ್ನ ಹಿಂದೆ
ಸೇವೆಗೆ ಸಖಿಯರು ಮುಂದೆ

ನೀ ಕೇಳಿದ್ದು ಕೊಡುವೆನು ಗೆಳತಿ
ಆಗು ನನ್ನ ಮನೆಯೊಡತಿ

ನಾ ಕೇಳಿದ್ದು ಕೊಟ್ಟರೆ ಗೆಳೆಯ
ಕೊಡುವೆಯ ಜೇನಿನ ಹೊಳೆಯ

ಜೇನಿನ ಹೊಳೆಯುಲಿ ಮೀಯು
ಹಾಲಿನ ಹೊಳೆಯಲಿ ತೋಯು

ನೀ ಕೇಳಿದ್ದು ಕೊಡುವೆನು ಗೆಳತಿ
ಆಗು ನನ್ನ ಮನೆಯೊಡತಿ

ನಾ ಕೇಳಿದ್ದ ಕೊಟ್ಟರೆ ಗೆಳೆಯ
ಕೊಡುವೆಯ ಪ್ರೀತಿಯ ಬೆಲೆಯ

ಕೊಟ್ಟವರೆಷ್ಟೋ ಬೆಲೆಯ
ಕೊಡುವನು ನನ್ನೀ ಹೃದಯ

ನೀ ಕೇಳಿದ್ದು ಕೊಡುವನು ಗೆಳತಿ
ಆಗು ನನ್ನ ಮನೆಯೊಡತಿ
*****

ತಿರುಮಲೇಶ್ ಕೆ ವಿ
Latest posts by ತಿರುಮಲೇಶ್ ಕೆ ವಿ (see all)