೧ [ಒಂದಾನೊಂದು ದಿನ ಸುಧಾಮನ ಸಹಧರ್ಮಿಣಿ ತನ್ನ ಪತಿರಾಯನನ್ನು ಕುರಿತು ಹೀಗೆ ನುಡಿದಳು] ಭಾಗ್ಯವನು ಬಳೆದುಕೊಂಡಿಹರು ಕೆಲ ಜನರು ಸೌ- ಭಾಗ್ಯವನು ಸುರಿದುಕೊಂಡಿಹರು ಹಲ ಜನರು ಸೌ- ಭಾಗೃತಿಲಕನೆ ಕೇಳು ಭಾಗ್ಯಲಕ್ಷ್ಮಿಯು ನಮ್ಮ ಗುಡಿಸಲವ ತೊಲಗಿ ತಾನು! ...

ಜಗವುತಾನಿದು ರಂಗಭೂಮಿಯು ನರನು ಅದರೊಳು ವಿವಿಧ ಪಾತ್ರವ | ವಹಿಸಿ ತನ್ನಯ ಕಾರ್ಯವೆಸಗುತೆ ಮರಳಿ ಪೋಗುವನು || ೧ || ಮೊದಲು ತಾನವ ಶಿಶುವು ರೂಪವಧರಿಸಿ ತನ್ನಯ ಕೇಳಿಯಿಂದಲಿ | ತಣಿಪತನ್ನಯ ಜನನಿ ಜನಕರಮನವ ತಾನಾಗ || ೨ || ವರುಷವಾರೇಳುಗಳು ಗತಿಸಲು ಶ...

೧ ಸತ್ಯ ಪೂರ್ಣ ಜ್ಯೋತಿ ಬೀರುವ ಬೆಳಕಿನಲಿ ಮು೦ದರಿಯುವ, ನಿತ್ಯ-ನಿರ್ಮಲ ಯೋಗಿ, ಸತ್ಯಾಗ್ರಹಿ ‘ಮಹಾತ್ಮ’ಗೆ ವಂದನಂ ೨ ತಾನು ನಡೆಯುವ ನಡತೆಯಿಂದಲೆ ಸರಳ ಜೀವನ ಸಾರವ ಮಾನವರಿಗೊರೆಯಿಸುವ ‘ಮೋಹನ- ದಾಸ’ಗಿಂದೀ ವಂದನಂ ೩ ತ್ಯ...

ಹೂಗೊಂಚಲ, ಕೊನೆಮಿಂಚಲು ಮರದೆಲೆಗಳು, ನಿವಿರೇಳಲು ಬಂದುದು ವಸಂತ ತಂದುದು ಸಿರಿಸಂತಸ ಹಳಹಚ್ಚಲು, ಹಸುರಾಗಲು ಹೊಲಸುತ್ತಲು, ಸವಿಕಾಣಲು ಮೆರೆದುದು ವಸಂತ ತಂದುದು ಸಿರಿಸಂತಸ. ಗಿಡಮರದಲಿ, ಕುಕಿಲೇರಲು ಹೂಮುಗುಳಲಿ, ಭ್ರಮಹಾರಲು ಬಂದುದು ವಸಂತ ಸ೦ದುದು ...

ಹಡಗವಲ್ಲವಯ್ಯಾ ಇದು! ಹದಗಡಕ! ನಿಶಾಚರ! ಅಹಿರಾವಣ! ಮಹಿರಾವಣ! ಶೂರ್ಪನಖಿಯ ಆಪ್ತಬಂಧು! ರಾಶಿರಾಶಿಯಾಗಿ ಬಿದ್ದಿದೆ ನೋಡು- ಮೀನಗಡಕ ಮೊಸಳೆಯಂತೆ! ನಕ್ರದಂತೆ ವಕ್ರಾಕಾರ! ಮೀನದಂತೆ ವಾಯುಜೀವಿ! ಹೇಗೆ ಕಣ್ಣುಬಿಡುತಿದೆ ನೋಡ ಒಕ್ಕಣ್ಣ ರಾಕ್ಷಸನಂತೆ! ಹೇಗ...

ದುಂದುಮೆ ಕೇಳ್ರಿ ದುಂದುಮೆ ||ಪ|| ದುಂದುಮೆ ಎಂತೆಂದು ಪಾಡಿರಿ ಜನರು ದುಂದುಮೆ ಬಸವಂತನ ಹಬ್ಬ | ದುಂದುಮೆ | ದುಂದುಮೆ ನಿರ್ದುಮೆ ಸಾಲಗನ್ನಿರೆ | ದುಂದುಮೆ ಕೇಳ್ರಿ ದುಂದುಮೆ ||ಅ. ಪ|| ಸಬ್ಬ ದೇಶದೊಳು ಇಂಥ ಹೆಚ್ಚಿನ ಮರ್ಕಟ ಅಬ್ಬರಿಸುತ್ತ ಹಾರ್ಯಾ...

೧ ಹೊಸ ಬಾಳಿನ ಹೊಸತಿಲಿನಲಿ ಝಗ ಝಗಿಸುವ ಬೆಳಕು ನಿಶೆ ಸರಿದಳೆ ಉಷೆ ಸುರಿದಳೆ ಒಳ ಹೊರಗೂ ಹೊಳಪು ೨ ಅರಿಷಿಣದೊಳು ಮಿಂದಾಯಿತೆ ಬಂದಾಯಿತೆ ಜೊತೆಗೆ ನೆರಳಿನ ಸರಿ ನಿಂದಾಯಿತೆ ಶುಭಕೋರುತ ಪತಿಗೆ. ೩ ಹಸನಾಯಿತೆ ಹೊಸದಾಯಿತೆ ಮನೆಯಂಗಳ ಚೆಲುವು ತಿಳಿ ನೀರಿನ...

ಬೆಳ್ದಿಂಗ್ಳ ಬಿದ್ದಿತ್ತು ಅಂಗಳ ತುಂಬ ಅಂಗಳ ತುಂಬಿತ್ತು ಬೆಳ್ದಿಂಗ್ಳದಿಂದ ಇದರಾಗ ಅದೇ ಬಿತ್ತೊ ಅದೇನೆ ಇದರಾಗಿತ್ತೊ. ಕನಸಿನೊಳಗೆ ನಾನಿದ್ದೆ ಅಲ್ಲೆ ನೀನು ಹೊರಬಿದ್ದೆ. ರೆಕ್ಕೆಯಾಗಿ ಬಯಲಾಗ ಹುಡುಕಾಡಿದೆ. ನನ್ನೊಳಗೆ ಕಂಡನೇನೋ ಕಂಡೊಳಗ ಇದ್ದನೇನೋ ...

ಪದವೊಂದು ಹಾಡ್ತೀನಿ ಎದೆಯ ಕದ ತೆರೆದು ಕೇಳು ನೋವುಂಡ ಸ್ವರ ತೇಲಿ ಬಂದಾವ, ನೀಡಲಾರವು ಮುದವ ತುಟಿತನ ಬಂದು ಹರಳುಗಟ್ಟಾವ, ಹಗುರವಾಗಲಿ ಎದೆ ಅಂತ ಪದವೊಂದು ಹಾಡ್ತೀನಿ… ನಡೆಯುತ್ತ ನಡೆಯುತ್ತ ದಾರಿ ಸವೆಯಲಿ ಎಂದು ಮುಳ್ಳು ಬೇಲಿಯ ಹಾದಿ, ಕಲ್ಲು...

1...2526272829...933

ಪೆಟ್ರೋಲ್ ವಾಸ್ನೆ ಮೂಗಿಗೆ “ಗಫ್” ಅಂತಾ ಬಡೀತು! ಐದಾರು ಕ್ಯಾನ್‌ಗಟ್ಟಲೆ ಮನೆ ಸುತ್ತಮುತ್ತ ಉಗ್ಗಿ ಬಾಗಿಲು ಕಿಟಕಿ ಸಂಧಿನಿಂದ ಧುಭುಧುಭು – ಪೆಟ್ರೋಲ್ ಸುರಿವಿದ ತೀರಿಗೆ ಅದು ಹಳ್ಳ ಕೊಳ್ಳವಾಗಿ ಮನೆಯೊಳಕ್ಕೆ ಜಗ್ಗಿ ಹರಿದು ಬಂತು! ಮಲಗಿದ್ದ ಹಾಸಿಗೆ, ದಿಂಬು, ಹೊ...

ಭಾಗ ೧ ಒಂದು ಯುನಿವರ್ಸಿಟೀನಲ್ಲಿ ಆಧ್ಯಾಪಕನಾಗಿರುವ ನಾನು ಕ್ಯಾಂಪಸ್ ಆವರಣದೊಳಗೇ ಇರುವ ಫ್ಲಾಟೊಂದರಲ್ಲಿ ಹೆಂಡತಿ ಮಕ್ಕಳ ಜತೆ ಮನೆ ಮಾಡಿಕೊಂಡಿದ್ದೇನೆ. ಮನೆ ಮತ್ತು ಆಫೀಸಿಗೆ ಹೆಚ್ಚೇನೂ ದೂರವಿಲ್ಲದ ಕಾರಣ ವಾಹನಗಳಿಗೆ ವೃಥಾ ಕಾಸು ಖರ್ಚು ಮಾಡಬೇಕಾದುದಿಲ್ಲ. ಮಧ್ಯಾಹ್ನ ಲಂಚಿಗೆ ಕೂಡ ಮನ...

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...