ರಸದ ಕಡಲೊಡಲೊಳಗೆ ಕುದಿಯುತಿದ್ದರು ತಾಯೆ
ಕೊನೆಯ ದಿಹ ಮೌನದಲಿ ಮಲಗಿರುವೆ. ಎನಿತು ಶುಭ-
ಯೋಗವದು? ಯಾವುದೋ ಸ್ಫೂರ್ತಿಮಾರುತ ಮೂರ್ತಿ
ಮನದ ಮೊಗ್ಗೆಯ ಬಿರಿದ, ಇಂಗಡಲನೇ ಹರಿಸಿ-
ಯರಳಿಸಿತು ಕಮನೀಯ ಕಾವ್ಯ ಚಂದ್ರಮನನ್ನು
ಹ್ಲಾದೈಕ ಮಯವಾದ ಪುಣ್ಯಕೃತಿ ಜೊನ್ನದಲಿ
ಅಮರ ತಾರಾನಿಕರ ನಿರುತ ಸ್ನಾತ ಪುನೀತ!
ದೋಷಾಕರನ ಗಂಗೆ ಸುರರಿಗೂ ಶುಚಿ ತೀರ್ಥ!
ಅಕಲಂಕ ನಿರ್‍ದೋಷಕೃತಿ ಜನಿಸೆ, ರಸಹೀರಿ
ನರನಮರನಾಗನೆ? ನಿನ್ನೆದೆಯಲುರಿಯುತಿಹ
ಸತ್ಯ ಸೂರ್ಯಪ್ರಖರ ಹಿಮವತಿಯ ಶಿಖರನೀ-
ಹಾರವನು ತೊಡೆದು ದೊರೆವಾಡ ಹೊನಲನೆ ಹರಿಸಿ
ಅಳಿಯುತಿಹ ಪ್ರಾಣಗಳನೆಂದು ಸಂಜೀವಿಪುದು?
ಮತಿಗೆಟ್ಟ ಮಾನವನದೆಂದು ಉದ್ಬೋಧಿಪುದು?
*****



















