ಯಾರ ದೃಷ್ಟಿ, ತಾಕಿತು ನನ್ನ ಕಂದವ್ವಗೆ-ಯಾರ ದೃಷ್ಟಿ ?
ಮುಂಜಾವಿನ ಮಂಜು ತಾಕಿತೋ ?
ಮುಚ್ಚಂಜೆಯ ನಂಜು ತಾಕಿತೋ ?
ಯಾರ ದೃಷ್ಟಿ ತಾಕಿತು ನನ್ನ ಕಂದವ್ವಗೆ-ಯಾರ ದೃಷ್ಟಿ ?
ಹೂಗಳು ಕಣ್ಣು ಬಿಟ್ಟುವೊ ?
ಚಂದ್ರನ ಕಿರಣ ನೆಟ್ಟುವೊ ?
ಯಾರ ದೃಷ್ಟಿ ತಾಕಿತು ನನ್ನ ಕಂದವ್ವಗೆ-ಯಾರ ದೃಷ್ಟಿ ?
ತಾಯಿಯ ದೃಷ್ಟಿ ನಾಯಿಯ ದೃಷ್ಟಿ
ನೀನು ಕುಸುಮ ಸುಕುಮಾರ ಸೃಷ್ಟಿ.
ಎಲ್ಲಿ ಬಚ್ಚಿಡಲಿ-ಎಲ್ಲಿ ಮುಚ್ಚಿಡಲಿ-ನನ್ನ ಕಂದವ್ವನ?
ತಾಯಿ ಕಾಡಿದ ಮೇಲೆ ಕಾಯುವರದಾರು ?
ಈ ಪಾಪಿದೃಷ್ಟಿ ಮುಚ್ಚಿ ಕಂದನು ಕಣ್ದೆರೆಯಲವ್ವಾ.
*****


















