ಒಂದು ದೊಡ್ಡ ಬೌದ್ಧ ವಿಹಾರ. ಅಲ್ಲಿ ಅನೇಕ ಬೌದ್ಧ ಭಿಕ್ಷುಗಳ ವಾಸ. ಅಲ್ಲಿಗೆ ಒಬ್ಬ ಶಿಲ್ಪಿ ದಿನವೂ ತಾನು ಕೆತ್ತಿದ ಬುದ್ದನ ಶಿಲ್ಪವನ್ನು ಒಬ್ಬ ಭಿಕ್ಷುವಿಗೆ ತೋರಿಸಿ, ಕೊಂಡುಕೊಳ್ಳಲು ಕೇಳಿಕೊಳ್ಳುತಿದ್ದ.
ಭಿಕ್ಷು ದಿನವೂ ಅದರಲ್ಲಿ ಮುಖ್ಯವಾದುದನ್ನು ತುಂಬಿ ತೆಗೆದುಕೊಂಡು ಬರಲು ಹೇಳುತ್ತಿದ್ದನು. ಹೀಗೆ ಕೆಲವು ದಿನಗಳು ಕಳೆದವು, ಕೊನೆಗೆ ಒಂದು ದಿನ ಶಿಲ್ಪಿ “ಅದೇನು ಮುಖ್ಯವಾದದ್ದು ತುಂಬಬೇಕು?” ಎಂದ.
“ಜೀವದ ಜೀವಾಳ’ ಎಂದ ಬೌದ್ಧ ಭಿಕ್ಷು.
“ನಾನು ಬ್ರಹ್ಮನಲ್ಲ ಶಿಲ್ಪದಲ್ಲಿ ಜೀವ ತುಂಬಲು” ಎಂದ ಶಿಲ್ಪಿ.
“ಜೀವದ ಜೀವಾಳ ಬುದ್ದನ ಮುಗುಳು ನಗೆ, ಅದು ಬ್ರಹ್ಮನ ಕೆಲಸವಲ್ಲ. ಶಿಲ್ಪಿಯ ಕೆಲಸ”, ಅಂದಾಗ ಭಿಕ್ಷುವಿನ ಮಾತು ಶಿಲ್ಪಿಗೆ ಮನದಟ್ಟಾಯಿತು.
ತನ್ನ ಕೌಶಲಕ್ಕೆ ಗುಟ್ಟು ಏನು ಎಂದು ತಿಳಿದು ಕೊಂಡ.
*****


















