ಓಂ ನಮೋ ಓಂ ನಮೋ ಓಂ ನಮೋ ಶಿವಶಿವಾ
ಪಂಚತತ್ವವೆ ನಿನ್ನ ಗಾನಲಿಂಗಾ
ಕಣಕಣವು ಪಂಚಾರ್ತಿ ಉಸಿರು ಪಂಚಾಕ್ಷರಿಯು
ಓ ವಿಶ್ವ ಗುರುಲಿಂಗ ಸಾಕ್ಷಿಲಿಂಗಾ
ಭಸ್ಮಪರ್ವತದಿಂದ ಭಸ್ಮದೇವತೆ ಇಳಿದು
ಭಸ್ಮಲಿಂಗದ ಬೆಳಕು ಬಂತು ನೋಡು
ಶ್ರೀ ರುದ್ರ ರುದ್ರಾಕ್ಷಿ ಕೈಲಾಸದಿಂದಿಳಿದು
ರುದ್ರಾಕ್ಷಿ ಚಲುವಾದ ಚಂದ ಕಾಣು
ಗುರುಲಿಂಗ ಜಂಗಮವೆ ಜ್ಯೋತಿ ಸಂಗಮವಾಯ್ತು
ಗುರುಪಾದ ಗಂಭೀರ ಸಾಗಿ ಬಂತು
ಶಿವಶಿವಾ ಶಿವಮಂತ್ರ ಜ್ಞಾನ ಪಾದೋದಕವು
ಒಡಲ ಕಡಲನು ಕೂಡಿ ಪ್ರಸಾದವಾಯ್ತು
ಅಂಗವಾಗಲಿ ಲಿಂಗ ಭೂಲೋಕ ಚಿಲ್ಲಿಂಗ
ಜಗವೆ ಜಂಗಮಲಿಂಗ ಕೋಟಿಲಿಂಗಾ
ಮೃಗತತ್ವ ಸಾಕಯ್ಯ ಗುರುತತ್ವ ಬೇಕಯ್ಯ
ತೆಂಗು ಬಾಳೆಯು ಕಬ್ಬು ಪ್ರೇಮಲಿಂಗಾ
*****