ಮಾನವ ನಿನ್ನಂತರಂಗದಿ ತ್ಯಾಗ ಉದಯಿಸಲಿ
ನಿನ್ನ ಭಾವದಲಿ ವಿಶಾಲತೆ ಬರಲಿ
ನಿನ್ನ ನೋಟವು ಪರಿಶುದ್ಧವಾಗಿರಲಿ
ನಿನ್ನ ಬಾಳು ಹಚ್ಚು ಹಸಿರಾಗಿರಲಿ
ಆಲೋಚನ ದೇವರಿಗೆ ಮುಡಿಪಾಗಲಿ
ಮನಸ್ಸು ದೇವರಿಗೆ ಹಂಬಲಿಸಲಿ
ದೇಹವು ದೇವ ಸೇವೆಯಲಿ ಕರಗಲಿ
ಬಾಳೊಂದು ಜನರಿಗೆ ನಿದರ್ಶನವಾಗಿರಲಿ
ಮನದ ಕಾಮಕ್ರೋಧದ ಜಂಗು ಬಿಡಸಬೇಕು
ಭಕ್ತಿ ಸೋಡಾದಿಂದ ನಿತ್ಯ ತೊಳೆಯಬೇಕು
ಮನದ ಪ್ರತಿ ಮೂಲೆಗೂ ಇಣಕ್ಬೇಕು
ಅಲ್ಲೆಲ್ಲ ಪರಮಾತ್ಮನ ಕಾಣಬೇಕು
ಬದುಕು ನಿನಗೆ ದೊರಕಿದ್ದು ಭಾಗ್ಯ
ಮೋಜು ಮೋಹಗಳಲಿ ಬೆರೆತರೆ ದುರ್ಭಾಗ್ಯ
ಸಂತರ ಸೇವೆಯಲ್ಲಿದ್ದರೆ ಭೋಗ ಭಾಗ್ಯ
ಪರಮಾತ್ಮನ ದರ್ಶನವಾದರೆ ಸೌಭಾಗ್ಯ
ದೇಹ ನಿನ್ನದೆಂಬ ಮೋಹವೇಕೆ ನಿನಗೆ
ಸಂಬಂಧಿಗಳು ತನ್ನವರೆಂಬ ಹಮ್ಮು ಏಕೆ!
ಬಾಳಿನಲಿ ಕೈಗೆ ನಿಲುಕದ ಆಸೆಗಳೇಕೆ!
ಮಾಣಿಕ್ಯ ವಿಠಲನಾಗಿರು ಜೋಕೆ
*****
















