ಕಾರಂತರಿಲ್ಲದ ಬಾಲವನಕ್ಕೆ ಹೋದಾಗಲೆಲ್ಲ,
ತಂಗಾಳಿ ದೇಹವ ಸೋಕಿದಾಗಲೆಲ್ಲ,
ಕಾರಂತರ ಕೈಯ ಬೆಚ್ಚನೆಯ ಸ್ಪರ್ಶವೇ
ಮನದಲ್ಲಿ ಮನೆ ಮಾಡುತ್ತದೆ
ಕಾರಂತರಿಲ್ಲದ ಬಾಲವನದ
ಜೋಕಾಲಿಯನ್ನು ತೂಗಿದಾಗಲೆಲ್ಲ
ಮಹಾಪುರುಷನ ಜೀವನವೊಂದು
ನಿಧಾನವಾಗಿ ಜೀಕಲಾರಂಭಿಸುತ್ತದೆ
ಕಾರಂತರಿಲ್ಲದ ಬಾಲವನದಲ್ಲಿದ್ದಷ್ಟೂ
ಕಾಲ ಕಾರಂತರದ್ದೇ ನೆನಪು
ಸಣ್ಣದೊಂದು ನೋವಿನ ಉರುಳು
ಸುಳಿಸುಳಿಯಾಗಿ ಸುರುಳಿಸುತ್ತಿಕೊಳ್ಳುತ್ತದೆ
ನಿಂತ ಕಾರಂತರ ಪ್ರತಿಮೆಯು
ನಿರತವಾಗಿದೆ ಮೌನ ಸಂಭಾಷಣೆಯಲ್ಲಿ
ಕಾರಂತರಿಲ್ಲದ ಬಾಲವನದಲ್ಲಿ
ಕಾರಂತರ ಚಿಂತನೆಗಳಿನ್ನೂ ನಿತ್ಯನೂತನ
*****


















