ಲಕ್ಷೋಪಲಕ್ಷ ಕಣ್ಣುಗಳು ಧೀಮಂತ ಮೂರ್ತಿಯ ದರ್ಶನಕೆ ತ್ಯಾಗ ದೌನತ್ಯವ ಅರಿಯಲು ಕಾತರಿಸುತ್ತಾರೆ ಹತ್ತುತ್ತಾರೆ ಮೇಲೇರುತ್ತಾರೆ ನಿನ್ನ ಅಡಿಯವರೆಗಷ್ಟೆ. ಮತ್ತೆ ಮೇಲೇರುವ ಕೆಚ್ಚಿಲ್ಲದ ಸಾಮಾನ್ಯರು ನಿನ್ನ ಅಸಾಮಾನ್ಯತೆಗೆ ಅದ್ಭುತ ಕಲಾಕೃತಿಗೆ ಬೆರಗಾಗು...

ಭಾವ ಚಿತ್ರಗಳನ್ನು ಹೊತ್ತ ಗೋಡೆ ಮೌನದಲ್ಲೂ ಇತಿಹಾಸ ಬಿಂಬಿಸುತ್ತದೆ. ಗೋಡೆಗಳು ಕಿಟಕಿಗಳು, ಬಾಗಿಲುಗಳು ತಮ್ಮೊಳಗೆ ಮನೆಯ ಮನಸ್ಸಿನ ಕಂಪನಗಳ ಬಗ್ಗೆ ಮಾತನಾಡಿಕೊಳ್ಳುತ್ತವೆ. ಮತ್ತೆ ಇರುವೆಗಳು ಎಲ್ಲಾ ಜಾಗಗಳನ್ನು ಮೂಸಿಸುತ್ತವೆ ಹಿತವಾಗಿ. ಬಚ್ಚಲ ಮನ...

ಜಯ ಭಾರತ ನವ ಭಾರತ ಜಯ ಭಾರತವೆನ್ನಿ || ಜಯ ಜಯ ಘೋಷಣೆಯ ಮೊಳಗಿಸಿ ನವ ಚೇತನದೆಡೆಗೆ ನಡೆಯಿರಿ || ಜ || ವೀರ ಯೋಧರು ಬೆಳಗಿದ ಭೂಮಿ ಜನನಿಯ ಜೊಗುಳದ ಐಸಿರಿ ಎನ್ನಿರಿ || ಜ || ನವಋತುಗಳ ನವ ಭಾಷೆಯೆ | ನವ ಜೀವನದ ಜೀವನದಿಗಳ ತಾಣವೆನ್ನಿರಿ || ಜ || ದ...

ಮಾತೆ ಭುವನೇಶ್ವರಿ ಜಗನ್ಮಾತೆ ನನ್ನನ್ನು ಮಾಯೆಯಿಂದ ನಿ ಕಾಪಾಡು ನೀನು ಎನ್ನ ಕೈ ಬಿಟ್ಟ ಮೇಲೆ ನಾನು ಬದುಕುಳಿಯುವದೇ ಇದು ಕಾಡು ವಿಷಯ ಸುಖಕ್ಕೆ ಇಂದ್ರಿಯಗಳ ಚಡಪಡಿಕೆ ಮನಸ್ಸು ಇಂದ್ರಿಯಗಳ ಮೇಲೆ ಸವಾರಿ ಅವುಗಳ ನಡುವೆ ನಾನು ಅನಾಥ ನರಕವೇ ಗತಿ ನಾ ಜನ...

ಕಮಲವನ ಸಂಚಾರಿಣಿಯೆ ಮಹಾಲಕ್ಷ್ಮೀ ಬೇಕೇ ಆಸನ ಅರುಣಚರಣೇ ಮಾಡು ನನ್ನೀ ಹೃದಯವನೆ ಸಿಂಹಾಸನ ವಿಶ್ವಸುಂದರಿ ನಿಖಿಲಜಗದಾನಂದಕರಿ ಹೇ ಯೋಗಿನೀ ವಿರಸ ಹೃದಯತ್ಯಾಗಿ ನೀರಸ ಭಕ್ತಿ ಬಂಧನ ಭೋಗಿನೀ ವಾಪದೂರೇ ಮಾಡು ನನ್ನನು ನಿನ್ನನುಗ್ರಹದಾಗರಾ ಮಧುರ ಕೌಶಲ ಮಾಯ...

(ಜೀವನದಲ್ಲಿಯ ಒಂದು ಅನುಭವದ ಅನ್ಯೋಕ್ತಿಯಿದು.) ೧ ‘ಇರುಳೆಲ್ಲವೂ ತಿರುಗಿ ತಿರೆಗೆ ಚೆಲುವನು ಬೀರಿ, ನರರ ಕಣ್‌ಮನ ತಣಿವ ತೆರದಿ ಒಲವನು ತೂರಿ, ಚರಿತಾರ್ಥನಾಗಲಿಕೆ ಸರಿಯಿದೇದಿನ’ ಎಂದು, ಹುಣ್ಣಿಮಯ ತಣ್‌ಗದಿರ ತುಂಬುಮೊಗದಲಿ ಬಂದು, ಅಳತೆಯಿಲ್ಲದ ಪಳು...

ಏಕೆ ಹುಟ್ಟಿಸಿದೆ ನನ್ನನು? ಎಂದು ಪ್ರಶ್ನೆಯ ಕೇಳದೆ ಇಲ್ಲಿ ಹುಟ್ಟಿಸಿ ನಿನ್ನಯ ಕರ್‍ಮವ ಕಳೆಯೆ ಅವಕಾಶಕಲ್ಪಿಸಿದಕೆ ಕೃತಜ್ಞನಾಗಿರು|| ಏಕೆ ನನಗೆ ಈ ಸ್ಥಿತಿಯ ನೀಡಿದೆ ಎನ್ನುವುದಕಿಂತ ಇದಕಿಂತ ಕೆಳಗಿನ ಪರಿಸ್ಥಿತಿಯ ಅವಲೋಕಿಸಿ, ಇದೇ ನನಗೆ ಉತ್ತಮವೆಂ...

ಕೋಟೆ ಕೊತ್ತಲದಲ್ಲಿ ಕತ್ತಿ ಗೊರಸಿನ ಸದ್ದು ಒಳಗೆ ಅಂತಃಪುರದಲ್ಲಿ ರಾಣಿ ಒಂಟಿ. ಹೆಪ್ಪುಗಟ್ಟಿದ ನೆತ್ತರಲ್ಲಿ ಸೇಡು ಸೆಣಸಿನ ಹೆಜ್ಜೆ ಒಳಗೆ ಮಿಡಿಯುವ ನಾಡಿ ವಿವೇಕ ಒಂಟಿ. ಕೋಟೆ ಕಲ್ಲುಗಳಿಂದ ಕಾದ ನಿಟ್ಟುಸಿರು ಕತೆ ಬರೆಯುತ್ತಿದೆ ಮಣ್ಣು ಕಾಯುತ್ತ ಕ...

ಅಮ್ಮ ಒಳಗೊಳಗೇ ಬಂದಳು ಬೆಳೆಸಿದಳು ಕಠಿಣ ಕಬ್ಬಿಣದ ಕಷ್ಟ ನೋವುಗಳ ಸಹಿಸಿ. ಕರಗಿಸಿಕೊಂಡಳು ಒಡಲೊಳಗೆ ಕುದಿವ ಲಾವಾ ಶತಶತಮಾನಗಳ ತಂಪು ತಗುಲಿ ತಂಗಾಳಿ ತಣ್ಣಗಾಗುತ್ತ ಭೂಮಿಯಾದಳು ಅಮ್ಮ ಬೆಳೆಸಿದಳು ಮಹಾ ವೃಕ್ಷಗಳ ಅವಳು ಬೇರು ಬಿಡಿಸಿದಳು ಒಡಲಲ್ಲಿ ಲೋ...

ಅವಳ ಹೆಸರು ಇವಳಿಗಿಷ್ಟ ಇವಳ ಹೆಸರು ಅವಳಿಗಿಷ್ಟ ಅವಳ ಹೆಸರಲಿವಳ ಕರೆದು ಇವಳ ಹೆಸರಲವಳ ಕರೆದು ನೋಡಬೇಕೇ ನಾನು ಹಾಡಬೇಕೇ ಮಲ್ಲಿಗೆಗೆ ಗುಲಾಬಿಯಿಷ್ಟ ಗುಲಾಬಿಗೆ ಮಲ್ಲಿಗೆಯಿಷ್ಟ ಅದರ ಪರಿಮಳ ಇದಕೆ ಇಟ್ಟು ಇದರ ಬಣ್ಣ ಅದಕೆ ಕೊಟ್ಟು ನೋಡಬೇಕೇ ನಾನು ಹಾಡ...

ಬೆಳಗ್ಗಿನ ಜಾವ, ಬೆಟ್ಟದ ಮೇಲಿನ ತನ್ನ ಕುಟೀರದ ವರಾಂಡದಲ್ಲಿ ಮಲಗಿದ್ದ ಮುದುಕನಿಗೆ ಎಚ್ಚರವಾಯಿತು. ಸುಮಾರು ಆರು ಅಂಗುಲ ಉದ್ದದ, ಅಲ್ಲಲ್ಲಿ ಹಳದಿ ಬಣ್ಣಕ್ಕೆ ತಿರುಗಿದ ತನ್ನ ಬಿಳಿ ದಾಡಿಯ ರಾಶಿಯ ಮಧ್ಯೆ ತನ್ನ ಎಡಕೈಯ ಬೆರಳುಗಳನ್ನು ತೂರಿಸಿಕೊಂಡು, ಸಿಕ್ಕು ಬಿಡಿಸುತ್ತಾ ಸೂರನ್ನು ದಿಟ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...

ಪೆಟ್ರೋಲ್ ವಾಸ್ನೆ ಮೂಗಿಗೆ “ಗಫ್” ಅಂತಾ ಬಡೀತು! ಐದಾರು ಕ್ಯಾನ್‌ಗಟ್ಟಲೆ ಮನೆ ಸುತ್ತಮುತ್ತ ಉಗ್ಗಿ ಬಾಗಿಲು ಕಿಟಕಿ ಸಂಧಿನಿಂದ ಧುಭುಧುಭು – ಪೆಟ್ರೋಲ್ ಸುರಿವಿದ ತೀರಿಗೆ ಅದು ಹಳ್ಳ ಕೊಳ್ಳವಾಗಿ ಮನೆಯೊಳಕ್ಕೆ ಜಗ್ಗಿ ಹರಿದು ಬಂತು! ಮಲಗಿದ್ದ ಹಾಸಿಗೆ, ದಿಂಬು, ಹೊ...

ಭಾಗ ೧ ಒಂದು ಯುನಿವರ್ಸಿಟೀನಲ್ಲಿ ಆಧ್ಯಾಪಕನಾಗಿರುವ ನಾನು ಕ್ಯಾಂಪಸ್ ಆವರಣದೊಳಗೇ ಇರುವ ಫ್ಲಾಟೊಂದರಲ್ಲಿ ಹೆಂಡತಿ ಮಕ್ಕಳ ಜತೆ ಮನೆ ಮಾಡಿಕೊಂಡಿದ್ದೇನೆ. ಮನೆ ಮತ್ತು ಆಫೀಸಿಗೆ ಹೆಚ್ಚೇನೂ ದೂರವಿಲ್ಲದ ಕಾರಣ ವಾಹನಗಳಿಗೆ ವೃಥಾ ಕಾಸು ಖರ್ಚು ಮಾಡಬೇಕಾದುದಿಲ್ಲ. ಮಧ್ಯಾಹ್ನ ಲಂಚಿಗೆ ಕೂಡ ಮನ...

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...