ಒಡದು ಕರ್ಮದ ಕಟ್ಟು – ಜಗದ ಮೋಹವ ಸುಟ್ಟು ಪಡೆದು ಸತ್ಯದ ದೃಷ್ಟಿ – ಜನಕೆ ತಿಳಿವನು ಕೊಟ್ಟು ಜಡ ಶರೀರದ ಮಮತೆ – ಕಾಮ ಮದಗಳ ಬಿಟ್ಟು ನುಡಿ ನುಡಿಗಹಿಂಸೆಯನ್ನು ಬೋಧಿಸುವೆ ಕೃಪೆಯಿಟ್ಟು. ಎಲ್ಲ ಹೃದಯವ ಹೊಕ್ಕು – ಅಳೆದು ...

ಉಷೆಯ ಕಾಲ ಸೋಂಕಿನಿಂದ ಬಾನು ತಳಿತಿದೆ; ನಿಶೆಯ ಮಡಿಲನುಳಿದು ಜಗವು ಜೀವಗೊಳುತಿದೆ; ಕತ್ತಲಂಜುತೋಡುತಿಹುದು, ಬೆಳಕು ತಿರೆಯ ತುಂಬುತಿಹುದು; ನಾಡು ಮೇಡು ಕಾಡೊಳೆಲ್ಲು ಸೊಗವು ಮೂಡಿ ಬರುತಿದೆ. ತರುಗಳಿನಗೆ ಮಂಜುಹನಿಗ- ಳರ್‍ಘ್ಯ ಹಿಡಿದಿವೆ; ಅಲರ ಸುರಿ...

ಶಂಡೀಗಿ ಕಡೆದಾರಲ್ಲ; ದೊಡ್ಡ ಶರಣ್ಯಾರು ನೆರದಾರಲ್ಲ| ಒಡ್ಡಿ ಬಾಜೆಂತ್ರೀಲಿ ಪುರವಂತನಾಡಸ್ತ ಐಸೀರಿಲೊಂಟ್ಹಾರಲ್ಲ ||೧|| ಹಡದೀಯ ಹಾಸ್ಯಾರಲ್ಲ| ಮ್ಯಾಲ ಮದುಮಕ್ಕಳ ನಡಿಸ್ಯಾರಲ್ಲ| ಖನ್ನಿ ಪಾರ್‍ವತಿದೇವಿಗಿ ಎಣ್ಣಿ ಪತ್ತಽಲುಡಿಸಿ ಸೋಬಾನ ಪಾಡ್ಯಾರಲ್ಲ ...

ಭೂಪಾಳಿ-ಝಂಪೆ ನೋಡು ನೋಡೆಲೊ ದೇವ! ಗತಿವಿಹೀನರ ಕಾವ, ನೋಡು ನಿನ್ನಯ ರಾಜ್ಯದೊಳರಾಜಕತೆಯ! ನೋಡು ಪಡುವಣ ದಿಕ್ಕ, ನೋಡು ಇತಲಿಯ ಸೊಕ್ಕ, ನೋಡು ದೀನ ತುರುಷ್ಕ ತ್ರಿಪಲಿಯರ ಕತೆಯ! ||೧|| ಬಡ ತ್ರಿಪಲಿಯನ್ನಿತಲಿ ಪಿಡಿದಿರುವುದೆನ್ನುತಲಿ ಮೊರೆಯಿಡುವ ಕ್ರ...

ರಾಮನಿಲ್ಲದ ನಾಡಿನಲ್ಲಿ ರಾಮ ಬಾಣದ ಆರ್ಭಟ ಜುಟ್ಟು ಗಡ್ಡಗಳ ಕಾಳಗದಲ್ಲಿ ರಕ್ತದೋಕುಳಿ ಚೆಲ್ಲಾಟ ರಾಮನಿದ್ದನೋ ಇಲ್ಲವೋ ಮಸೀದಿಯಂತೂ ಬಿದ್ದಿದೆ ಮಂದಿರ ಮೇಲೇಳದಿದ್ದರೂ ಸಿಂಹಾಸನ ದಕ್ಕಿದೆ ಜುಟ್ಟುಗಳ ಆಚೆಗೂ ಜುಟ್ಟುಗಳು ಬೆಳೆದಿದೆ ಗಡ್ಡಗಳ ಆಚೆಗೂ ಗಡ್...

ಓ ಕ್ರೂರಿ ನಿನ್ನ ನಾನೊಲಿದಿಲ್ಲವೇ ಹೇಗೆ ? ದುಷ್ಟಳೇ ನಿನಗಾಗಿ ನನ್ನನ್ನೆ ಮರೆತಾಗ ನಿನ್ನ ಕುರಿತೇ ನಾನು ಯೋಚಿಸುವುದಿಲ್ಲವೇ ? ನಿನ್ನ ಹಗೆ ಯಾರನ್ನು ಗೆಳೆಯ ಎಂದಿರುವೆನೆ ? ನಿನಗಾಗದವರನ್ನು ಎಂದು ಓಲೈಸಿರುವೆ ? ನೀನು ಕೋಪಿಸಿದಾಗ ನನ್ನ ಮೇಲೇ ನಾನ...

ಕೋಳಿ ಕೂಗಿ ನಸುಕನೆಚ್ಚರಿಸುವ ಮುನ್ನ, ಹೊಂಗದಿರನೆದ್ದು ವಸುಧೆಯ ನೋಡಿ ನಗುವ ಮುನ್ನ, ಹಗಲ ಮುಗಿಲುಗನಸಿನಲಿ ಬೆಂಗದಿರ ಮಾಯವಾಗುವ ಮುನ್ನ, ನನ್ನ ಕಿಟಕಿಯ ಬಳಿ ರೆಂಬೆಯ ಮೇಲೆ ಕುಳಿತು ಕೊಂಬು ಹಿಡಿದಿತ್ತು ಕೋಗಿಲೆಯೊಂದು ನಿದ್ದೆ ತೊಲಗಿತು; ಕಿವಿ ಸೋತ...

– ಪಲ್ಲವಿ – ಜಯ ಜಯ ಭಾರತ ಭೂಮಾತೇ-ಜಯ ಜಯ ಮಹಿಮಾಕುಲವಿಖ್ಯಾತೇ ! ಜಯ ಸತ್ಯಸಾರ ಸಂಭೂತೇ…. ಜಯ ಜಯ ಭಾರತ ಭೂಮಾತೇ ! ೧ ವರುಣದೇವ ವರವಾಗಿ ನೀಡಿರುವ ಶರನಿಧಿಗಳು ಘೂರ್ಣಿಸುತ…. ಮೊರೆಯುತಿಹವು ಹಗಲಿರುಳನು ಗಣಿಸದೆ ನಿನ್ನ ...

ಮೊಂಜಾವಿನಂದದಿ ಬೆಳಕಾಗಿ ಮೂಡಣದಾ ಇಬ್ಬನಿ ಹನಿಗಳೇ ಮಣಿಮುತ್ತಾಗಿ ಸಿಂಗರಿಸೆ ತಾಯೆ ಹಸಿರ ಹೊನಲಿಗೆ ತಳಿರು ತೋರಣ ನಾಚಿ ತಾಯ ಗುಡಿ ಬಾಗಿಲತೆರೆಯೆ ಮುತ್ತೈದೆಯರು ಪಂಚಮುಖಿ ಆರತಿ ಎತ್ತಿ ನುಡಿದಿಹರು ಚವತಿ ಚುಕ್ಕೆಗಳ ಹರಸಿ || ಸಪ್ತವರ್‍ಣಗಳಿಂದ ಮೂರ್...

ಭರತಖಂಡ ಪುರಣೇತಿಹಾಸಗಳಲ್ಲಿ ಕ್ಷಾತ್ರಧರ್ಮಾನುವರ್ತಿಗಳಾದ, ವೀರತ್ವದಿಂದ ಕೀರ್ತಿವಂತೆಯರಾದ ಮಹಿಳೆಯರು ಅನೇಕರಿರುವರು. ತೇಜಸ್ವಿನಿಯಾದ ಕೈಕಾ ದೇವಿಯು ರಾಕ್ಷಸರ ಸಮರಭೂಮಿಯಲ್ಲಿ ನಿಸ್ಸಹಾಯಕನಾದ ದಶರಥನ ಕಳಚಿ ಹೋದ ರಥಚಕ್ರದಲ್ಲಿ ತನ್ನ ಕೋಮಲ ಹಸ್ತಾಂಗುಳಿಯನ್ನು ಸಿಲುಕಿಸಿ, ತನ್ನ ವೀರಪತಿ...

ಪೆಟ್ರೋಲ್ ವಾಸ್ನೆ ಮೂಗಿಗೆ “ಗಫ್” ಅಂತಾ ಬಡೀತು! ಐದಾರು ಕ್ಯಾನ್‌ಗಟ್ಟಲೆ ಮನೆ ಸುತ್ತಮುತ್ತ ಉಗ್ಗಿ ಬಾಗಿಲು ಕಿಟಕಿ ಸಂಧಿನಿಂದ ಧುಭುಧುಭು – ಪೆಟ್ರೋಲ್ ಸುರಿವಿದ ತೀರಿಗೆ ಅದು ಹಳ್ಳ ಕೊಳ್ಳವಾಗಿ ಮನೆಯೊಳಕ್ಕೆ ಜಗ್ಗಿ ಹರಿದು ಬಂತು! ಮಲಗಿದ್ದ ಹಾಸಿಗೆ, ದಿಂಬು, ಹೊ...

ಭಾಗ ೧ ಒಂದು ಯುನಿವರ್ಸಿಟೀನಲ್ಲಿ ಆಧ್ಯಾಪಕನಾಗಿರುವ ನಾನು ಕ್ಯಾಂಪಸ್ ಆವರಣದೊಳಗೇ ಇರುವ ಫ್ಲಾಟೊಂದರಲ್ಲಿ ಹೆಂಡತಿ ಮಕ್ಕಳ ಜತೆ ಮನೆ ಮಾಡಿಕೊಂಡಿದ್ದೇನೆ. ಮನೆ ಮತ್ತು ಆಫೀಸಿಗೆ ಹೆಚ್ಚೇನೂ ದೂರವಿಲ್ಲದ ಕಾರಣ ವಾಹನಗಳಿಗೆ ವೃಥಾ ಕಾಸು ಖರ್ಚು ಮಾಡಬೇಕಾದುದಿಲ್ಲ. ಮಧ್ಯಾಹ್ನ ಲಂಚಿಗೆ ಕೂಡ ಮನ...

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...