ನನ್ನ ನಿದ್ದೆಗಳನ್ನು ಕದ್ದವರು ನೀವು
ಸಾಲಾಗಿ ನಿಲ್ಲಿಸಿ ನಿಮ್ಮನ್ನು ಶಿಕ್ಷೆ
ಕೊಡಬೇಕೆನ್ನಿಸುತ್ತಿದೆ ಆದರೆ
ನೀವು ಗಾಳಿಗಳು ಬೆಂಕಿಗಳು
ಭೂಮಿ ಆಕಾಶಗಳು, ನೀವು
ಮೈಗಳು ಮನಸ್ಸುಗಳು ಬುದ್ಧಿ
ಗಳು ಹೃದಯಗಳು ಇಂಥ
ಸಂಕೀರ್ಣತೆಗೆ ಶಿಕ್ಷೆ ಹೇಗೆ ಕೊಡುವುದು
ನನ್ನನ್ನು ನಾನೇ ಶಿಕ್ಷಿಸಿ
ಕೊಳ್ಳಬೇಕಿದೆ ಈಗ ನಿದ್ದೆ ಬಾರ
ದಿರುವುದಕ್ಕೆ ನೀವಲ್ಲ ಕಾರಣ
ನಾನು ನನ್ನ ಮನಸ್ಸು ಮತ್ತು ಅರ್ಧ
ರಾತ್ರಿಯಲ್ಲೆದ್ದು ಕುಳಿತು ಬರೆಯುತ್ತಿ
ರುವ ಈ ಕವಿತೆ ಜೊತೆಗೆ
ನಿಮಗೆ ತಿಳಿದರೆ ಎಂಬ ಚಿಂತೆ.
*****


















