Home / Kavana

Browsing Tag: Kavana

ಒಂಬತ್ತೂ ತಿಂಗಳು ಶಾಂತ-ಪ್ರಶಾಂತ ಮೇಘನಾ ಹತ್ತನೆಯ ತಿಂಗಳು ಯಾಕಿಷ್ಟೊಂದು ಮುಖ ಕಪ್ಪಿಟ್ಟಿತು ಬೇನೆ ಸುರುವಾಯಿತೆ ರಾಣಿ? ಸಮಾಧಾನಿಸಿಕೋ ಸಮಯ ಬರುತ್ತದೆಯಲ್ಲ ಹತ್ತಿರ ಮಡಿಲು ತುಂಬಲು ಕಾತರಿಸಿದ ಕುಡಿಗೆ ಮುದ್ದಿಡಲು ಎಷ್ಟೊಂದು ಬೆವರ ಹನಿಗಳು ಮುಖ ಮ...

ಆರುತಿ ಬೆಳಗುವೆನಾ ಗುರು ಬಸವಣ್ಣಗೆ ಆರುತಿ ಬೆಳಗುವೇ ನಾ ಗುರು ಬಸವಣ್ಣಗೆ. ಕತ್ತಲೆಯು ಕಳೆಯುತ್ತ ಬಾಳ ಬೆಳಕು ನೀಡಲು ಆರುತಿ ಬೆಳಗುವೇ ನಾ ಗುರು ಬಸವಣ್ಣಗೆ. ಸಂತಸ ನೀಡುತ್ತ ಸಂಸಾರ ರಥ ಸಾಗಲು ಭಕ್ತಿಯಿಂದ ಆರುತಿ ಬೆಳಗುವೇ ನಾ ಗುರು ಬಸವಣ್ಣಗೆ. ಕೀ...

ಓ ಈಡಿಪಸ್ ನಿನ್ನೆದೆಂತಹ ಬದುಕು ಅಮಾನುಷ ವಿಧಿಬರಹಕೆ ಈಡಾಗಿ ಅರಿಯದೆ ಹಿಂದೆಂದೂ ನಡೆಯದಿದ್ದ ಮುಂದೆಂದೂ ನಡೆಯದಿರುವ ಘನಘೋರ ದುರಂತಕ್ಕೆ ಬಲಿಯಾದೆ ನವಮಾಸಗಳು ತನ್ನೊಡಲಲಿ ನಿನ್ನನಿರಿಸಿಕೊಂಡ ಹೆತ್ತವಳಿಗೆ ಮಾಲೆ ಹಾಕಿ ಅವಳೊಡೆಯನಾದೆ ಅವಳ ನಗ್ನತೆಯಲಿ...

ಎಲ್ಲಿ ಹೋದರೂ ಚಿನ್ನಾರಿ ಪೇಪರಿನಲಿ ಜೋಪಾನ ಮಾಡಿ ಎತ್ತೊಯ್ಯುತ್ತಾಳೆ ತನ್ನ ಪ್ರೀತಿಯ ಸೂಜಿಯನ್ನೂ! ಸೂಜಿಯೊಂದಿಗೇ ರೀಲುಗಟ್ಟಲೆ ಗಟ್ಟಿದಾರ ಹೊತ್ತು ಸಾಗಿ ಪಿಸುಗಿಹೋದ ಎಲ್ಲ ಎಲ್ಲವನ್ನೂ ಹೊಲಿಯುತ್ತಾಳೆ ಹರಕುಗಳು ಕಾಣದಂತೆ ಮುಚ್ಚುತ್ತಾಳೆ! ಹೋದ ಬಂದ...

ವಧುವಿನಂತೆ ಕಾದಿದೆ ವರಣಮಾಲೆ ನೇದಿದೆ ನಿನ್ನ ವರಿಸಲೆಂದು ಲೋಕ ಕಾತರದಲಿ ಕಾದಿದೆ, ಬಾ ಬಾ ಹೊಸ ಕಾಲವೆ ಹೊಸ ಹಾಡಿಗೆ ತಾಳವೆ ಬಾಳ ಕುಣಿಸುವಂಥ ಗರವ ಬೀಳಿಸುವಾ ದಾಳವೆ! ಬಾ ಬಾ ಹೊಸವರ್ಷವೆ ವಧುಗೆ ವರನ ಸ್ಪರ್ಶವೆ, ಬೆಂದ ಮನಕೆ ಅನಂದವ ತಾ ಅಶಾವೃಷ್ಟಿಯ...

ಹೊರಟಿದ್ದೇನೆ ಕುಬೇರನ ನಾಡಿಗೆ ಅಲ್ಲಿ ಏನೆಲ್ಲ ಇದೆಯಂತೆ ಅದೊಂದು ಮಾಯಾ ಪೆಟ್ಟಿಗೆಯಂತೆ ಬೇಕೆಂದದ್ದೂ ಬೇಡವೆಂದದ್ದೂ ಕಾಣುತ್ತದಂತೆ ಸುಮ್ಮನೆ ಕನಸು ಕಾಣಬಾರದಂತೆ; ಮೈ ಮನಸುಗಳೆಲ್ಲೆಲ್ಲಾ ಕಚಗುಳಿ ಕುತೂಹಲ ವಿಚಿತ್ರವಲ್ಲದೇ ಮತ್ತಿನ್ನೇನು- ಕಣ್ಣಿಗೆ ...

ಬೀದರ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಅಟ್ಟೂರ ಗ್ರಾಮ ಪಾಟೀಲ ಕುಟುಂಬದ ಸಿರಿವಂತ ಮನೆತನದಲ್ಲಿ ಜನಿಸಿದಿ ಜನರ ಸೇವೆಗೈಯುತಾ ನೀ ನಡದಿ ಪ್ರಜಾಪ್ರಭುತ್ವ ಅರ್ಥ ತಿಳಕೊಂಡಿದಿ ಹಗಲಿರುಳು ಎನ್ನದೆ ದುಡಿದು ಜನತೆಯ ಮನಮನೆಯುದ್ದಕ್ಕೂ ಮನಸೆಳೆದು ನೆಲೆ ನಿಂತ...

ಇಷ್ಟುಕಾಲ ಒಟ್ಟಿಗಿದ್ದು ಅರ್ಥೈಸಿ ಕೊಂಡದೆಷ್ಟು ನನ್ನ ಕಣ್ಣೀನಾಳದ ಭಾವ ನೀ ಅಳೆಯಲು ನಿನ್ನ ಅಂತರಂಗದ ಬಿಂಬವಾ ನಾ ಅರಿಯಲು ಯತ್ನಿಸಿದಷ್ಟು ಗೌಪ್ಯ ಇದ್ದವಲ್ಲ ಮದ್ಯ ಗೋಡೆಗಳು ನೀನು ಕಟ್ಟಿದ್ದೊ ನಾನು ಕಟ್ಟಿದ್ದೊ ಅಂತು ಎದ್ದು ನಿಂತಿದ್ದವು ಆಳೆತ್ತರ...

ಬೊಗಸೆಯಲ್ಲಿನ ನೀರು ಸೋರಿ ಹೋದರೆ ಏನು? ತೇವವಿಲ್ಲವೇ ಒಂದಿಷ್ಟು ಮೊಳಕೆಯೊಡೆಯುವಷ್ಟು? ಎಷ್ಟೊಂದು ಮಾತುಗಳು ತುಟಿ ಮೀರಿ ಹೋದರೆ ಏನು? ಅವ್ಯಕ್ತ ಭಾವಗಳೇ ಎದೆ ತುಂಬದೇನು? ಅಲೆಗಳೊಂದೂ ದಡಕುಳಿಯದಿದ್ದರೇನು? ಅಪ್ಪಿಲ್ಲವೇ ಮರಳು ಶಂಖ, ಚಿಪ್ಪಿನೊಂದಿಗೇ...

ಸ್ವಾಗತಿಸಿದೆ ಋತುರಾಜನನು ರಾಗನಿರತ ಲೋಕ ಕೋಗಿಲೆಗಳ ಸವಿಗೊರಲಿನಲಿ ರಾಗಿಣಿಯರ ನಗೆ ಹೊರಳಿನಲಿ ತೂಗಿ ತಲೆಯೊಲೆವ ತೆನೆಯಲಿ-ಹಕ್ಕಿಯ ಮೋದಭರಿತ ಸವಿಗಾನದಲಿ ದೂರದ ಇನಿಯಳ ಕನವರಿಸಿ ಮಾತು ಮಾತಿಗೂ ಪರಿತಪಿಸಿ ಕೊರಗುವ ವಿರಹಿಯ ತಾಪದಲಿ ಪ್ರೀತಿಗೆ ಎತ್ತಿದ...

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...