ಇಷ್ಟುಕಾಲ ಒಟ್ಟಿಗಿದ್ದು
ಅರ್ಥೈಸಿ ಕೊಂಡದೆಷ್ಟು
ನನ್ನ ಕಣ್ಣೀನಾಳದ
ಭಾವ ನೀ ಅಳೆಯಲು
ನಿನ್ನ ಅಂತರಂಗದ
ಬಿಂಬವಾ ನಾ ಅರಿಯಲು
ಯತ್ನಿಸಿದಷ್ಟು ಗೌಪ್ಯ
ಇದ್ದವಲ್ಲ ಮದ್ಯ
ಗೋಡೆಗಳು

ನೀನು ಕಟ್ಟಿದ್ದೊ
ನಾನು ಕಟ್ಟಿದ್ದೊ
ಅಂತು ಎದ್ದು
ನಿಂತಿದ್ದವು
ಆಳೆತ್ತರಕೆ
ಪಾರದರ್ಶಕವಲ್ಲದ
ಇಟ್ಟಿಗೆ ಗೋಡೆಗಳು
ನೀನು ನಿನ್ನೊಳಗೆ
ನಾನು ನನ್ನೊಳಗೆ
ಗೋಡೆಯೊಡೆಯುವ
ಯತ್ನ ನಿನ್ನದೋ
ನನ್ನದೋ
ಇದೆ ಅಹಂನಲಿ
ದೂರ ಬಹುದೂರ
ಗುರಿ ಮುಟ್ಟಿದ ತೀರ
*****