ಅದೊಂದು ಕಾಲವಿತ್ತು. ಬೈಕ್ ಆಥವಾ ಸ್ಕೂಟರ್ ಖರೀದಿಸಬೇಕೆಂದರೆ ನಮ್ಮ ದೇಶದಲ್ಲಿ ಆಯ್ಕೆ ತೀರಾ ಸೀಮಿತ ವಾಗಿತ್ತು. ಲ್ಯಾಂಬ್ರೆಟ್ಟಾ, ವೆಸ್ಪಾ, ಬುಲೆಟ್, ರಾಜ್‌ದೂತ್ ಮತ್ತು ಯೆಜ್ಡಿ ಇವಿಷ್ಟೇ ಆಗ ಲಭ್ಯವಿದ್ದ ದ್ವಿಚಕ್ರ ವಾಹನಗಳು. ಅಷ್ಟೇ ಆಲ್ಲ, ಸ್ಕೂಟರ್ ಬೇಕಾದರೆ ಬುಕ್ ಮಾಡಿ ಎರಡರಿಂದ ಮೂರು ವರ್ಷ ಕಾಯಬೇಕಾಗಿತ್ತು. ಆಗ ಸ್ಕೂಟರ್ ಮಾರಾಟದಲ್ಲಿ ಪ್ರೀಮಿಯಂ ಕಳ್ಳಪೇಟೆಯೂ ಇತ್ತು ಅಂದರೆ ನಂಬಲಾಗುತ್ತಿಲ್ಲ, ಆಲ್ಲವೇ?

ಈಗ ಕಾಲ ಬದಲಾಗಿದೆ; ಬಳಕೆದಾರರಿಗೆ ಆಯ್ಕೆಯ ಸುಗ್ಗಿ. ದ್ವಿಚಕ್ರ ವಾಹನಗಳ ಪ್ರತಿಯೊಂದು ಉತ್ಪಾದಕ ಕಂಪೆನಿಯೂ ಐದಾರು ಮಾದರಿಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಅವು ತಮ್ಮ, ಮಾರಾಟ ಹೆಚ್ಚಿಸಲು ಹೊಸ ಹೊಸು ತಂತ್ರಗಳನ್ನು ಅನುಸರಿಸುತ್ತಿವೆ. ಬೈಕ್/ ಸ್ಕೂಟರ್ ಖರೀದಿಗೆ ಸಾಲ ಮತ್ತು ಕಂತುಗಳಲ್ಲಿ ಬೆಲೆ ಪಾವತಿ ಇವೆಲ್ಲ ಈಗ ಮಾಮೂಲಾಗಿವೆ. ತಮ್ಮ್ಕ ಬೈಕಿನ ಬೆಲೆ 30,000 ರೂಪಾಯಿಗಳಿ ಗಿಂತ ಕಡಿಮೆ, ತಮ್ಮ. ಬೈಕಿನ ಮೈಲೇಜ್ ಆತ್ಯಧಿಕ. ಈ ರೀತಿಯ ಪ್ರಚಾರದ ಅಬ್ಬರ ಜೋರಾಗಿದೆ. ಹೊಸ ಬೈಕಿನ ಜೊತೆ ಉಚಿತ ಕೊಡುಗೆಗಳೂ ಲಭ್ಯ- ಬ್ಯಾಗ್, ಜಾಕೆಟ್, ಕೆಮರಾ ಆಥವಾ ಚಿನ್ನದ ನಾಣ್ಯ!

ಇಂಥ ಮಾರಾಟದ ಭರಾಟೆಯಲ್ಲಿ ಬಳಕೆದಾರರಿಗೆ ಗೊಂದಲ ಆಗುವುದು ಸಹಜ. ಹಾಗಾಗಿ ಹಣ ಪಾವತಿ ಮಾಡುವ ಮುನ್ನ ಬೈಕ್ ಹಾಗೂ ಸ್ಕೂಟರಿನ ತಾಂತ್ರಿಕ ವಿವರಗಳನ್ನು ತಿಳಿದುಕೊಂಡು, ಆನಂತರ ಖರೀದಿಯ ಬಗ್ಗೆ ನಿರ್ಧರಿಸಿರಿ. ಸ್ಕೂಟರ್ ತುಸು-ಕಡಿಮೆ ವೆಚ್ಚದ ಮತ್ತು ಸುಲಭ ನಿರ್ವಹಣೆಯ ವಾಹನ ಬೈಕ್ ಆಧಿಕ ವೇಗ ಮತ್ತು ಪವರ್ ಹೊಂದಿದ ವಾಹನ. ಆವೆರಡಕ್ಕಿಂತ ಹಗುರವಾದ ವಾಹನ ಸ್ಕೂಟರೆಟಿ.

ಎಂಜಿನಿನ ಕೆಪಾಸಿಟಿ . ‘ಸಿಸಿ’
ಒಂದು ಬೈಕಿನ ಎಂಜಿನ್ 100ಸಿಸಿಯದು ಅಂದರೆ ಅದರ ಸಿಲಿಂಡರಿಸೊಳಗೆ ಪಿಸ್ಟನ್ ಉಜ್ಜುವ ಭಾಗದ ಘನ ಅಳತೆ
100 ಘನ ಸೆಂಟಿಮೀಟರ್ ಎಂದರ್ಥ. ಇದು ಘನ ಸೆಂಟಿಮೀಟರಿನಲ್ಲಿ (ಸಿಸಿ – ಕ್ಯೂಬಿಕ್ ಸೆಂಟಿಮೀಟರ್) ಎಂಜಿನಿನ ಕೆಪಾಸಿಟಿ ಅಥವಾ ಡಿಸ್‌ಪ್ಲೇಸ್‌ಮೆಂಟನ್ನು ಸೊಚಿಸುತ್ತದೆ. ಅಧಿಕ ಡಿಸ್‌ಪ್ಲೇಸ್‌ಮೆಂಟಿನ ಎಂಜಿನ್ ಹೆಚ್ಚು ಪವರ್ ಉತ್ಪಾದಿಸುತ್ತದೆ. ಆದರೆ 100 ಸಿಸಿಯ ಎಂಜಿನ್ ಕೂಡ ಆದರ ಡಿಸೈನ್ ಅವಲಂಬಿಸಿ, 350 ಸಿಸಿಯ ಎಂಜಿನಿಗಿಂತ ಜಾಸ್ತಿ ಪವರ್ ಉತ್ಪಾದಿಸಬಲ್ಲುದು. ಆದ್ದರಿಂದ ಖರೀದಿಸುವ ಮುನ್ನ ಸಿಸಿ ಮತ್ತು ಪವರ್ ಎರಡನ್ನೂ ಪರಿಶೀಲಿಸಿ ನಿರ್ಧರಿಸಿರಿ. ಅನೇಕ ಸ್ಕೂಟರ್ ಗಳು 150 ಸಿಸಿ ವರ್ಗದಲ್ಲಿವೆ ಮತ್ತು ಬೈಕ್ ಗಳು 100 ಸಿಸಿಯಿಂದ 360 ಸಿಸಿ ವರ್ಗದಲ್ಲಿವೆ. ಎನ್ ಫೀಲ್ಡ್ ಬುಲೆಟ್ 500 ಸಿಸಿಯ ಬೈಕ್ ಕೂಡ ಲಭ್ಯವಿದೆ.

ಇಂಧನ ಬಳಕೆಯ ಸರಾಸರಿ
ನಿರ್ಧಿಷ್ಟ ದೂರ ಕ್ರಮಿಸಲು ವಾಹನವು ಬಳಸುವ ಪೆಟ್ರೋಲ್ ಅಥವಾ ಡೀಸಿಲಿನ ಪ್ರಮಾಣವೇ ಇಂಧನ ಬಳಕೆಯ ಸರಾಸರಿ. ಇದು ಎಂಜಿನ್ ಮತ್ತು ವಾಹನದ ಡಿಸೈನ್ ಮಾತ್ರವಲ್ಲದೆ, ರಸ್ತೆ, ಪೆಟ್ರೋಲ್, ಎಣ್ಣೆ ಇತ್ಯಾದಿ ಬಾಹ್ಯ ಅಂಶಗಳನ್ನೂ ಅವಲಂಬಿಸಿದೆ. ಈ ಸರಾಸರಿ ವಾಹನದಿಂದ ವಾಹನಕ್ಕೆ ಮತ್ತು ಎಂಜಿನಿನಿಂದ ಎಂಜಿನಿಗೂ ಬದಲಾಗಬಹುದು. ಹೆಚ್ಚಿನ 150 ಸಿಸಿ ಸ್ಕೂಟರ್ ಎಂಜಿನ್‌ಗಳು 50 – 60 ಕಿ.ಮೀ. / ಲೀಟರ್ ಸರಾಸರಿ ನೀಡುತ್ತವೆ. ಅನೇಕ ಬೈಕ್‌ಗಳೂ ಸರಿ ಸುಮಾರು ಇದೇ ಸರಾಸರಿ ನೀಡುತ್ತವೆ. ಆದರೆ 350 ಸಿಸಿ ಮತ್ತು 500 ಸಿಸಿಯ ಬೈಕ್‌ಗಳ ಸವಾರಿ ವೆಚ್ಚ ದುಬಾರಿ. ಯಾಕೆಂದರೆ ಅವುಗಳ ಸರಾಸರಿ ಕಡಿಮೆ.

ಎಷ್ಟು ಸ್ಟ್ರೋಕಿನ ಎಂಜಿನ್?
* ಎರಡು – ಸ್ಟ್ರೋಕ್ ಎಂಜಿನ್ : ಇದನ್ನು ಸುಲಭವಾಗಿ ಡಿಸೈನ್ ಮಾಡಿ, ಉತ್ಪಾದಿಸಿ ಸುಸ್ಥಿತಿಯಲ್ಲಿಡಬಹುದು.
ಈ ಎಂಜಿನಿನಲ್ಲಿ ಚಲಿಸುವ ಭಾಗಗಳ ಸಂಖ್ಯೆ ಕಡಿಮೆಯಾದ್ದರಿಂದ ಸರ್ವಿಸ್ ಮಾಡಲು ಸುಲಭ. ಎಂಜಿನ್ ಬಳಸಿದ ಇಂಧನದ ಶೇ. 60 ಭಾಗ ಮಾತ್ರ ಪವರ್ ಉತ್ತಾದನೆಗೆ ಬಳಕೆಯಾಗುತ್ತದೆ. ಹಾಗಾಗಿ ವೇಸ್ಪೋಜ್ ಜಾಸ್ತಿ ಮತ್ತು ಸರಾಸರಿ ಕಡಿಮೆ. ಇದರಲ್ಲಿ ಇಂಧನ ಸಮರ್ಪಕವಾಗಿ ಉರಿಯುವುದಿಲ್ಲ; ಆದ್ದರಿಂದ ಆಧಿಕ ಇಂಗಾಲದ ಮೊನಾಕ್ಸೈಡ್ ಹೊರ ಬರುತ್ತದೆ. ಈ ಎಂಜಿನ್ ಪರಿಸರ ನ್ನೇಹಿ ಆಲ್ಲ.
* 4 ಸ್ಟ್ರೋಕ್ ಎಂಜಿನ್ : ಈ ಎಂಜಿನ್ ಬಳಸಿದ ಇಂಧನದ ಶೇ. 80 ಭಾಗ ಪವರ್ ಉತ್ಸಾದನೆಗೆ ಬಳಕೆಯಾಗುತ್ತದೆ. ಇದರ ದಕ್ಷತೆ ಜಾಸ್ತಿಯಾದ್ದರಿಂದ ಸರಾಸರಿಯೂ ಉತ್ತಮ. ಈ ಎಂಜಿನಿನಲ್ಲಿ ಚಲಿಸುವ ಭಾಗಗಳ ಸಂಖ್ಯೆ ಆಧಿಕವಾದ್ದರಿಂದ ಮೈಂಟೆನೆನ್ಸ್ ವೆಚ್ಚ ಅಧಿಕ. ಇದರ ಸಿಲಿಂಡರಿನಲ್ಲಿ ಅನಿಲಗಳು ಸಂಪೂರ್ಣ ಉರಿದುಹೋಗುತ್ತವೆ; ಇದರಿಂದಾಗಿ ‘ಎಮಿಷನ್’ (ಎಂಜಿನ್ ಹೊರ ಕಕ್ಕುವ ಅನಿಲಗಳು) ಕಡಿಮೆ. ಈ ರೀತಿಯಲ್ಲಿ ಇದು ಪರಿಸರ ಸ್ನೇಹಿ ಎಂಜಿನ್. ಸ್ಕೂಟರ್ ಮತ್ತು ಬೈಕ್ ಎರಡರಲ್ಲೂ ಈಗ ನಾಲ್ಯು-ಸ್ಟ್ರೋಕ್ ಎಂಜಿನಿನ ಮಾದರಿಗಳು ಲಭ್ಯವಿವೆ ಎಪ್ರಿಲ್ 2000ದಿಂದ ವಾಹನಗಳಿಂದಾಗುವ ಮಾಲಿನ್ಯದ ನಿಯಂತ್ರಣಕ್ಕೆ ಯುರೋ ನಿಯಮಗಳು ಜಾರಿಗೆ ಬಂದಿವೆ. ಅಂದಿನಿಂದ ಎರಡು – ಸ್ಟ್ರೋಕ್ ಎಂಜಿನ್ ಗಳ ಉತ್ಸಾದನೆಯನ್ನು ಕ್ರಮೇಣ ನಿಲ್ಲಿಸಲಾಗುತ್ತಿದೆ. ಆದರೆ ಈಗ ಖರೀದಿಸುವ ಎರಡು – ಸ್ಟ್ರೋಕ್ ಎಂಜಿನಿನ ವಾಹನಗಳು ಭವಿಷ್ಯದಲ್ಲಿ ನಿರುಪಯೋಗಿಯಾಗಲಿವೆ ಎಂದೇನೂ ಅಂಜಬೇಕಾಗಿಲ್ಲ. ಇನ್ನು ಮುಂದೆ ಕಂಪೆನಿಗಳು ಎರಡು-ಸ್ಟ್ರೋಕ್ ಎಂಜಿನ್ ಗಳ ಬದಲಾಗಿ ನಾಲ್ಕು ಸ್ಟ್ರೋಕ್ ಎಂಜಿನ್ ಗಳನ್ನು ಮಾತ್ರ ಉತ್ಪಾದಿಸುತ್ತವೆ.

ಎಂಜಿನಿನ ಪಿಕ್ಅಪ್
ಬೈಕ್ ಅಥವಾ ಸ್ಕೂಟರ್ ಚಾಲೂ ಮಾಡಿ, ಕೆಲವೇ ಕ್ಷಣಗಳಲ್ಲಿ ಜೂಂ ಆಂತ ಧಾವಿಸುವ ಆನುಭವ ರೋಮಾಂಚಕಾರಿ. ಆದರೆ ಈ ಆನುಭವದ ವೆಚ್ಚವೂ ದುಬಾರಿ. ನಿಶ್ಚಲವಾಗಿರುವ ವಾಹನವು ವೇಗ ವರ್ಧಿಸಿಕೊಳ್ಳಲು ತಗಲುವ ಸಮಯವೇ ಪಿಕ್ಅಪ್. ಎಂಜಿನ್ ಅಧಿಕ ಪವರ್ ಉತ್ಪಾದಿಸಿದರೆ ಹೆಚ್ಚು ವೇಗದ ಪಿಕ್ಅಪ್ ಒದಗಿಸಬಲ್ಲುದು. ಆಧಿಕ ಪವರ್ ಉತ್ಪಾದಿಸಲು ಹೆಚ್ಚು ಇಂಧನ ಬೇಕಾಗುತ್ತದೆ. ಅಂದರೆ ವಾಹನದ
ಸರಾಸರಿ ಕಡಿಮೆಯಾಗುತ್ತದೆ. ಇದುವೇ ಯಮಹಾ ಮತ್ತು ಹೀರೋ ಹೋಂಡ ಬೈಕ್‌ಗಳ ನಡುವಣ ಮುಖ್ಯ ವ್ಕತ್ಯಾಸ. ಹೀರೋಹೋಂಡ ಬೈಕಿನ ಪಿಕ್ಅಪ್ ಕಡಿಮೆ ಆದರೆ ಮೈಲೇಜ್ ಜಾಸ್ತಿ. ಯಮಹಾ ಬೈಕಿನ ಪಿಕ್ಅಪ್ ಜಾಸ್ತಿಯಾದರೂ ಮೈಲೇಜ್ ಕಡಿಮೆ.

ಆಟೋ ಸ್ಯಾರ್ಟ್
ಸ್ಸಿಚ್ ಒತ್ತಿದರೆ ಚಾಲೂ ಆಗುವ ಎಂಜಿನ್ ಚಾಲಕರಿಗ ಅನುಕೂಲ. ಇದರಿಂದ ವೃದ್ದರಿಗೆ, ಮಹಿಳೆಯರಿಗೆ, ಬೆನ್ನು ನೋವು ಮತ್ತು ಹೃದಯಬೇನೆ ಇರುವವರಿಗೆ ಸಹಾಯ. ಇದಕ್ಕಾಗಿ ಮಾಡಬೇಕಾದ ಒಂದೇ ಒಂದು ವೆಚ್ಚ, ಬ್ಯಾಟರಿಯ ಮೈಂಟೆನೆನ್ಸ್. ಎಲೆಕ್ಟ್ರೋಲೈಟ್ ಬ್ಯಾಟರಿ ಸಾಮಾನ್ಯವಾಗಿ ಎರಡು ವರುಷ ಕೆಲಸ ಮಾಡುತ್ತದೆ. ಈ
ಸುಧಾರಣೆಯನ್ನು ಪ್ರಥಮವಾಗಿ ಅಳವಡಿಸಿದ್ದು ಕೈನೆಟಿಕ್ ಹೋಂಡ. ಈಗ ಇತರ ಕೆಲವು ಕಂಪೆನಿಗಳ ಸ್ಕೂಟರ್ಗಳಲ್ಲಿಯೂ ಇದನ್ನು ಆಳವಡಿಸಲಾಗಿದೆ.

ಬ್ರೇಕ್ ಹಾರ್ಸ್ ಪವರ್ (ಬಿಎಚ್ ಪಿ)
ಇದು ಪವರಿನ ಘಟಕ. ಹೆಚ್ಚು ಬಿಎಚ್ ಪಿ ಉತ್ಪಾದಿಸುವ ಎಂಜಿನ್ ಅಧಿಕ ಶಕ್ತಿಶಾಲಿ ಮತ್ತು ಜಾಸ್ತಿ ಪಿಕ್ಅಪ್ ಹಾಗೂ ವೇಗೋತ್ಕರ್ಷ ಒದಗಿಸುತ್ತದೆ. ಆದರೆ ಇದು ಹೆಚ್ಚು ಬಿಎಚ್ ಪಿ ಉತ್ಸಾದಿಸುವ ಎಂಜಿನಿನ ಸರಾಸರಿ ಕಡಿಮೆ. ಆದ್ದರಿಂದ ಹೆಚ್ಚು ಬಿಎಚ್ ಪಿ ಉತ್ಸಾದಿಸಿ ಉತ್ತಮ ಸರಾಸರಿ ನೀಡುವ ಎಂಜಿನ್ ಅತ್ತುತ್ತಮ. ಬಹುಪಾಲು ಸ್ಕೂಟರ್ಗಳ ಬಿಎಚ್ ಪಿ, 100 ಸಿಸಿ ಬೈಕ್‌ಗಳ ಬಿಎಚ್‌ಪಿ ಸೀಸಿಗೆ ಸಮವಾಗಿದೆ. 350 ಸಿಸಿ ಮತ್ತು 500 ಸಿಸಿಯ ಎನ್‌ಫೀಲ್ಡ್ ಬುಲೆಟ್ ಬೈಕಿನ ಬಿಎಚ್ ಪಿ ಅತ್ಯಧಿಕ.

ಚಕ್ರಗಳ ಅಂತರ ; ವೀಲ್‌ಬೇಸ್
ಮುಂದಿನ ಚಕ್ರ ಮತ್ತು ಹಿಂದಿನ ಚಕ್ರಗಳ ಕೇಂದ್ರಗಳ ನಡುವಿನ ಅಂತರವೇ ವೀಲ್ ಬೇಸ್. ಈ ಅಂತರ ಹೆಚ್ಚಾದಷ್ಟೂ ರಸ್ತೆ ಮತ್ತು ತಿರುವುಗಳಲ್ಲಿ ದ್ವಿಚಕ್ರ ವಾಹನ ಹೆಚ್ಚು ಸ್ಥಿರವಾಗಿರುತ್ತದೆ. ಯಾಕೆಂದರೆ ವೀಲ್‌ಬೇಸ್ ದೀರ್ಘವಾದಷ್ಟೂ ವಾಹನದ ಗುರುತ್ವಾಕರ್ಷಣ ಕೇಂದ್ರ ಕೆಳಮಟ್ಟದಲ್ಲಿರುತ್ತದೆ ಮತ್ತು ವಾಹನವು ಅಡ್ಡ ಮಗುಚುವ ಸಂಭವ ಕಡಿಮೆ. ಬೈಕ್ ಮತ್ತು ಸ್ಕೂಟರ್‌ಗಳ ಪ್ರಧಾನ ವ್ಯತ್ಯಾಸ ಅವುಗಳ ವೀಲ್‌ಬೇಸ್, ಬ್ರೇಕ್‌ಗಳ ವೀಲ್‌ಬೇಸ್ ಸ್ಕೂಟರ್‌ಗಳ ವೀಲ್ ಬೇಸಿಗಿಂತ ದೀರ್ಫ

ವಾಹನದ ತೂಕ
ವಾಹನ ಖರೀದಿಸುವಾಗ ಅದರ ತೂಕ ಗಮನಿಸಲೇಬೇಕು. ಸ್ಕೂಟರಿನ ಒಟ್ಟು ತೂಕದಲ್ಲಿ ಅದರ ಮೂರನೆಯ ಚಕ್ರದ ತೂಕವೂ ಸೇರಿರುತ್ತದೆ. ಬೈಕ್ ಭಾರವಾದರೂ ವಿನ್ಯಾಸದಿಂದಾಗಿ ಆದರ ನಿರ್ವಹಣೆ ಸ್ಕೂಟರಿಗಿಂತ ಸುಲಭ. ವಾಹನದ ಕೇಂದ್ರ ಭಾಗದಲ್ಲಿ ಎಂಜಿನ್ ಇದ್ದರೆ, ಎಂಜಿನ್ ಚಾಲೂ ಇಲ್ಲದ ಸನ್ನಿವೇಶಗಳಲ್ಲಿ ಅದನ್ನು ನಿರ್ವಹಿಸಲು ಅನುಕೂಲ.

ಗ್ರೌಂಡ್ ಕ್ಲಿಯರೆನ್ಸ್
ವಾಹನವು ದಾಟಬಲ್ಲ ಆತ್ಯಧಿಕ ರಸ್ತೆ ದಿಬ್ಟದ ಎತ್ತರವೇ ಅದರ ಗ್ರೌಂಡ್ ಕ್ಲಿಯರೆನ್ಸ್. ಕೈನೆಟಿಕ್ ಹೋಂಡಾದ ಚಾಲಕರಿಗೆ ಅದರ ಗ್ರೌಂಡ್ ಕ್ಲಿಯರೆನ್ಸ್ ಕಡಿಮೆ ಇರುವುದು ಅನುಭವಕ್ಕೆ ಬಂದಿರುತ್ತದೆ.

ಕಿವಿಮಾತು: ಸ್ವಂತಬೈಕ್ ಅಥವಾ ಸ್ಕೂಟರಿನಲ್ಲಿ ಸವಾರಿ ಮಾಡುವ ಕನಸು ಕಾಣುತ್ತಿದ್ಧೀರಾ? ಹೌದೆಂದಾದರೆ ನಿಮ್ಮ ಕನಸಿನ ಬೈಕ್ ಅಥವಾ ಸ್ಕೂಟರ್ ಏರುವ ಮುನ್ನ ಅದು ಇಂಧನ ದಕ್ಷತೆಯ, ಅಧಿಕ ಪವರಿನ ಮತ್ತು ಪರಿಸರ ಸ್ನೇಹಿ ವಾಹನ ಎಂಬುದನ್ನು ಖಚಿತಪಡಿಸಿಕೊಳ್ಳಿ.

ದ್ವಿಚಕ್ರ ವಾಹನ ಖರೀದಿಸುವ ಮುನ್ನ…
* ಬೈಕ್ ಅಥವಾ ಸ್ಕೂಟರ್ . ನಿಮಗೆ ಯಾವುದು ಅಗತ್ಯ ಎಂದು ಮೊದಲು ನಿರ್ಧರಿಸಿ. ಬೈಕಿನ ಪವರ್ ಮತ್ತು ಪಿಕ್ಅಪ್ ಆಧಿಕ. ಸ್ಕೂಟರಿನಲ್ಲಿ ಸಾಮಾನು ಒಯ್ಯಲು ಸ್ಥಳಾವಕಾಶವಿದೆ ಮತ್ತು ಸ್ಟೆಪ್ನಿ (ಮೂರನೆಯ ಚಕ್ರ) ಇದೆ.
* ಅತ್ಯಧಿಕ ಆವಧಿಯ ವಾರಂಟಿ ಮತ್ತು ಅತ್ಯಧಿಕ ಉಚಿತ ಸರ್ವಿಸ್ ನೀಡುವ ದ್ವಿಚಕ್ರ ವಾಹನದ ಉತ್ಪಾದಕರು ತಮ್ಮ ವಾಹನದ ಬಗ್ಗೆ ವಿಶ್ವಾಸ ಹೊಂದಿದ್ದಾರೆ ಎಂಬುದು ಖಚಿತ.
* ನೀವು ಖರೀದಿಸಬೇಕೆಂದಿರುವ ದ್ವಿಚಕ್ರ ವಾಹನದ ಕೆಲವು ಮಾಲೀಕರೊಂದಿಗೆ ವಿವರವಾಗಿ ಚರ್ಚಿಸಿರಿ, ಆದರ ಬಗ್ಗೆ ಅವರ ಅನುಭವ ತಿಳಿದುಕೊಳ್ಳಿರಿ.
* ಡೀಲರರೊಂದಿಗೆ ಕೂಲಂಕಷವಾಗಿ ಚರ್ಚಿಸಿರಿ. ಇದರಿಂದ ಅವರು ನೀಡಲಿರುವ ಸೇವೆಯ ಅಂದಾಜು ಮಾಡಲು ಸಾಧ್ಯ.
* ಬೈಕ್ ಆಥವಾ ಸ್ಕೂಟರಿಗೆ ಸಾಲ ಪಡೆಯುತ್ತೀರಾ? ಹಾಗಾದರೆ ‘ಸಾಲಕ್ಕೆ ಶೇಕಡಾ ಸೊನ್ನೆ ಬಡ್ಡಿ’ ಎಂಬ ಜಾಹೀರಾತಿಗೆ ಮರುಳಾಗಬೇಡಿ. ಆ ಸಾಲದ ಬಡ್ಡಿ ಎಷ್ಟೆಂದು – ನೀವೇ ಲೆಕ್ಕಾಚಾರ ಮಾಡಿರಿ. ಆ ಸಾಲವನ್ನು 36 ತಿಂಗಳುಗಳಲ್ಲಿ ಮರುಪಾವತಿಸಬೇಕು ಎಂದಾದರೆ, ಆ ಅವಧಿಯಲ್ಲಿ ನೀವು ಮರುಪಾವತಿಸುವ ಒಟ್ಟು ಹಣ ಎಷ್ಟೆಂದು ಲೆಕ್ಕ ಹಾಕಿರಿ. ಆ ಮೊತ್ತದಿಂದ ವಾಹನದ ಬೆಲೆಯನ್ನು ಕಳೆದರೆ ಗುಟ್ಟು ರಟ್ಟಾಗುತ್ತದೆ. ಉದಾಹರಣೆಗೆ, ‘ನಮ್ಮ
ವಾಹನದ ಸಾಲಕ್ಕೆ ಕೇವಲ ಶೇ. 4 ಬಡ್ಡಿ’ ಎಂದು ಪ್ರಚಾರ ಮಾಡುವ ವಾಹನ ಕಂಪೆನಿಯ ಸಾಲ ಮರುಪಾವತಿಯನ್ನು ಈ ರೀತಿ ಲೆಕ್ಕ ಹಾಕಿದಾಗ, ಆ ಸಾಲಕ್ಕೆ ವಾರ್ಷಿಕ ಶೇ. 24ರ ದರದಲ್ಲಿ ಬಡ್ಡಿ ವಸೂಲಿ ಮಾಡಲಾಗುತ್ತದೆ ಎಂಬುದು ಪತ್ತೆಯಾಯಿತು!

***************************************************************************
85 ಕಿ.ಮೀ. – ಲೀಟರ್ ಮೈಲೇಜ್?
‘ಕೈನೆಟಿಕ್ ಸಫಾರಿ ವಿ.2 ಅತ್ಕಧಿಕ ಮೈಲೇಜ್ – 85 ಕಿ.ಮಿ8. / ಲೀಟರ್’ ಎಂಬ ಜಾಹೀರಾತನ್ನು ಸನ್ ಮತ್ತು ಈನಾಡು ಟಿವಿ ಚಾನೆಲ್ ಗಳಲ್ಲಿ ನೋಡಿದ್ದೀರಾ? ಅದನ್ನು ನಂಬಿ ಆ ವಾಹನ ಖರೀದಿಸಿದ್ದೀರಾ? ಅನಂತರ ಲೀಟರಿಗೆ 60 ಕಿ.ಮೀ… 40 ಕಿ.ಮೀ. ಆಥವಾ 35 ಕಿ.ಮೀ. ಕ್ರಮಿಸಿದಾಗಲೇ ಪುನಃ ಪೆಟ್ರೋಲ್ ಬಂಕಿಗೆ  ಹೋಗಬೇಕಾಯಿ- ತೇನು? ಆ ಜಾಹೀರಾತನ್ನು ನಂಬಿದ ಶ್ರೀ ರಾಜು ಸೆಲ್ವರಾಜ್ ಮೊದಲಿಯಾರ್‌ಗೆ ಹೀಗಾಯಿತು. ತನಗೆ ಮೋಸ- ವಾಯಿತೆಂದು ಅವರು ಆಡ್ವರ್‌ಟೈಸಿಂಗ್ ಸ್ವಾಂಡರ್ಡ್ ಕೌನ್ನಿಲ್ ಆಫ್ ಇಂಡಿಯಾ (ಎಎಸ್ ಸಿಐ)ಕ್ಕೆ ದೂರು ನೀಡಿದರು.

ಎಎಸ್‌ಸಿಐ ಶ್ರೀ ರಾಜು ಅವರ ದೂರನ್ನು ಪುರಸ್ಕರಿಸಿತು. ಯಾಕೆಂದರೆ ಕೈನೆಟಿಕ್ ಕಂಪನಿ ತನ್ನ ಜಾಹೀರಾತನ್ನು ಸಮರ್ಥಿಸಿಕೊಳ್ಳಲಿಲ್ಲ. ಆ ಕಂಪನಿ ನಡೆಸಿದ ಪರೀಕ್ಷೆಯಲ್ಲಿಯೂ ಕೈನೆಟಿಕ್ ಸಫಾರಿ ವಿ.2 ಮೂರು ಬೇರೆ ಬೇರೆ ಇಂಧನ ಬಳಕ ಸರಾಸರಿ ನೀಡಿತ್ತು! (ಕೈನೆಟಿಕ್ ವಿ.2 ವಾಹನವನ್ನು ಅಧಿಕ್ಕತ ಡೀಲರರೊಬ್ಬನ ಸರ್ವಿಸ್ ಸೆಂಟರಿನಲ್ಲೇ ಪರೀಕ್ಷಿಸಿದಾಗಲೂ ಆದರ ಮ್ಮೆಲೇಜ್ ಕೇವಲ 40 ಕಿ.ಮೀ. / ಲೀಟರ್ ಆಗಿತ್ತು.) ಕೊನೆಗೆ, ಕೈನೆಟಿಕ್ ಕಂಪೆನಿಗೆ ಎಎಸ್ ಸಿಐ ಪತ್ರ ಬರೆದು, ಆ ಜಾಹೀರಾತನ್ನು ಪ್ರಸಾರ ಮಾಡಬಾರದೆಂದು ಆದೇಶಿಸಿತು.
*********************************************************
ಉದಯವಾಣಿ 8.8.2002