ಅಕ್ಷರ ಜ್ಯೋತಿ

ಅಕ್ಷರ ಜ್ಯೋತಿಯ ಬೆಳಗೋಣ ನಾವ್
ಅಕ್ಷರ ಸುಖವನು ಪಡೆಯೋಣ ||ಪ||

ಬಾಳಿನ ನೆಮ್ಮದಿ ಸುಖ ಸೌಭಾಗ್ಯದ
ಮನ್ವಂತರಕಿದು ಮೊದಲ ಪಣ
ನೂತನ ಸಮಾಜ ಕಟ್ಟೋಣ ನಾವ್
ಭವ್ಯ ಭಾರತವ ಬೆಳೆಸೋಣ ||೧||

ಅಜ್ಞಾನವೆಂಬ ಕತ್ತಲೆ ಮನೆಯಲಿ
ಕೊಳೆಯುತ ಬಾಳೋದು ಸಾಕಣ್ಣ
ಜ್ಞಾನದ ದೀಪವ ಹಚ್ಚೋಣ ನಾವ್
ಬೆಳಕಿನ ಮಕ್ಕಳು ಆಗೋಣ ||೨||

ಮೂಢ ನಂಬಿಕೆಯ ಜಡಪತಂಗಗಳು
ದೀಪದ ಉರಿಯಲಿ ಸುಡುತಾವೆ
ಹಣೆಬರವಾದದ ಕಣ್ಕಪ್ಪಡಿಗಳು
ತಂತಾವೆಲ್ಲೋ ಓಡ್ತಾವೆ ||೩||

ಅನಾರೋಗ್ಯದಾ ಹಳಸಲು ನಾತವು
ಇಲ್ಲದೆ ಮನೆ ತಿಳಿಯಾಗುವುದು
ಕೊರಡುಗಟ್ಟಿರುವ ದಾರಿದ್ರ್ಯದ ಅಂ
ಗಾಂಗಗಳಿಗೆ ಬಲವಾಗುವುದು ||೪||

ಅಕ್ಷರ ದೀಪವ ಹಚ್ಚೋಣ ಅದು
ಶಕ್ತಿಯು ಮುಕ್ತಿಯು ಎನ್ನೋಣ
ಮನೆ ಮನೆ ಊರೂರ್ ಕೇರಿಕೇರಿಗಳ
ಬೆಳಕಿನ ಲೋಕವ ಮಾಡೋಣ ||೫||
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನೆನಪಿನಂಗಳದಲ್ಲಿ
Next post ಬೈಕ್ ಆಥವಾ ಸ್ಕೂಟರ್ : ಆಯ್ಕೆ ನಿಮ್ಮದು

ಸಣ್ಣ ಕತೆ

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

  • ಅಜ್ಜಿಯ ಪ್ರೇಮ

    ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…

  • ಕತೆಗಾಗಿ ಜತೆ

    ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

  • ಹೃದಯದ ತೀರ್ಪು

    ಬೆಳಿಗ್ಗೆ ಏಳು ಗಂಟೆಯ ಹೊತ್ತಿಗೆ ತಿಂಡಿ ಕೂಡ ಮಾಡದೆ ಹೊರ ಹೋಗುತ್ತಿದ್ದ ಯೂಸುಫ್, ಮಧ್ಯಾಹ್ನ ಮಾತ್ರ ಮನೆಯಲ್ಲಿ ಉಣ್ಣುತ್ತಿದ್ದ. ರಾತ್ರಿಯ ಊಟ ಅವನ ತಾಯಿಯ ಮನೆಯಲ್ಲಿ. ತಾಯಿಯ… Read more…