ಮಂಗಳಾರುತಿ

ಆರುತಿ ಬೆಳಗುವೆನಾ ಗುರು ಬಸವಣ್ಣಗೆ
ಆರುತಿ ಬೆಳಗುವೇ ನಾ ಗುರು ಬಸವಣ್ಣಗೆ.

ಕತ್ತಲೆಯು ಕಳೆಯುತ್ತ
ಬಾಳ ಬೆಳಕು ನೀಡಲು
ಆರುತಿ ಬೆಳಗುವೇ ನಾ ಗುರು ಬಸವಣ್ಣಗೆ.

ಸಂತಸ ನೀಡುತ್ತ
ಸಂಸಾರ ರಥ ಸಾಗಲು
ಭಕ್ತಿಯಿಂದ ಆರುತಿ ಬೆಳಗುವೇ ನಾ ಗುರು ಬಸವಣ್ಣಗೆ.

ಕೀರ್ತಿ ಪತ್ತಾಕೆ
ಬಾನ್ನೆತ್ತರಕ್ಕೆ ಹಾರಿಸಲು
ಆರುತಿ ಬೆಳಗುವೇ ನಾ ಗುರು ಬಸವಣ್ಣಗೆ.

ಜ್ಞಾನದ ಜ್ಯೋತಿ
ಹೆಮ್ಮರವಾಗಿ ಬೆಳಗಿಸಲು
ಆರುತಿ ಬೆಳಗುವೇ ನಾ ಗುರು ಬಸವಣ್ಣಗೆ.

ಮಾನವ ಕಂಡಲ್ಲಿ
ಕರುಣೆಯ ತೋರುವ ಶಕ್ತಿಯ ನೀಡಲು
ಆರುತಿ ಬೆಳಗುವೇ ನಾ ಗುರು ಬಸವಣ್ಣಗೆ.

ಕಂಡ ಭಕ್ತರನ್ನು ಕೈ ಮುಗಿದು
ಸ್ವಾಗತ ಕೋರುವ ಶಕ್ತಿ ನೀಡಲು
ಆರುತಿ ಬೆಳಗುವೇ ನಾ ಗುರು ಬಸವಣ್ಣಗೆ.

ಮಾನವರ ಮನಸ್ಸು
ಕಲ್ಮಷವಾಗದ ಶಕ್ತಿ ನೀಡಲು
ಆರುತಿ ಬೆಳಗುವೇ ನಾ ಗುರು ಬಸವಣ್ಣಗೆ.

ಜಗದಲ್ಲಿ ಜಾತಿಮತಭೇದವ
ಅಳಿಸಲು ಶಕ್ತಿ ನೀಡಲು
ಆರುತಿ ಬೆಳಗುವೇ ನಾ ಗುರು ಬಸವಣ್ಣಗೆ.

ಸ್ವಾರ್ಥದ ಅವಗುಣವ ಜೀವನದಿ
ಅಳಿಸಲು ಮಾರ್ಗವ ನೀಡಲು
ಆರುತಿ ಬೆಳಗುವೇ ನಾ ಗುರು ಬಸವಣ್ಣಗೆ.

ಗುರುವನ್ನು ಕಂಡಲ್ಲಿ
ಪ್ರಸನತೆಯ ಶಕ್ತಿಯ ನೀಡಲು
ಆರುತಿ ಬೆಳಗುವೇ ನಾ ಗುರು ಬಸವಣ್ಣಗೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗ್ರಹಣ
Next post ಆರೋಪ – ೯

ಸಣ್ಣ ಕತೆ

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

  • ತೊಳೆದ ಮುತ್ತು

    ಕರ್ನಾಟಕದಲ್ಲಿ ನಮ್ಮ ಮನೆತನವು ಪ್ರತಿಷ್ಠಿತವಾದದ್ದು. ವರ್ಷಾ ನಮಗೆ ಇನಾಮು ಭೂಮಿಗಳಿಂದ ಎರಡು- ಮೂರು ಸಾವಿರ ರೂಪಾಯಿಗಳ ಉತ್ಪನ್ನ. ನಮ್ಮ ತಂದೆಯವರಾದ ರಾವಬಹಾದ್ದೂರ ಅನಂತರಾಯರು ಡೆಪುಟಿ ಕಲೆಕ್ಟರರಾಗಿ ಪೆನ್ಶನ್ನ… Read more…

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…