ಸರ್‍ರನೇ ಬರ್‍ರನೇ ಗಿರಗಿರ ಸುತ್ತುವ ಕೆಟ್ಟ ಬಿರುಗಾಳಿಗೆ ಸಿಕ್ಕ ಮನ ಟಪ್ಪೆಂದು ಗೋಣು ಮುರಿದಿದೆ ಸತ್ತ ಮನದ ಹೆಣಭಾರವ ಹೊತ್ತ ಜೀವ ನಲುಗಿದೆ ಸತ್ತ ಮನಕೆ ಸಂಸ್ಕಾರ ಬೇಡವೇ? ಕೊಳೆತು ನಾರೀತು ಜೋಕೇ! ಮಣ್ಣಿಗಿಡುವೆಯಾ ಅಗ್ನಿಗಿಡುವೆಯಾ ಸಾಗಲಿ ಕಾರ್ಯ ...
ಕನ್ನಡಿಯನು ಪ್ರೀತಿಸುತ್ತಾ ಪ್ರೀತಿಸುತ್ತಲೇ ಕನ್ನಡಿಯೇ ಆದ ಹುಡುಗಿ, ಹಾಡಲಾಗಲಿಲ್ಲ ಎದೆಯಾಳದ ಎಲ್ಲ ಎಲ್ಲಾ ಹಾಡುಗಳನ್ನು! ಬರಿಯ ಪ್ರತಿಫಲಿಸುವ ಕನ್ನಡಿಗೆ ಎಲ್ಲಾ ಅವ್ಯಕ್ತಗಳೂ ದಕ್ಕುವುದಾದರೂ ಹೇಗೆ? ನಿನ್ನೆಗಳಲ್ಲಿ ಮನ ತುಂಬಿ ಹಾಡಲಾಗದ ಹುಡುಗಿ ಇ...
ಶೃತಿ, ತಾಳ ಪದೇ ಪದೇ ಮಿಸ್ಸಾದರೂ ಹಾಡಿಯೇ ಹಾಡಿದರು ದೂರದೂರಿಂದ ಬಂದ ಉಸ್ತಾದರು ಮಾಗಿ ಚಳಿಯಲ್ಲಿ ಚಪ್ಪರದಲ್ಲಿ ಕುಳಿತವರೆಲ್ಲ ಬಹು ಬೇಗ ಸುಸ್ತಾದರು ಬರುವಷ್ಟರಲ್ಲಿ ವಂದನಾರ್ಪಣೆಯ ಪಾಳಿ ತಾಳಿ ತಾಳಿ ಎನ್ನುತ್ತಿದ್ದಂತೆ ಖುರ್ಚಿಗಳೆಲ್ಲ ಖಾಲಿ, ಖಾಲಿ...
ನಾವು ಸಾಮಾನ್ಯರು ಕಡಿಯುತ್ತೇವೆ ಕುಡಿಯುತ್ತೇವೆ ತಿನ್ನುತ್ತೇವೆ ಮಲಗುತ್ತೇವೆ ಬಾಧೆಗಳಿಂದ ಮುಲುಗುತ್ತೇವೆ ಹಸಿಯುತ್ತೇವೆ ಹುಸಿಯುತ್ತೇವೆ ನುಸಿಯುತ್ತೇವೆ ಮಸೆಯುತ್ತೇವೆ ಸಂದುಗಳಲ್ಲಿ ನುಸುಳುತ್ತೇವೆ ಸಿಕ್ಕಷ್ಟು ಕಬಳಿಸುತ್ತೇವೆ ಸಿಗಲಾರದ್ದಕ್ಕೆ ಹಳ...
ಹೆಂಡತಿ ಹೊಸತರಲ್ಲಿ ಕೋಪಗೊಂಡಾಗ ಅತಿ ರೂಪ; ಹಳಬಳಾದಂತೆ ಕೋಪಗೊಂಡಾಗ ಅವಳ ರೂಪ ಪ್ರಕೋಪ! *****...
ಪಂಪ ಮಹಾಭಾರತದ ಕಥೆಗೆ ಸಮಕಾಲೀನ ಜೀವನ ದೃಷ್ಟಿ ಕೊಟ್ಟು. ಪಾತ್ರಗಳಲ್ಲಿ down to earth ಸ್ವಭಾವಗಳನ್ನು ತುಂಬಿ ಹೆಚ್ಚು ಲೋಕಪ್ರಿಯಗೊಳಿಸಿದ. ತನ್ನ ಕಾಲದ ಇತಿಹಾಸದ ಹಿನ್ನೆಲೆಯಲ್ಲಿ ಮಹಾಭಾರತ ವನ್ನು ಬಣ್ಣಿಸಿದ. ತನ್ನ ಆಶ್ರಯದಾತ ಮಿತ್ರನನ್ನು ಅನನ...
ತರ, ತಮ, ಗತಿ ಹುಟ್ಟೊಂದು ತರಗತಿ ಸಾವೊಂದು ಚರಮಗತಿ ಹುಟ್ಟು ಸಾವಿನ ಬಾಳು ಪರಮಗತಿ *****...
ಇದ್ದಕ್ಕಿದ್ದಂತೆ ಗಡಗಡ ಸದ್ದು ಹೊಯ್ದಾಟ ಇಣುಕಿದರೆ ಕಿಡಿಕಿಯಿಂದ ಕಗ್ಗತ್ತಲು ಭಯಾನಕ ಭೂಮಿ ಆಕಾಶಗಳೆಲ್ಲೋ- ಕಂಪನಿ ನಾಟಕದ ಕಪ್ಪು ತೆರೆಯಿಳಿದು ಲೈಟ್ ಮ್ಯೂಸಿಕ್ ಬ್ಯಾಂಡಿನವರೆಲ್ಲಾ ತಣ್ಣಗೆ ಡೈರೆಕ್ಟರ ಸೂರ್ಯ ಕ್ಯಾಶ್ ಎಣಿಸಿ ಜಾಗ ಖಾಲಿ ಮಾಡಿ ಎಲ್ಲ...
ಖಾಲಿ ಹಾಳೆಯ ಮೇಲೆ ಬರೆಯುವ ಮುನ್ನ ಚಿತ್ರ ಯೋಚಿಸಬೇಕಿತ್ತು ಯೋಚಿಸಲಿಲ್ಲ ಬರೆದೆ ವಿಧಿ ಬರೆದಂತೆ ಎಲ್ಲಾ ಪಾತ್ರಗಳು ಸುಮ್ಮನಿದ್ದವು ಮೂಕರಂತೆ ಕಾಲ ಕಳೆದಂತೆ ಕೆಲವು ಕೆಮ್ಮಿದವು ಹಲವು ಸೀನಿದವು ರೋಗ ಬಂದಂತೆ ಆಕಳಿಸಿದವು ನಿದ್ದೆ ಹಿಡಿದಂತೆ ಪಿಸುಗುಟ...
ಜೀವವಿಂದು ಏನೋ ಒಂದು ಮೋದಕೆ ವಶವಾಗಿದೆ ಕನಸೋ ಭ್ರಮೆಯೊ ಕಣ್ಣ ನವೆಯೊ ತರ್ಕ ಕಳಚಿ ಉರುಳಿದೆ ಬಾನ ತುಂಬ ಬೆಳಕ ಹೊಳೆ ಸೋರಿ ಭೂಮಿಗಿಳಿದಿದೆ ಧಾರೆ ಧಾರೆ ಸೇರಿ ಹರಿದು ನದಿ ಸಾಗರ ಮೂಡಿವೆ ಅಂಗಳದಲಿ ನಗುವ ಹೂವೆ ಆಗಸದಲು ಹೊಳೆದು ಜಗವನೆಲ್ಲ ಒಡೆದುಕೊಡುವ...
(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...
ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...
ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...






