ನನಗೆ ನೀನೂ ಒಂದೇ ಅವನೂ ಒಂದೇ
ನಿಮ್ಮ ಜಗಳ ಬೇಡಾಂತಾನೆ
ನಿಮ್ಮ ನಿಮ್ಮ ಇಷ್ಟದಂತೆ
ಒಬ್ಬನಿಗೆ ಹಗಲು, ಇನ್ನೊಬ್ಬನಿಗೆ
ರಾತ್ರಿ ಹಿಸೆ ಮಾಡಿಕೊಟ್ಟಿದ್ದೀನಿ
ನೀವುಗಳು ಅಂದುಕೊಂಡಿರೋದು
ಈ ಹಗಲು ರಾತ್ರಿಯೆಲ್ಲ ನಿಮ್ಮಿಂದ
ಆದ್ರೆ ದಯವಿಟ್ಟು ತಿಳಕೊಳ್ಳಿ ಅದೇನಿದ್ರು
ಆಗೋದು ನಾನು ಇಪ್ಪತ್ನಾಲ್ಕು ತಾಸೂ
ಸತ್ಕೊಂಡು ಬುಗುರಿ ಸುತ್ತೋದ್ರಿಂದ.
*****