ಇಳಕಲ್ಲಿನ ಭವ್ಯ ದರ್ಗಾ ನನ್ನ ಪ್ರೀತಿಯ ಪ್ರಶಾಂತ ವಿಹಾರ ಸ್ಥಾನ. ಇಂದು ಹೈವೇ ರಾಕ್ಷಸನ ಹಾವಳಿಗೆ ತುತ್ತಾಗಿ ಆ ದರ್ಗಾದ ಅಖಂಡ ಶಾಂತಿಗೆ ಭಂಗ ಬಂದಿದೆ. ಆದರೆ ಆ ಕಾಲದಲ್ಲಿ ಅದೇ ದರ್ಗಾ ಸುಂದರ ಸುಖದ ಶಾಂತಿಯ ಪರಿಸರವಾಗಿತ್ತು. ನನಗೆ ಭಾರಿ ಖುಷಿ ಕೊಟ...
ಮರದರೆಂಬೆ ಬೋಳಾಗಿ ಓಲಾಡಿದರೆ ಬಯಲಾಟ ರೆಂಬೆರೆಂಬೆಯು ಚಿಗುರಿ, ಹಕ್ಕಿ ಹಾಡಿದರೆ ವೃಂದಗಾನ ಕೋಲಾಟ! *****...
ಮೊದಮೊದಲೆಲ್ಲ ಈ ಮೋಡಗಳೊಳಗೆ ಬರೀ ಕಾವಿಧರಿಸಿ ಕಮಂಡಲ ಹಿಡಿದು ಋಷಿ ಮುನಿಗಳ ಸಮೂಹವೇ ಬಂದಂತಾಗಿ ಭೂ ಲೋಕದವರಿಗೆ ನೀರು ಸಿಂಪಡಿಸಿ ಸತ್ತವರನು ಉಳಿಸಿ ಆಶೀರ್ವದಿಸುವವರು ಕಾಣಿಸುತ್ತಿದ್ದರು- ನಂತರ ನಂತರ ಬುದ್ಧ, ಗಾಂಧಿ, ಹೀಗೆ ಹೀಗೆ- ತತ್ವ ಚಿಂತನೆಗಳ...
ಬೆಳಕಿನನುರಣದ…. ನಿತ್ಯ ಸರದಿಯೊಳಗೆ…. ದಿನಗಳರಳುತಿವೆ ಜೀವಂತ…. ಧಾವಂತ…. ನಿಯತಿಗಾಗಿ ನಿದ್ದೆ ಕಳೆದೆದ್ದವರ ಬದುಕಿಗಾಗಿ ಅವರವರು ತೆರೆದಿಟ್ಟ…. ಬಾಳ ಬಂಡಿಗಾಗಿ ಸ್ಪುರಣೆಗಳೆಲ್ಲದರ ಪರಿವೆಯಿರದೆ ಜಗದ ಜಂಗಮತೆಯ ...
ಮೊನ್ನೆ ಸುರಿದ ಭಾರಿ ಮಳೆಗೆ ಮನೆ-ಮನೆಗಳು ಒಡೆದು ಬಯಲು ಆಲಯವಾಯ್ತು ಸುತ್ತಿ ಸುಳಿದು ತಿರುಗಿದ ಇತಿಹಾಸ ಗಿರಿಗಿಟ್ಟಿಯಾಗಿ ಆಕಾಶ ನದಿ ಹಳ್ಳ ಕೊಳ್ಳಗಳು ವಿಕಾರಗಳಾದವು. ಅನ್ನ, ಹಸಿವು ನೀರು ನೀರಡಿಕೆ ಕರುಳಿಗೆ ಅಂಟಿಕೊಂಡ ಮಕ್ಕಳು ದಿಕ್ಕು ದಿಸೆಯಿಲ್...
ತಾರೆಯ ಚಿತ್ತಾರದ ಇರುಳಿನ ಹಸೆ ಕನಸಿನ ಆರತಿ ಆನಂದದ ದೆಸೆ ಕಳೆಯುತ ಕೂಡಿರೆ ಕಾಲದ ಉಡಿ ಕಿಸೆ, ನಸುಬೆಳಕಲಿ ಮುತ್ತಿತು ಚಂದ್ರನ ರಾಹು! ಹಗಲುದಯಕೆ ಕೈದಾಳವನುರುಳಿಸಿ, ಇರುಳಿನಳಿವಿಗೆ ರಕ್ತವ ಹೊರಳಿಸಿ, ದುಗುಡದ ಮೋಡದ ಕೆಂಪೆದೆ ಕೆರಳಿಸಿ, ನಸುಬೆಳಕಲಿ...
ಅಧ್ಯಾಯ ೨೩ ಪ್ರಭಾಕರ ರೆಡ್ಡಿ ಕೇಳಿದ : “ರಾಜಾರಾಮನಿಗೆ ಸ್ಟೇಟ್ಸ್ಗೆ ಹೋಗಲು ಪೋರ್ಡ್ ಫೌಂಡೇಶನ್ ನ ಹಣ ಕೊಡಿಸಿದ್ದಾರೆ ಗೊತ್ತೆ?” ರೆಡ್ಡಿ ತುಂಬಾ ರೇಗಿಕೊಂಡಂತಿತ್ತು. ತನಗೆ ಗ್ರಾಂಟ್ ಸಿಗಲಿಲ್ಲವೆಂದಲ್ಲ. ರೆಡ್ಡಿಯನ್ನು ಅರಿತವರು ಯಾ...
ಪ್ರೀತಿ ಇಲ್ಲದ ಮೇಲೆ ಪ್ರಜಾವಾಣಿ ಪತ್ರಿಕೆಯಲ್ಲಿ ಮೂಡಿ ಬರುವ ವರದಿಗಳು ಓದಿದ್ದು ಹೇಗೆ? ಪ್ರೀತಿ ಇಲ್ಲದ ಮೇಲೆ ಪ್ರಜಾವಾಣಿ ಮನೋರಂಜನ ಲೇಖನ ಓದಿ ಸಂತೋಷ ಪಟ್ಟಿದ್ದು ಹೇಗೆ? ಪ್ರೀತಿ ಇಲ್ಲದ ಮೇಲೆ ಚಿತ್ರದರ್ಶಿನಿ ಓದಿ ಸಂತೋಷದಿ ಪ್ರಜಾವಾಣಿಗೆ ಪತ್ರ ...
ಇರಿಯಲೆಂದೆ ಕಟ್ಟಿದ ಚಾಕು ಇರಿಯದಿರುವುದೆ ಎದುರಾಳಿಯ ಎದೆಹೊಕ್ಕು ಇರಿದು ತಣಿಯಬೇಕು ರಕ್ತದ ಮಡುವಿನಲ್ಲಿ ಮನುಕುಲದ ರೋಷ ಕಾಯಿಸಿದ ಉಕ್ಕು ಹತ್ತು ಹೇಂಟೆಗಳರಸ ಇನ್ನೆಷ್ಟೋ ಮರಿಗಳ ಮೂಲಪುರುಷ ಇಡಿಯ ಬಯಲನ್ನೆ ಅವಲೋಕಿಸಿ ನಿಂತಿದೆ ಹೇಗೆ ಕತ್ತೆತ್ತಿ ಕಣ...
ಗರ್ಭಗುಡಿಯ ಕತ್ತಲು ಜಡಿದ ಬಾಗಿಲ ಬೀಗ ಶಿವನು ಆಗಿಹನೆ ಅಲ್ಲಿ ಬಂಧಿ ವಿಶ್ವ ಕರ್ತನ ತಂದು ಗುಡಿಯ ಬಂಧನವಿಟ್ಟು ಮೆರೆದ ಮೌಢ್ಯವು ಮನುಜ ಬುದ್ಧಿ ಹಲವು ನಾಮದ ಒಡೆಯ ಸಕಲ ಸೃಷ್ಟಿಯ ಸುಧೆಯ ಹರಿಸುವಾತಗೆ ಬೇಕೆ ಒಂದು ಮನೆಯು ಜೀವ ಜೀವದ ಒಳಗೆ ಹುದುಗಿರುವ ...
(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...
ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...
ಮಧ್ಯಾಹ್ನ ಸೂರ್ಯನು ಆಕಾಶವೃಕ್ಷವನ್ನು ಏರಿದ್ದನು. ಅವನ ಉಷ್ಣವಾದ ಕಿರಣಗಳು ದೇವಗಿರಿಯ ರಾಜಮಾರ್ಗಗಳನ್ನು ತಪ್ತಮಾಡುತ್ತಲಿದ್ದುವು. ಅತ್ತಿತ್ತ ಮೇಯುತ್ತಿದ್ದ ಗೋವುಗಳು ವೃಕ್ಷಛಾಯೆಯನ್ನು ಆಶ್ರಯಿಸಿ, ವಿಶ್ರಾಂತಿಯಿಂದ ಮೆಲುಕಾಡುತ್ತಿದ್ದುವು; ಆಗಾಗ ಬಾಲಗಳನ್ನು ಬೀಸುತ್ತ, ಬೆನ್ನಮೇಲಿನ ...







