Home / ಕವನ / ಕವಿತೆ / ವರ್‍ಡ್ಸವರ್ಥನ ಸಮಾಧಿಸ್ಥಾನ

ವರ್‍ಡ್ಸವರ್ಥನ ಸಮಾಧಿಸ್ಥಾನ

ಇಲ್ಲಿ ಕವಿಯ ದೃಷ್ಟಿಯರಳಿ
ಮಾಗಿತವನ ಜೀವವು.
ಇಲ್ಲಿ ಕೊಳದ ಬಳಿಗೆ ಬರಲು
ಕೊನರಿತವನ ಭಾವವು.
ಗಿರಿಕ೦ದರದೀ ಸುಂದರ ಸೀಮೆಯನ್ನೆ ತುಂಬಿತು
ಕವಿಯ ಪ್ರತಿಭೆ, ಪ್ರಕೃತಿದೇವಿಯೊಲವನೊಂದೆ ನಂಬಿತು.
ರವಿಯ ದಿನದ ಬೆಳಗು-ಮುಳುಗು
ಜಲಪಾತದ ಹಿರಿಯ ಮೊಳಗು
ಮಳೆಬಿಲ್ಲಿನ ಮಣಿತವು
ಎಳೆಹುಲ್ಲಿನ ಕುಣಿತವು
ಕುಕೂ ಎಂದು ಕರೆವ ಹಕ್ಕಿ,
ದೂರ ಮಿನುಗುತಿರುವ ಚಿಕ್ಕಿ
ತಾನು ತೇಲಿ ತನ್ನ ನೆಳಲ
ತೇಲಿಸಿರುವ ಹಂಸದಮಲ
ಶೋಭೆಗೆಲ್ಲ ಹರುಷಗೊಂಡು ಪಕ್ಕ ಬಲಿತು ಹಾರಿತು:
ಕವಿಯೆ! ನಿನ್ನ ಭಾವ ನಭೋಮಂಡಲವನೆ ಮೀರಿತು.

ಇಲ್ಲಿ ನಿಂತು ನೋಡೆ ಮುಗಿಲು
ಸಾಲುಗೊಂಡು ರಾತ್ರಿ ಹಗಲು
ಆಲೆಯುತಲೆಯುತಲೆಯುತಿರುವವು
ಮತ್ತೆ
ಗ್ರಾಸಮಿಯರ ಶೃಂಗದೊಡನೆ ಮಲೆಯುತಿರುವವು.
ಹಚ್ಚ ಹಸಿರು ಕೆಳಗೆ ಮೇಲೆ
ಕುರಿಹಿಂಡಿವು ಸಾಲು ಸಾಲೆ
ಮೇಯುಮೇಯುಮೇಯುತಿರುವವು.
ಮೇದು
ಲಾಂಗಡೇಲದೆಡೆಗೆ ದಾರಿ ಕಾಯುತಿರುವವು.

ನೋಡು! ಬಣ್ಣ ಬಣ್ಣದರಳು
ಪ್ರಕೃತಿದೇವಿಯಿಟ್ಟ ಹರಳು:
ನೆನಹು ಹೂವು, ಡ್ಯಾಫೊಡಿಲ್ಲು,
ನರಿಕುಲಾಯಿ,-ನೋಡಿದಲ್ಲು!
ಶೋಭಿಸಿರಲು ಡಾರಾಯಡಲ್ಲ ತುಂಗಶೃಂಗವು,-
ಸವಿದಿತದನು ಕಮಲದಂತೆ ಜೀವಭೃಂಗವು!

ಫಲಿಸಿತಿಲ್ಲಿ ಆ ಸಮಾಧಿ:
ಅದಕೆ ದಿವ್ಯ ಸ್ಥಾನವಿದು!
ತಿಳಿಯಿತಿಹದ ಅಂತ್ಯ, ಆದಿ!
ಎಂಥ ಹಿರಿಯ ಮೌನವಿದು!
ಓ! ಕವಿಸಮ್ರಾಟ! ತಿಳಿದೆ ನಿನ್ನ ಪ್ರತಿಭೆಯಾಟಪಾಟ
ಜರುಗಿತಿಲ್ಲಿ,-ಇಲ್ಲಿ ತುಂಬಿ ಬಂತು ನಿನ್ನ ದಿವ್ಯನೋಟ!
ಗ್ರಾಸಮಿಯರ ಕೊಳದ ಬಳಿಗೆ ನಿಂತು ಕುರಿತೆನು;
ಪ್ರಕೃತಿ-ಪುರುಷರಮರಲೀಲೆಯೆಲ್ಲವರಿತೆನು!
*****

Tagged:

Leave a Reply

Your email address will not be published. Required fields are marked *

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...