ಪಡುವಣದ ಕಡಲಿನೊಳು ಪರಮಾಪ್ತ ಪರಧಿಯೊಳು ನೇಸರನ ಮಡಿ ಸ್ನಾನ ಚಿಮ್ಮಿಸಿದೆ ಧರೆಯೊಳಗೆ ಕೆಂಬಣ್ಣ ಹೊಂಬಣ್ಣ ನೀರಿನಾಳದಲಿ ಫಳಫಳನೆ ಮಿಂಚಿ ಮತ್ಸ್ಯಗಳು ಕುಣಿದಿರೆ ಅಂಬುಧಿಯ ತಟದೊಳಗೆ ಕೌಪೀನ ಕಳಚಿ ಮರಿ ಮತ್ಸ್ಯಗಾರರು ಉಬ್ಬರಿಸ ಅಲೆಯೊಳಗೆ ಜೋಕಾಲಿ ಆಡುತಿ...
ಆಕಾಶ ಇಬ್ಬನಿಯ ಹಾಗೆ ಕರಗುತ್ತಲಿದೆ. ಸೂರ್ಯ ಬಾವಲಿಯಾಗಿದ್ದಾನೆ. ಬೆಟ್ಟಗುಡ್ಡ, ಕಣಿವೆ-ಕಂದರಗಳು ಚಂದಿರನನ್ನು ನುಂಗುತ್ತಲಿವೆ. ಚುಕ್ಕಿಗಳ ಕಂಗಳಿಗೆ ಪೊರೆ ಬಂದಿದೆ. ಮೋಡಗಳು ರೆಕ್ಕೆ ಕಟ್ಟಿಕೊಂಡು ವಲಸೆ ಹೋಗುತ್ತಿವೆ. ಕಪ್ಪನ್ನು ಹೊದ್ದ ರಸ್ತೆಗಳು...
ದಿನವೂ ಅದರ ದಂಡೆ ಮೇಲೆ ವಾಕ್ ಹೋಗುವ ಆ ಕೆರೆ ಕಂಡರೆ ನನಗೆ ಪಂಚಪ್ರಾಣ ಆದರೇನು ಮಾಡೋಣ ಕೆಲವು ನತದೃಷ್ಟರಿಗೆ ಆ ಕೆರೆ ಪ್ರಾಣ ಬಿಡಲಿಕ್ಕೆ ಆಗಿಬಿಟ್ಟಿದೆ ಖಾಯಂ ತಾಣ. *****...
(ಮಕ್ಕಳ ಗೀತೆ) ಪಕ್ಕ ತೊಟ್ಟು ಚುಕ್ಕಿಯತ್ತ ಹಕ್ಕಿಯಾಗಿ ಹಾರುವೆ ರಾಮ ಲೋಕ ಹನುಮ ಲೋಕ ದೇವಲೋಕ ಸೇರುವೆ ಜನ್ಮ ಲೋಕ ಜಡದ ಲೋಕ ಪರ್ಣ ಕುಟಿರ ಮಾಡುವೆ ಚಂದ್ರ ಲೋಕ ಸೂರ್ಯ ಲೋಕ ಶಿವನ ಲೋಕ ಸೇರುವೆ ವರ್ಣ ವಿರಸ ವರ್ಗ ವಿರಸ ಜೇನುತುಪ್ಪ ಮಾಡುವೆ ಪ್ರೇಮ ಭಾ...
ಬಯಲ ಸೀಮಿ ಮಾಳಿಗೆಯ ಮೇಲೆ ಅಂಗಾತ ಮಲಗುವ ಚಟವಿದ್ದವರಿಗೆ ಈ ಮುಗಿಲಮಾವನ ಪ್ರೇಮ ಪ್ರಸಂಗಗಳು ಪುರಮಾಶಿ ಲಭ್ಯ! ಆ ಮಾಳಿಗೆ… ಆ ಗಾಳಿ…. ಆ ಏಕಾಂತದೊಂದಿಗೆ ಗಗನದ ತುಂಬಾ ಗಗನಾಕಾರವಾಗಿ ತೇಲಾಡುವ ಚೈತನ್ಯ ನೌಕೆಗಳು… ಮುಗಿಲ ಅಂಗಳದಿಂದ ಮನೆಯ ಅಂಗಳಕ್ಕೆ ತ...
ದಾವಾನಲ ಧಾರಿಣಿ ಜಲ ಆಗಸ ಅನಿಲದಲಿ, ಮಾಯದ ಗಾಯದ ಮಣ್ಣಿನ ಕಾಯದ ಹಂಗಿನಲಿ, ಸಾರದ ಸೇರದ ಎಂದೂ ಆರದ ಘನತರಣಿ, ಇರುಳಾಳುವ ಮನದಾಳಕೆ ಸುರಿ ಕಿರಣವ ಕರುಣಿ. ಎದೆಯಾಳದಿ ಎವೆತೆರೆದಿವೆ ಗತಭವಗಳು ಹೊರಳಿ, ಎಂದಿನ ಸ್ಮರಣೆಯ ಅರಣಿಯೊ ಹೊಗೆಯಾಡಿದೆ ನರಳಿ, ಮೇಲ...
ರೊಟ್ಟಿ ಈಗ ನಿರಾಳ ಕೊನೆಗೂ ಅರಿವಾಗಿದೆ ಜಗಳ, ಮುನಿಸುಗಳು ಹಸಿವಿನೊಂದಿಗಲ್ಲ ಎಂದು....
ಬೇರಿಂದ ರೆಂಬೆಯಲಿ ಚಿಗುರು ಚೈತ್ರ ವನವಾಯಿತು ಎಲೆ ನಡುವೆ ಮೊಗ್ಗಾಗಿ ಹೂವರಳಿ ಸ್ವರ್ಗವಾಯಿತು ಮೋಡದಲಿ ಹನಿಯಾಗಿ ಅಮೃತ ವರ್ಷವಾಯಿತು ಚಂದ್ರನಲಿ ಬೆಳದಿಂಗಳು ಬೆಳ್ಳಿ ಲಿಪಿ ಬರೆಯಿತು ಎನ್ನೆದೆಯ ವೀಣೆಯಲಿ ಕವಿತೆ ತಂತಿ ಮೀಟಿತು *****...
ನನಗೆಂದೂ ಅದೃಷ್ಟ ಒಲಿದಿಲ್ಲ ಈಗಲೂ ಸಹ ನಾನದನ್ನು ಪಡೆಯಬಯಸಿಲ್ಲ ನಿಜವಾಗಿ ಅದರಿಂದ ನನಗೇನೂ ಆಗಬೇಕಿಲ್ಲ ಯಾಕೆನ್ನಿ ನಾನೀಗ ಸುಖಿಯಾಗಿಯೇ ಇದ್ದೇನಲ್ಲ ! ಸಾಗುತಿರುವ ನನ್ನೀ ಪಯಣದ ದಾರಿಯಲಿ ಬಿತ್ತಿದ್ದಕ್ಕಿಂತ ಹೆಚ್ಚಿನದನ್ನೇ ಬೆಳೆದಿದ್ದೇನೆ. ನಾ ಬಸ...
ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್ಲಾ ನೆನೆದುದಲ್ಲದೆ, ಕಟ್ಟಿದ್ದ ಕಾಚ ...
(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...
ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...






