ಯೌವನಕ್ಕೆ ಬಂದ ಯುವತಿಯೇ ನನ್ನನ್ನು
ಕಂಡು ಎಷ್ಟೊಂದು ಹಲುಬುತಿದಿ
ನನ್ನ ದೃಷ್ಟಿಯನ್ನಿಯುವಲ್ಲಿ ನೀನಿರುವೇ
ನಾನಿದ್ದಲಿಗೆ ತಾನಾಗಿಯೇ ಓಡೋಡಿ ಬರುವೆ.

ಪ್ರೇಮವೆಂಬ ರೋಗವನ್ನು ಬೆನ್ನಟ್ಟಿದಿ
ಮುಂದೆ ಬಂದಾಗ ಏನಾದರೂ ಹೇಳಲು
ಬಯಸತ್ತಿದೆ ದಿಕ್ಕೂ ತೋಚಲಾರದೇ
ಮುಂದೆ ಅಲ್ಲಿಂದಿಲ್ಲಿಗೆ ಅಲೆದಾಡುತ್ತಿರುವೇ

ಪ್ರೀತಿಯೆಂಬ ವಿಷದ ಬೀಜದಲ್ಲಿ ನೀ
ನಿನ್ನನೆ ಮರೆತು ನನ್ನನ್ನು ಬೆರೆಸುತ್ತಿರುವವೇ
ತಾನು ಹಾಳಾಗುತ್ತಿದದ್ದನ್ನು ಅರಿಯದೇ
ನನ್ನನ್ನು ಆ ಹಾಳು ಬಾವಿಗೆ ತಳ್ಳುತ್ತಿರುವೇ

ಮಂದಿರಕೆ ಬಂದರೂ ನನ್ನನ್ನು ಏಕೆ
ಕಾಮುಕ ದೃಷ್ಟಿಯನ್ನಿಯಿತ್ತಿರುವಿ
ನಿಮ್ಮಂಥ ಕಾಮವನ್ನು ಬಯಸುವವರಿಗೆ
ಎಲ್ಲಿದೆ ದೇವರು? ಎಲ್ಲಿದೇ ಮಂದಿರ?

ಯೌವನದ ಜೀವನ ಸಾಗಿಸುವ ಯುವತಿಗೆ
ಕಾಮವನ್ನು ತನ್ನದಾಗಿಸಿಕೊಂಡಲಿಯೇ!
ಸರ್ವ, ಸಂಪನ್ನ, ಅಲ್ಲಿಯೇ ದೇವರು
ಅಲ್ಲಿಯೇ ಸ್ವರ್ಗವೂ ಕಂಡುಕೊಳ್ಳುವರು.

ಕಾಮದಾಸೆಗೆ ಕಾಯುತ್ತಿದೆ ನನ್ನನ್ನು
ನನ್ನ ಮೇಲೆ ಇಟ್ಟ ನಿನ್ನ ಕಾಮುಕತನವ
ಬಿಟ್ಟು ಬಿಡು ಗೆಳತಿ ನಿನ್ನದಾರಿ ನೀ ನೋಡಿಕೋ
ನಿನ್ನ ಮೂರ್ಖತನವು ಈಗಲಾದರೂ ಬಿಟ್ಟುಬಿಡು

ಯೌವನಕ್ಕೆ ಬಂದ ಯುವತಿಯೇ
ಈಗಲಾದರೂ ಬಿಡು ನಿನ್ನ ಹಟಮಾರಿತನ
ಬೇರೆ ಯುವಕನನ್ನು ನೋಡಿಕೋ ಗೆಳತಿ
ಆ ಹಾಳು ಬಾವಿಗೆ ನನ್ನನ್ನು ದೂಡಬೇಡವೆಂದು
ನಿನ್ನಲ್ಲಿ ಕೈಮುಗಿದು ಪ್ರಾರ್ಥಿಸುವೆನು.
*****

ಧರ್ಮೇಂದ್ರ ಪೂಜಾರಿ ಬಗ್ದೂರಿ
Latest posts by ಧರ್ಮೇಂದ್ರ ಪೂಜಾರಿ ಬಗ್ದೂರಿ (see all)