ಇಳಿ ಹೊತ್ತು ಆದಾಗ ಎಳೆ ಸೂರ್‍ಯ ನಡೆದಾಗ ತಳ ತಳ ಹೊಳೆಯುವಾ ಸೊಗಸನ ನೋಡು || ೧ || ಇಕೊ ಬನ ವನ ಸಿರಿಯು ನೂಕುವದು ಎದೆಯಲ್ಲಿ ಬೇಕಾದ ಒಸ್ತುಗಳು ನೋಡುವವು ನಮ್ಮ || ೨ || ಬಳ್ಳಿಯಾ ಬನವೆಂದು ಎಳೆಮಲರು ಹೂವುಗಳು ಇಳಿ ಹೊತ್ತು ಕಂಡು ಬಿಸಿ ಉಸಿರಪಡುವವು || ೩ || ಬಾಬಾರೆ ಚೆಲುವನಲ್ಲೆ ಬಾರೇ ಎನ್ನ ಬಳೀ ಕರೆತಿಹದು...

ಜೋಜೋ ಜೋಜೋ ಜೋಜೀಜಿ ಜೋಜೋ ತಾಯಿಯಿಲ್ಲದ ಕಂದ ಜೋಜೋ ಲಾಲೀ ಲಾಲೀ ಲಾಲೀ ಲಾಲೀ ತಂದೆಯಿಲ್ಲದ ಕಂದ ಜೋಜೋ ಕಮಲದ ಹೂ ನೀನು ಹವಳದ ಕುಡಿ ನೀನು ತುಂತುಂ ತುಂಬಿದಾ ಸುವ್ವಾಲಾಲಿ ಚಂದ್ರಲೋಕದ ಬೆಣ್ಣಿ ಸೂರ್ಯಲೋಕದ ತುಪ್ಪ ಚುಂಚಂ ಚುಂಚುಂ ಚಂದ್ರಲಾಲಿ ನನಸೀರಿ ನ...

ಪ್ರಿಯ ಸಖಿ, ಪುಸ್ತಕದಿ ದೊರೆತರಿವು ಮಸ್ತಕದಿ ತಳೆದಮಣಿ. ಚಿತ್ತದೊಳು ಬೆಳೆದರಿವು ತರು ತಳೆದ ಪುಷ್ಪ ಎಂದು ನಮ್ಮ ಹಿರಿಯರು ಹೇಳಿದ್ದಾರೆ. ಪುಸ್ತಕ ಜ್ಞಾನವು ಬಹಿರಂಗ ವ್ಯಾಪ್ತಿಯಲ್ಲಿ ಬರುವುದು. ಚಿಂತನೆ ಜನ್ಯವಾದ ಜ್ಞಾನವು ಅಂತರಂಗ ವ್ಯಾಪ್ತಿಯಾದುದ...

ಹೊಳೆಸಾಲಿನ ಮರಕ್ಕೆ ನಿಂತ ನೆಲವೇ ವರ ; ಇಳಿಸುತ್ತದೆ ಬೇರನ್ನು ಅಳಕ್ಕೆ, ಅಗಲಕ್ಕೆ ನೀರಿನ ಯೋಚನೆ ಎಲ್ಲಿದೆ ಅದಕ್ಕೆ ? ಹೊಳೆಸಾಲಿನ ಮರದ ತಲೆತುಂಬ ಫಳಫಳ ಎಲೆ, ಕೆಳಗೆ ನದಿಯುದ್ದ ಏರಿಳಿಯುವ ಜುಳು ಜುಳು ಅಲೆ. ನೀರಿನ ವಿಶಾಲ ಕನ್ನಡಿ ಹೊಳೆಯುತ್ತ ಬಿದ...

ಇಲ್ಲಿ ಹಸುರ ಹಸುರಿಗೆಚಿಗುರು ಹೂವ ಕಂಪುಬಳ್ಳಿ ಬಳ್ಳಿ ತೇಲಿ ಸೂಸಿಗುಂಗಿ ಗಾನ ಇಂಪು. ನೆರಳಕಾವ ಮುಗಿಲಮೋಡಇಣುಕಿ ಸೂರ್ಯ ಬೆಳಕ ಚೆಲ್ಲಿಇಬ್ಬನಿ ಹನಿ ಹನಿ ಮುತ್ತು ಹರಡಿದಂಡೆಯಾಗಿ ಸೇವಂತಿಗೆ ಮಲ್ಲಿಗೆ. ಮೆದು ಹಸಿರು ಎಳೆಹೆಸರುಚಾಪೆ ಹಾಸಿ ತಿಳಿಗಾಳಿಸ...

ನಿನ್ನ ಬಗೆಗೆ ಎಷ್ಟೊ ಕನಸುಗಳೂ ಕಟ್ಟಿಕೊಳ್ಳುತ್ತಿದ್ದೇನೆ ಎಂದೆ- ಬೆಚ್ಚಿಬಿದ್ದೆ, ತಿರುಕನ ಕನಸಿನಂತಾದೀತು ತಿರುಕಿಯಾಗಬೇಡ ಎಂದಾಗ....

ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು… ಡೆವಿಲ್ ವರ್ಕ್‌ಶಾಪು…!! ಯಾರಿಗ್ಯಾರಿಲ್ಲ. ಎಲ್ಲನೂ ಮ್ಯಾನೇಜರ್ ಕುತ್ತ...

ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್ಲಾ ನೆನೆದುದಲ್ಲದೆ, ಕಟ್ಟಿದ್ದ ಕಾಚ ...

ಲಲಿತೆ ಬಾಲವಿದವೆ. ಮದುವೆಯಾದ ಮೂರು ತಿಂಗಳಿಗೆ ಗಂಡ ಸಿಡುಬಿನಲ್ಲಿ ಸತ್ತ. ಲಲಿತೆ ಕುಂಕುಮವಳಿಸಿದಳು. ಒಂದೆರಡು ತಿಂಗಳ ನಂತರ ಕಣ್ಣೀರನ್ನೊರೆಸಿ ಮುಖ ತೊಳೆದುಕೊಂಡು ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದಳು. ಅವಳು ಆಗ ತಾನೇ ಇಂಟಿರ್‌ ಮೀಡಿಯಟ್‌ ಪಾಸುಮಾಡಿದ್ದಳು. ಎಂ. ಬಿ. ಬಿ. ಎಸ್...

ತೆಂಕಣದಿ ಹದಿನಾರು ಮೈಲಿಗಳಾಚಿ ಬಾಂದಳಕೆ ಭುಜಗೊಟ್ಟು ನಿಂತಿರುವ ಸಿಂಹಗಡವೇ-ಇದೋ ನಿನಗೆ ತಲೆಬಾಗುವೆನು. ಶತಮಾನಗಳ ಹಿಂದೆ, ನರಜಾತಿಯಲಿ ಹರಿಯಂತೆ ಮೆರೆದ ವೀರಲೀಲಾಲೋಲ ಶಿವಪ್ರಭುವನು ಶಿರದಲಿ ಹೊತ್ತು ಮೆರೆಯಿಸಿದ ಸಿಂಹಗಡವೇ ಇದೋ-ನಿನಗೆ ವಂದಿಸುವೆನು. ಅಂದು ನಮ್ಮ ನಾಡಿನ ಧರ್‍ಮ-ನಮ್ಮ ಹ...

(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...

ಕತ್ತಲ್ಗಡಲ ತಳದಲಿತ್ತು ಲೋಕ. ಕೋಟಿ ತಾರೆಗಳಿಂದ ಕಿಕ್ಕಿರಿದ ಗಗನತಲ, ನಿಶಾಸುಂದರಿಯ ವಜ್ರಖಚಿತ ನೀಲಾಂಬರದ, ಹರಡಿದ ಸೆರಗಿನಂತೆ ಶೋಭಿಸಿತ್ತು. ನೀರವ! ನಿಶ್ಚಲ! ಅನಿಲನು ಕೂಡ ದಿನವೆಲ್ಲ ಅಲೆದಲೆದು, ಸೊಕ್ಕಿ ಮೆರೆದು ಸೊರಗಿ ಸೋತು ಸುಮ್ಮನಿದ್ದ. ಒಂದು ಮನೆ. ಅದರ ಹೆಸರು “ಮಾಯಾಲಯ...

ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...