Home / ಕವನ / ಕವಿತೆ / ಉಮರ ಸಂದೇಶ

ಉಮರ ಸಂದೇಶ


ನಶ್ವರವು ಜಗದಲ್ಲಿ ನರನ ಬಾಳದರಿಂದ
ಇರುವಲ್ಪದಿನಗಳಲಿ ವ್ಯಥೆ-ಚೆ೦ತೆಯೇಕೆ?
ಮತ್ಯುವೊ೦ದತಿಸತ್ಯವಾಗಿರಲು ನಾವಿಂದು
ಸುಖ ಹೀರಬೇಕು; ನಾಳೆಯನೆಣಿಸಬೇಕೇ?


ಸತ್ತ ಮೇಲೇನೆಂದು ತಿಳಿದವರು ಯಾರಿಲ್ಲ.
ಎಷ್ಟೊ ಜನ ಹೋಗಿಹರು, ಬಂದವರ ಕಾಣೆ.
ಸೊಗವಡುವುದೇ ನಾಕವಳಲುವುದೆ ದಿಟ ನರಕ.
ಸತ್ತ ಮೇಲೆಲ್ಲರೂ ಒ೦ದು ಹಿಡಿ ಮಣ್ಣೇ.


ವಿಧಿಯದೃಷ್ಟದ ಬಲುಮೆ ನರನ ಕುಣಿಸುವುದಿಲ್ಲಿ.
ಬಂದುದನ್ನನುಭವಿಸಬೇಕು. ಕೊರಗುವುದೇ?
ಹಿರಿಯಾಸೆ ಬೇಡ, ಮಿತ ಸರಳತೆಯೆ ಸಾಕೆಮಗೆ.
ಇಹ ಸುಖವು ಶೂನ್ಯವೆನೆ ಪರವು ದಿಟವಿಹುದೇ?


ಪ್ರೇಮವೆಂಬುದೆ ಮುಖ್ಯ, ದ್ರಾಕ್ಷಾಸವವೆ ಸೌಖ್ಯ,
ನಲ್ಲೆಯುಗುರಿನ ಸಿತಾರದ ಮಿಡಿತದಿಂಪು,
ಮನದನ್ನೆ ತುಟಿಯೊತ್ತು, ನಲ್ಗಬ್ಬ ಬಳಿಯಿರವು,
ಇಷ್ಟಿರಲು ರೊಟ್ಟಿಯಿರೆ ಅದೆ ಸಗ್ಗ ಸೊಂಪು


ಸತ್ಯವಾವುದೊ ಏನೊ, ಒಬ್ಬೊಬ್ಬರೂಂದೊಂದು
ನುಡಿಯುವರು: ಹೇಳಿಕೆಯೊಳಲ್ಲವೊಮ್ಮತವು
ಆಯುಸ್ಸು ಮಿತವಿಹುದು, ಚಿ೦ತಿಯಮಿತವದಿರಲು
ಬೇಕು ದೊರೆತಷ್ಟು ಸುಖವುಲ್ಲಾಸದಿರವು


ಪುಣ್ಯವೋ ಪಾಪವೋ ಮಸಣದೊಳಗೊಂದೆ ತೆರ
ನಮ್ಮ ಮೈ ಮಣ್ಣಾಗಿ ಘಟವಾಗಬಹುದು.
ಇಂದು ಮನವನು ಸೂರೆಗೊಂಡ ಸೊಬಗೇ ನಾಳೆ
ದೂಳಿನಲಿ ದೂಳಾಗಿ, ತಿರುಗಿ ಹೂವಹುದು


ಎಷ್ಟು ಸುಖ ಪಡೆದಷ್ಟು ಲಾಭವೇ ನಮಗಹುದು.
ನಶ್ವರದ ಲೋಕದಲಿ ತಡದಿರವು ಸಲ್ಲ
ಬಾ ಹೀರು ಮಧುವನ್ನು ತಡವೇಕೆ? ತಡೆಯೇಕೆ?
ಉಮರ ಸಂದೇಶವಿದು. ಆಲಿಸೀ ಸೊಲ್ಲ
*****
ಶ್ರೀ.ಡಿ.ವಿ.ಗು೦ಡಪ್ಪನವರ ‘ಉಮರನ ಒಸಗೆ‘ ಯನ್ನು ಓದಿದ ಮೇಲೆ ಬರೆದುದು.
೧೯೪೫

Tagged:

Leave a Reply

Your email address will not be published. Required fields are marked *

ಬಣಸಾಲೆ ಮುಂದಿನಿಂದ ಹೆಜ್ಜೆ ಹಾಕುವಾಗ ಹೊತ್ತು ಕಂತಿದ್ದು ಲಕ್ಷ್ಯಕ್ಕೆ ಬಂದಿರಲಿಲ್ಲ. ಆಚೀಚಿನ ಹನೆಮರದೆತ್ತರದ ತೇಗ-ಮಾವುಗಳ ಟಿಸಿಲುಗಳಲ್ಲಿ ಹಕ್ಕಿಗಳ ಗರಿ ಒದರುವ ಸರಪರ. ತಾರಕ ಸ್ವರದ ಮಕ್ಕಳಾಟ ವೀಕ್ಷಿಸುತ್ತಾ ರಸ್ತೇಲಿ ಬಿದ್ದಿದ್ದ ಸಣ್ಣ ಸಣ್ಣ ಕಲ್ಲುಗಳನ್ನು ಕಾಲಿನಿಂದ ಚಿಮ್ಮುತ್ತಾ...

ಬೆಳಕಿನಿಂದ ಜಗಜಗಿಸುವ ಸಂಜೆ ರಾವು ಬಡಿದಂತೆ ಮಬ್ಬಾಗಿತ್ತು. ಈ ಮಬ್ಬು ಹಿಂದೆಂದೂ ಇದಿಲ್ಲ. ದೇಶದ ಹದಿನೇಳು ವರ್ಷದ ಸ್ವಾತಂತ್ರದಲ್ಲಿ, ಮಧ್ಯಮ ತರಗತಿಯ ಜೀವನ ಕೈ ಬಾಯಿಯಾಗಿದ್ದರೂ ದೂರದ ಆಶಯ ಹೊಂಗಿರಣವೊಂದು ಸದಾ ಹೊಳೆದು ಭಾವೀ ಪೀಳಿಗೆಯ ಮನೋಲ್ಲಾಸ ಮಾಡುತ್ತಿತ್ತು. ಆದರೆ ಈ ಮಬ್ಬುಗತ್ತ...

ಅವಳು ಯಾವ ಹುಡುಗರ ಜೊತ ನಿಂತು ಮಾತನಾಡಿದರೂ ಶ್ರೀಕಾಂತನಪಾಲಿಗೆ ಆ ಹುಡುಗರು ವಿಲನ್‌ಗಳಂತೆಯೇ ಭಾಸವಾಗುತ್ತಿದ್ದರು. ಅವಳು ತನ್ನ ಕಾಲೇಜಿನ ಲೆಕ್ಚರರ್‌ಗಳು ಪಾಠ ಮಾಡುವ ವೈಖರಿ ಸ್ಟೈಲು ಹೈಲುಗಳ ಕುರಿತು ಬಣ್ಣಿಸುವಾಗಲೂ ಕೇಳಲಾಗದೆ ಶ್ರೀಯ ಹೊಟ್ಟೆಯಲೆಲ್ಲಾ ತಳಮಳ. ಅಷ್ಟೇಕೆ ಅವಳು ತನ್ನ ತ...

ಬೆಳಿಗ್ಗೆ ಏಳರ ಸಮಯ ಮೈಸೂರಿನ ರೋಹಿಣಿ ಲಾಡ್ಜ್‌ನ ಕೊಠಡಿ ಸಂಖ್ಯೆ ೧೦೩. ಪೋಲೀಸರು, ಪತ್ರಕರ್ತರು, ಫೊಟೋ ಗ್ರಾಫರ್‌ಗಳಿಂದ ತುಂಬಿಹೋಗಿದೆ. ಬೆಳ್ಳಂ ಬೆಳಿಗ್ಗೆಯೇ ಯುವತಿಯೊಬ್ಬಳ ಕೊಲೆ ನಡೆದುಹೋಗಿದೆ. ಲಾಡ್ಜ್‌ನ ಹೊರಗೆ ಜನರು ಕುತೂಹಲಭರಿತರಾಗಿ ಸೇರಿದ್ದಾರೆ. ಸೇರಿದ್ದ ಜನರನ್ನು ನಿಯಂತ್ರ...

೧ ಗೌರಿಯ ಹಬ್ಬವು ಕಳೆದು ಕೆಲವು ದಿನಗಳಾಗಿದ್ದುವು. ಭಾಗೀರಥಮ್ಮನೂ ಅವಳ ಜೊತೆಯ ಹುಡುಗಿಯರೂ ಒಂದೊಂದು ದಿನವನ್ನು ಕಳೆಯುವುದೂ ಒಂದೊಂದು ಯುಗವನ್ನು ಕಳೆದಂತೆ ಕಷ್ಟವಾಗಿದ್ದಿತು. ಅವರು ಎಷ್ಟು ಕುತೂಹಲದಿಂದ ಬಯಸಿದರೂ ದಿನಗಳು ಬೇಗ ಬೇಗ ಉರುಳಲೊಲ್ಲವು. ಒಂದು ದಿನ ಅವರೆಲ್ಲರೂ ಸೇರಿ ಕವಡೆಯ...

ಸಂಜೆ ನಾಲ್ಕು ಗಂಟೆಯಾದರೆ ಸಾಕು. ಅವರೆಲ್ಲರೂ ಒಬ್ಬೊಬ್ಬರಾಗಿ ಬಂದು ಸೇರುತ್ತಾರೆ. ಅದೊಂದು ಪಂಚಾಯಿತಿ ಕಟ್ಟೆ ಇದ್ದಂತೆ. ಮಧ್ಯದಲ್ಲೊಂದು ಸಿಮೆಂಟ್ ಬೆಂಚು, ಅದರ ಎಡ, ಬಲ ಎರಡೂ ಕಡೆ ಇವರೇ ಒಂದಷ್ಟು ಕಲ್ಲು ಚಪ್ಪಡಿಗಳನ್ನು ಎಳೆದು ತಂದು ಕೊಡುವುದಕ್ಕೆ ಪೀಠಗಳನ್ನು ಮಾಡಿಕೊಂಡಿದ್ದಾರೆ. ಸ...