ಹಸಿವಿನ ಸ್ವಾರ್ಥಕ್ಕೆ ಸಿಕ್ಕು
ನುಚ್ಚು ನೂರಾಗುವ
ರೊಟ್ಟಿಯೆಂಬೋ ಸಂತ
ಹಸಿವಿನ ಒಡಲಲ್ಲಿ
ಸದ್ದಿಲ್ಲದೇ ಮೆಲ್ಲನೆ
ಬಿತ್ತುತ್ತದೆ ಸಾವಿರಾರು
ಪ್ರೀತಿಯ ಬೀಜ.