ಯಾರು ಕೊಟ್ಟಿದ್ದೆ ಶಾಪ?
ಬರಿತಾಪ, ಪರಿತಾಪ
ಧರ್ಮ ಕರ್ಮದ ಗೆರೆ
ಎಳೆದವರಲ್ಲವೇ
ಅನುಕೂಲ ಸಿಂಧು
ಶಾಸ್ತ್ರಸಮ್ಮತ
ಅವರಿಗವರದೆ
ಒಮ್ಮತ
ಅಜ್ಜ ಹಾಕಿದ
ಆಲದ ಮರಕ್ಕೆ
ನೇಣು
ಒಡ್ಡಬೇಡ
ಗೋಣು
ಯಾರ ಕೈಲಿದೆ
ಪರತಂತ್ರ
ಶಕ್ತಮನಸ್ಸಿನೊಡತಿ
ಮತ್ತೇಕೆ ಹೊಯ್ದಾಟ
ನಡೆಯದು ಇನ್ನು
ಅವರಾಟ
ಒಮ್ಮೆನಿಂತುಬಿಡು
ದಿಟ್ಟ ನಿಲುವಿಗೆ
ಗೆಲುವು
ಉದ್ದಗಲಕ್ಕೂ
ಕಾಲ ಚಾಚಿ
ತ್ರಿವಿಕ್ರಮನವತಾರ
ಅವತರಿಸಲೇಬೇಕು
ಅವರವರ ಭಾರಕ್ಕೆ
ಅವರವರ ಭಾವಕ್ಕೆ
*****
Latest posts by ಶೈಲಜಾ ಹಾಸನ (see all)
- ಮುಸ್ಸಂಜೆಯ ಮಿಂಚು – ೧೬ - April 17, 2021
- ಮುಸ್ಸಂಜೆಯ ಮಿಂಚು – ೧೫ - April 10, 2021
- ಮುಸ್ಸಂಜೆಯ ಮಿಂಚು – ೧೪ - April 3, 2021