Home / ಲೇಖನ / ಇತರೆ / ಅಣು ಒಪ್ಪಂದದ ಹಿಂದಿನ ಪುರುಷ ಮತ್ತು ಮಹಿಳೆ

ಅಣು ಒಪ್ಪಂದದ ಹಿಂದಿನ ಪುರುಷ ಮತ್ತು ಮಹಿಳೆ

ಸಾರಾ ಆರ್. ರೈಡ್‌ಮಾನ್ ಅವರು ಬರೆದ ‘ಅಣುವಿನ ಹಿಂದಿನ ಪುರುಷರು ಮತ್ತು ಮಹಿಳೆಯರು’ ಎಂಬ ಪುಸ್ತಕವನ್ನು ನಾನು ಕೊಂಡ ಮೇಲೆ ೫೦ ವರ್ಷಗಳು ಕಳೆದಿವೆ. ಇಂದಿಗೂ ಈ ಪುಸ್ತಕವು ನನ್ನ ಕೊಠಡಿಯ ಮೇಜಿನ ಮೇಲೆ ಪ್ರಮುಖ ಸ್ಥಾನದಲ್ಲಿ ಕಂಗೊಳಿಸುತ್ತಿದೆ. (ಲೇಖಕಿ ಆಕೆಯ ಪುಸ್ತಕವನ್ನು ನಾನು ಓದಬೇಕೆಂದು, ಮತ್ತೆ ಮತ್ತೆ ಓದಬೇಕೆಂದು ಇಚ್ಛಿಸಿರಬಹುದು.)

ಅದು ಸುಮಾರು ೧,೦೦೦ ಪ್ಯಾರಾಗಳನ್ನು ಹೊಂದಿದೆ. ಎಲ್ಲ ಪ್ಯಾರಾಗಳೂ ಭವ್ಯ ಪ್ಯಾರಾಗಳು (ಪ್ಯಾರ್ ಕಾ ಪ್ಯಾರಾ). ಮೊದಲನೇ ಪ್ಯಾರಾವು ೧೯೫೬ ಅಕ್ಟೋಬರ್ ೧೭ ರಂದು ಆದ ಪ್ರಪಂಚದ ಮೊಟ್ಟ ಮೊದಲನೇ ಪೂರ್ಣ ಪ್ರಮಾಣದ ಅಣುಶಕ್ತಿ ಕೇಂದ್ರದ ಉದ್ಘಾಟನೆಯ ಬಗ್ಗೆ ತಿಳಿಸುತ್ತದೆ.

ಆ ಪುಸ್ತಕವು ಭಾರತದಲ್ಲಿ ಔದ್ಯೋಗಿಕ ವಿಕಾಸದಲ್ಲಿ ಅಣುಶಕ್ತಿ ಸ್ಥಾವರಗಳ ಪಾತ್ರವನ್ನು ನಮಗೆ ತಿಳಿಸುತ್ತದೆ.

ಈ ಸಂದರ್ಭದಲ್ಲಿ ನಾವು, ನಮ್ಮರಾಷ್ಪ್ರವು ನಾಗರಿಕ ಪ್ರಯೋಜನಕ್ಕಾಗಿ ಅಣುಶಕ್ತಿ ಒಪ್ಪಂದಕ್ಕೆ ರುಜು ಹಾಕಿ ಖಾತರಿಪಡಿಸುವುದರಲ್ಲಿ ಶ್ರಮಿಸಿದ ಪುರುಷ ಮತ್ತು ಮಹಿಳೆಗೆ ಕೃತಜ್ಞರಾಗಿರಬೇಕು. ಆ ಇಬ್ಬರು ಮಹಾವ್ಯಕ್ತಿಗಳು ಯಾರು ? ಅಣು ಒಪ್ಪಂದದ ಹಿಂದಿನ ಪುರುಷ ನಮ್ಮ ಪ್ರಿಯ ಡಾ|| ಮನಮೋಹನ್ ಸಿಂಗ್, ಪ್ರಧಾನ ಮಂತ್ರಿಗಳು ಮತ್ತು ಅಣು ಒಪ್ಪಂದದ ಹಿಂದಿನ ಮಹಿಳೆ ನಮ್ಮ ಜನಪ್ರಿಯ ಶ್ರೀಮತಿ ಸೋನಿಯಾ ಗಾಂಧಿ, ಯುಪಿ‌ಎದ ಮಾನ್ಯ ಅಧ್ಯಕ್ಷೆ.

ಈ ಅಣುಶಕ್ತಿ ಒಪ್ಪಂದದ ಫಲವನ್ನು ಉಪಯೋಗಿಸಿಕೊಳ್ಳುವ ಪ್ರಯತ್ನದಲ್ಲಿ ಮೊದಲ ಮುಖ್ಯಮಂತ್ರಿ ನಮ್ಮ ಪ್ರೀತಿಯ ಡಾ || ಬಿ. ಎಸ್. ಯಡಿಯೂರಪ್ಪ ಅವರು ಈಗಾಗಲೇ ಕೇಂದ್ರಕ್ಕೆ ಬರೆದು ಪ್ರಸ್ತಾಪಿಸಲ್ಪಟ್ಟ ೨೧೦ ಎಂ. ಡಬ್ಲೂ. ಘಟಕಗಳ ಬದಲಾಗಿ ಎರಡು ೭೦೦ ಎಂ. ಡಬ್ಲೂ. ಅಣುಶಕ್ತಿ ಘಟಕಗಳನ್ನು ವಿಸ್ತರಣಕ್ಕಾಗಿ ಕೈಗಾದಲ್ಲಿ ಸ್ಥಾಪಿಸಲು ಕೇಳಿದ್ದಾರೆ. ಅವರು ರಾಜ್ಯದಲ್ಲಿ ದೊಡ್ಡಗಾತ್ರದ ಅಣು ರಿಯಾಕ್ಟರ್‌ಗಳನ್ನೊಳಗೊಂಡ ಅಣುಶಕ್ತಿ ಪಾರ್ಕನ್ನು ಸ್ಥಾಪಿಸಲೂ ಒತ್ತಾಯಿಸಹುದು.

ನಮ್ಮ ಮುಖ್ಯಮಂತ್ರಿಗಳ ವಿರೋಧಿಗಳು ನಮ್ಮ ಮುಖ್ಯಮಂತ್ರಿ ಅವರು ಬಹಳ ‘ಪವರ್ ಹಂಗ್ರಿ’ ಎಂದು ಹೇಳುತ್ತಾರೆ. ಆದರೆ ನಮ್ಮ ಜನಪ್ರಿಯ ಮುಖ್ಯಮಂತ್ರಿಯವರಿಗೆ ಪವರ್ ಅಂದರೆ ಥರ್ಮಲ್ ಪವರ್ (ತಾಪಶಕ್ತಿ), ನ್ಯೂಕ್ಲಿಯರ್ ಪವರ್ (ಅಣುಶಕ್ತಿ), ಸೋಲಾರ್ ಪವರ್ (ಸೌರಶಕ್ತಿ), ಹೈಡಲ್ ಪವರ್ (ಜಲವಿದ್ಯುಚ್ಛಕ್ತಿ) ಮತ್ತು ವಿಂಡ್‌ಪವರ್ (ವಾಯುಶಕ್ತಿ). ಅವರು ಅನೇಕ ಶಕ್ತಿಯೋಜನೆಗಳನ್ನು ಪ್ರಸ್ತಾಪಿಸಿದ್ದಾರೆ. ನಮ್ಮ ರಾಜ್ಯವು ಕ್ರಿ.ಶ. ೨೦೧೪ ರ ಹೊತ್ತಿಗೆ ೧೪,೦೦೦ ಎಂ.ಡಬ್ಲೂ. ಶಕ್ತಿಯನ್ನು ಉತ್ಪಾದಿಸಿ ಸಾಕಷ್ಟು ಶಕ್ತಿಯನ್ನು ಪಡೆದುಕೊಳ್ಳುವುದೆಂದು ನನಗೆ ನಂಬಿಕೆ ಇದೆ.

ನನಗೆ ಅಣುವು ಯಾವಾಗಲೂ ಒಂದು ಗಹನ ಸೌಂದರ್ಯವಾಗಿತ್ತು. ಅಣುವಿನ ಕೇಂದ್ರ ನನಗೆ ಸಿಲುಕದೆಂದು ನನಗೆ ಗೊತ್ತಿತ್ತು. ಆದರೂ ಅದನ್ನು ತಲುಪುವುದಕ್ಕಾಗಿ ಸರ್. ಜಾರ್ಜ್. ಥಾಮಸನ್ ಮತ್ತು ಅನೇಕ ಪುಸ್ತಕಗಳನ್ನು ಓದಿ ಹಲವು ಪ್ರಯತ್ನಗಳನ್ನು ಮಾಡಿದೆ. ಆದರೂ ಅಣುವಿನ ಕೇಂದ್ರದತ್ತ ನನ್ನ ದೂರ ಪ್ರಯಾಣದಲ್ಲಿ ಮೊದಲ ಮೈಲಿಯಲ್ಲೇ ನಾನೇಕೆ ನಿಂತು ಹೋಗಿದ್ದೇನೋ ನನಗೆ ನಿಜವಾಗಿಯೂ ತಿಳಿಯದು.
*****

Tagged:

Leave a Reply

Your email address will not be published. Required fields are marked *

ಹೆರಿಗೆ ನೋವಿನಿಂದ ಸಂಕಟಪಡುತ್ತಿದ್ದ ಹೆಂಡತಿ ಗಂಗಾಳನ್ನು ಆಸ್ಪತ್ರೆಗೆ ಚಿಕ್ಕಣ್ಣ ಕರೆದುಕೊಂಡು ಬಂದಾಗ ಔಟ್ ಪೇಶಂಟ್ ವಿಭಾಗ ಗಿಜಿಗುಟ್ಟುತ್ತಿತ್ತು. ಗುಂಪುಕಟ್ಟಿ ನಿಂತಿದ್ದ ಮಹಿಳೆಯರ ಸಾಲನ್ನು ಛೇಧಿಸಿಕೊಂಡು ವೈದ್ಯರ ಮೇಜಿನ ಬಳಿ ಬಂದು ನಿಂತ ಅವನ ತೋಳುಗಳಲ್ಲಿ ಎರಡೂವರೆ ವರ್ಷದ ಮಗುವ...

ನಾಡಿಗೆ ಸ್ವಾತಂತ್ರ ಬಂದಿದೆ. ಎಲ್ಲೆಲ್ಲೂ ಸ್ವೈರಾಚಾರ ಹೆಚ್ಚಿದೆ. ಸ್ವಾತಂತ್ರವೆಂದರೆ ಸ್ವೇಚ್ಛಾಚಾರ ಎನ್ನುವಂತೆ ನಾಡಿನ ಜನ ವರ್ತಿಸುತ್ತಿದೆ; ಬಹುದಿನದ ಸಾಧನೆಯಿಂದ ಪಡೆದ ಸಿದ್ದಿಯನ್ನು ಮಣ್ಣುಗೂಡಿಸುತ್ತಲಿದೆ. ಇದನ್ನು ತಡೆಯಲಿಕ್ಕೆ ಭಾರತದ “ಹಳ್ಳಿ-ಹಳ್ಳಿಗಳಲ್ಲಿಯೂ ಗ್ರಾಮ ಸುರಕ್ಷಕ...

“ವತ್ಸಲಾ……..!” ನಿಟ್ಟುಸುರಿನೊಂದಿಗೆ ಕುಮಾರನು ಆರಾಮ ಕುರ್‍ಚಿಯ ಮೇಲೆ ದೊಪ್ಪನೆ ಬಿದ್ದು ಕೊಂಡನು. ಚಿಕ್ಕಬಾಲಕನೊಬ್ಬನು ಕಿಡಿಕಿಯಲ್ಲಿ ಹಣಿಕಿ ಹಾಕಿ “ಕುಮಾರಣ್ಣ” ಎಂದು ಕೂಗಿದಂತಾಯಿತು. ಎದ್ದು ನೋಡುತ್ತಾನೆ; ಕೆಂಪು ಮಸಿಯಿಂದ ವಿಳಾಸ ಬರೆದ...

“ಭೀಮಾ ಮಾಸ್ತರರನ್ನು ಇಷ್ಟ ಮೋಟರ ಸ್ಟಾಂಡಿನ ತನಕ ಕಳಿಸಿ ಬಾರಪ್ಪಾ.” ಬಾಯಕ್ಕ ನೆರೆಮನೆಯವರ ಆಳಿಗೆ ವಿನಯದಿಂದ ಹೇಳಿ ನನ್ನ ಕಡೆಗೆ ಹೊರಳಿ ಅಂದಳು: “ಬಿಡಿರಿ, ನಿಮ್ಮ ಬ್ಯಾಗ ತಗೊಂಡ ಬರತಾನ ಭೀಮಾ” “ಯಾತಕ್ಕ? ನಾ ಕೈಯೊಳಗ ಸಹಜ ಒಯ್ಯತೇನೆ” ನಾನು ಹೀಗೆ ಹೇಳಿದೆನಾದರೂ ಭೀಮಪ್...

ಸಿಗರೆಟ್‌ನ್ನು ಕೊನೆಯ ಸಲ ಎಳೆದು ಬದಿಗಿದ್ದ ಅಶ್‌ಟ್ರೆಯಲ್ಲಿ ಹಾಕಿದ. ಮೂರು ದಿನಗಳಿಂದ ಹೇಳಲಾಗದಂತಹ ಯಾತನೆ ಅವನನ್ನು ಹಿಂತಿಸುತ್ತಿದೆ. ಇದ್ದಿದ್ದು ಮಿತ್ರನ ಮಾತುಗಳು ಬಂದು ಕಿವಿಗೆ ಅಪ್ಪಳಿಸಿ ಎತ್ತ ನೋಡಿದರೂ ಅವನದೆ ಮುಖ ಕಾಣುತ್ತಿದೆ. “ನಾ ಹೇಳುವದನ್ನು ಅರ್‍ಥಮಾಡಿ ಕೊಳ್ಳು...