ಐಸ್ ಕ್ರೀಂ ತಂಪಿನ ಬಿಸಿ

ಬೇಸಗೆಯ ಬಿಸಿಲಿನ ಝಳದಿಂದ ತಪ್ಪಿಸಿಕೊಂಡು, ಒಂದೆಡೆ ಹಾಯಾಗಿ ಕುಳಿತು ಐಸ್ ಕ್ರೀಂ ಸವಿಯುವ ಸುಖ ಯಾರಿಗೆ ಬೇಡ? ಆದರೆ ಐಸ್ ಕ್ರೀಂ ಬಾಯಿಯಲ್ಲಿ ನಿಧಾನವಾಗಿ ಕರಗುತ್ತಿರುವಾಗ ಅದು ತಿನ್ನಲು ಯೋಗ್ಯವಾಗಿದೆಯಾ ಎಂದು ಯಾವತ್ತಾದರೂ ಯೋಚಿಸಿದ್ದೀರಾ?

ಆಹ್ಮದಾಬಾದಿನ ಕನ್ಸೂಮರ್ ಎಜುಕೇಶನ್ ಆಂಡ್ ರೀಸರ್ಚ್ ಸೊಸೈಟಿ ನಡೆಸಿದ ಪರೀಕ್ಷೆಯ ಫಲಿತಾಂಶಗಳು ಐಸ್‌ಕ್ರೀಂ ಚಪ್ಪರಿಸುವ ಮುನ್ನ ಬಿಸಿ ಮುಟ್ಟಿಸುತ್ತವೆ ಆಹಾರ ಕಲಬೆರಕೆ ನಿಷೇಧ ಕಾನೂನಿನ ಮತ್ತು ಬ್ಯೂರೋ ಆಥ್ ಇಂಡಿಯನ್ ಸ್ಟ್ಯಾಂಡರ್ಡಿನ ಮಾನದಂಡಗಳ ಪ್ರಕಾರ ಐಸ್‌ಕ್ರೀಂಗಳನ್ನು ಪರೀಕ್ಷಿಸಲಾಯಿತು. ಫಲಿತಾಂಶಗಳ ತುಲನೆಗಾಗಿ ಅಂತಾರಾಷ್ಟ್ರೀಯ ಮಾನದಂಡ ‘ಕೋಡೆಕ್ಸ್’ ಅನುಸರಿಸಲಾಯಿತು. ಪ್ರತಿಯೊಂದು ಐಸ್ಕ್ರೀಂನ 20 ಸ್ಯಾಂಪಲ್ ಕಪ್ ಗಳನ್ನು ಪರೀಕ್ಷೆಗೆ ಒಳಪಡಿಸಲಾಯಿತು.

ಅಮುಲ್, ಹ್ಯಾವ್ ಮೋರ್, ಕ್ವಾಲಿಟಿ ವಾಲ್ಸ್‌ಮ್ಯಾಕ್ಸ್ ಮತ್ತು ವಡಿಲಾಲ್ ಡೈರಿ ಪ್ರೀಮಿಯಂ, ಅಮಿರಾಜ್ ಕ್ಲಾಸಿಕ್, ನಿರುಚಿನ್ ದೇಸಾಯಿ, ಪಟೇಲ್ ಡೈರಿ ಮತ್ತು ಶ್ರೀ ಜನತಾ ಎಂಬ ಐಸ್ಕ್ರೀಂಗಳ ಸ್ಯಾಂಪಲ್ಗಳನ್ನು ಪರೀಕ್ಷಿಸಲಾಯಿತು.

ಐಸ್‌ಕ್ರೀಂನಲ್ಲಿ ಸೂಕ್ಷ್ಮ ಕ್ರಿಮಿ
ಐಸ್‌ಕ್ರೀಂಗಳಲ್ಲಿ ಇಕೊಲಿ ಬ್ಯಾಕ್ಟೀರಿಯಾ ಇರಲೇಬಾರದು. ಅದು ಜೀರ್ಣಾಂಗವ್ಯೂಹ ಮತ್ತು ಮೂತ್ರನಾಳಕ್ಕೆ ಸೋಂಕು ತಗಲಿಸಬಹುದು. ಅಲ್ಲಿ ಪರೀಕ್ಷಿಸಲಾದ ಒಂದು ಬ್ರಾಂಡಿನ ಐಸ್‌ಕ್ರೀನಲ್ಲಿ ಪ್ರತಿಯೊಂದು ಗ್ರಾಂನಲ್ಲಿ 64,600 ಇಕೂಲಿ ಬ್ಯಾಕ್ಷೀರಿಯಾ ಇದ್ದವು!

ಐಸ್‌ಕ್ರೀನಲ್ಲಿ ಸೂಕ್ಷ್ಮ ಕ್ರಿಮಿ ಹೇಗೆ ಸೇರಿಕೊಳ್ಳುತ್ತವೆ? ಐಸ್‌ಕ್ರೀಂ ತಯಾರಿಸುವ ಜಾಗದಲ್ಲಿ, ಸಾಗಾಟ ಹಾಗೂ ಶೇಖರಣೆಯ ಸಂದರ್ಭದಲ್ಲಿ ಶುಚಿತ್ವ ಕಾಪಾಡದಿದ್ದರೆ ಐಸ್ಕ್ರೀಂಗೆ ಸೂಕ್ಷ್ಮಕ್ರಿಮಿಗಳ ಸೋಂಕು ತಗಲುತ್ತದೆ. ಸೂಕ್ಷ್ಯಕ್ರಿಮಿಗಳು ಆರಂಭದಲ್ಲೇ ಹಾಲಿನ ಮೂಲಕ ಸೇರಿಕೊಳ್ಳಬಹುದು. ಇಂಥ ಸೋಂಕು ಇರುವ ಐಸ್‌ಕ್ರೀಂನಿಂದ ಉರಿ ಗಂಟಲು ರೋಗ ಮತ್ತು ಜೀರ್ಣಾಂಗವ್ಯೂಹದ ತೊಂದರೆಗಳು ಉಂಟಾಗಬಹುದು. ಇದಕ್ಕೆ ಸುಲಭದಲ್ಲಿ ಬಲಿಯಾಗುವವರು ಮಕ್ಕಳು.

ಬ್ಯೂರೋ ಆಥ್ ಇಂಡಿಯನ್ ಸ್ವಾಂಡರ್ಡ್ಸ್ (ಬಿಐಎಸ್) ಐಸ್‌ಕ್ರೀಂಲ್ಲಿ ಸೂಕ್ಷ್ಮಕ್ರಿಮಿಗಳ ಬಗ್ಗೆ ಈ ಕೆಳಗಿನ ಮಾನದಂಡಗಳನ್ನು ನಿಗದಿಪಡಿಸಿದೆ. ಸೂಕ್ಷ್ಮ ಕ್ರಿಮಿಗಳ ಒಟ್ಟು ಸಂಖ್ಯೆ ಆಹಾರ ವಸ್ತುವಿನಲ್ಲಿ ಇರುವ ಜೀವಂತ ಬ್ಯಾಕ್ಷೀರಿಯಾ ಗಳ ಒಟ್ಟು ಸಂಖ್ಯೆ ಹೆಚ್ಚಾದಷ್ಟೂ ಸೋಂಕು ತಗಲಿ ರೋಗ ಉಂಟಾಗುವ ಅಪಾಯ ಜಾಸ್ತಿ. ಬಿಐಎಸ್ ನಿಗದಿಪಡಿಸಿದ ಗರಿಷ್ಠ ಮಿತಿ ಗ್ರಾಂನಲ್ಲಿ 25 x 104 ಬ್ಯಾಕ್ಷೀರಿಯಾಗಳು. ವಡಿಲಾಲ್ ಬ್ರಾಂಡಿನ ಐಸ್‌ಕ್ರೀಂನಲ್ಲಿ ಮಾತ್ರ ಈ ಮಿತಿಗಿಂತ ಚಾಸ್ತಿ ಬಾಕ್ಟೀರಿಯಾ ಇದ್ದವು ಅಂದರೆ ಆದರಿಂದಾಗಿ ಬಛಕೆದಾರರಿಗೆ ಸೋಂಕಿನ ಅಪಾಯವಿದೆ.

ಕೊಲಿಫಾರ್ಮ್ ಸಂಖ್ಯೆ
ಮನುಷ್ಯ ಅಧವಾ ಪ್ರಾಣಿಯ ಮಲದಿಂದ ಉಂಟಾಗ ಬಹುದಾದ ಸೋಂಕನ್ನು ಇದು ಸೂಚಿಸುತ್ತದೆ. ಬಿಐಎಸ್ ಪ್ರಕಾರ ಪ್ರತಿ ಗ್ರಾಂ ಐಸ್‌ಕ್ರೀಂನಲ್ಲಿ 100ಕ್ಕಿಂತ ಜಾಸ್ತಿ ಕೊಲಿಫಾರ್ಮ್ ಬಾಕ್ಟೀರಿಯಾ ಇರಬಾರದು. ಅಮುಲ್ ಐಸ್ಕ್ರೀಂನಲ್ಲಿ ಈ ಬ್ಯಾಕ್ಟೀರಿಯಾ ಇರಲೇಇಲ್ಲ. ಮಾಕ್ಸ್ ಐಸ್‌ಕ್ರೀಂನಲ್ಲಿ ಗ್ರಾಂನಲ್ಲಿ 20, ಹ್ಯಾವ್ ಮೋರ್‌ನಲ್ಲಿ ಗ್ರಾಂನಲ್ಲಿ 10 ಮತ್ತು ವಡಿಲಾಲ್ ಬ್ರಾಂಡಿನಲ್ಲಿ ಗ್ರಾಂನಲ್ಲಿ 260 ಕೊಲಿಫಾರ್ಮ್ ಕಂಡುಬಂದವು. ಬಿಡಿ ಬಿಡಿಯಾಗಿ ಖರೀದಿಸಿದ (ಲೂಸ್ ಸ್ಯಾಂಪಲ್) ಐಸ್‌ಕ್ರೀಂ ಕಪ್‌ಗಳಲ್ಲಿ ಅಧಿಕ ಸಂಖ್ಯೆಯ ಕೊಲಿಫಾರ್ಮ್ ಬ್ಯಾಕ್ಟೀರಿಯಾ
ಇದ್ದವು ಕ್ಕಾಸಿಕ್ ಐಸ್ಕ್ರೀಂನಲ್ಲಿ ಅತ್ಯಧಿಕ ಪ್ರತಿ ಗ್ರಾಂನಲ್ಲಿ 3,22,500 ಕೋಲಿಫಾರ್ಮ್ ಪತ್ತೆಯಾದವು ಎಂದರೆ ನಂಬುವಿರಾ?!

ಇತರ ಆಹಾರಾಂಶಗಳು
ಐಸ್‌ಕ್ರೀಂ ಎನ್ನಿಸಿಕೊಳ್ಳಬೇಕಾದರೆ ಅದರಲ್ಲಿ ಕನಿಷ್ಠ ಶೇ. 10 ಹಾಲಿನ ಕೊಬ್ಬು ಇರಲೇಬೇಕು. ಅಮುಲ್
ಐಸ್‌ಕ್ರೀಂನಲ್ಲಿ ಅಧಿಕ ಪ್ರಮಾಣದ ಅಂದರೆ ಶೇ. 14.8 ಹಾಲಿನ ಕೊಬ್ಬು ಇತ್ತು. ಆದರೆ ಕೇವಲ ಶೇ. 3.8 ಹಾಲಿನ ಕೊಬ್ಬು ಹೊಂದಿದ್ದ ನಿರುಚಿನ್ ಐಸ್‌ಕ್ರೀಮನ್ನು ಐಸ್‌ಕ್ರೀಂ ಅನ್ನುವಂತಿಲ್ಲ. ಅದೊಂದು ಐಸಿನ ಮುದ್ದೆ ಅಷ್ಟೇ.

ಐಸ್‌ಕ್ರೀಮನ್ನು ಸಿಹಿ ಮಾಡುವುದು ಅದರಲ್ಲಿರುವ ಸುಕ್ರೋಸಿನ ಅಂಶ. ಎಲ್ಲ ಬ್ರಾಂಡ್ ಗಳ ಐಸ್ಕ್ರೀಮಿನಲ್ಲಿ ಬಿಐಎಸ್‌ನಿಗದಿಪಡಿಸಿದಷ್ಟು ಅಂದರೆ ಶೇ. 15 ಸುಕ್ರೋಸ್ ಇತ್ತು. ಐಸ್ಕ್ರೀಮಿನಲ್ಲಿ ಕನಿಷ್ಠ ಶೇ. 36 ಭಾಗ ಒಟ್ಟು ಘನವಸ್ತುಗಳು ಇರಬೇಕು. ಇದಕ್ಕಿಂತ ಕಡಿಮೆಯಿದ್ದರೆ ಆ ಐಸ್‌ಕ್ರೀಂನಲ್ಲಿ ಐಸ್‌ಜಾಸ್ತಿ ಇದೆ ಎಂದರ್ಥ. ಅಮುಲ್ ಐಸ್ಕ್ರೀಂನಲ್ಲಿ ಶೇ. 41.8 ಮತ್ತು ಪಟೇಲ್ ಡೈರಿ ಐಸ್‌ಕ್ರೀಂನಲ್ಲಿ ಶೇ. 50.8 ಒಟ್ಟು ಘನವಸ್ತುಗಳಿದ್ದವು. ಇದರರ್ಥ ಇವುಗಳ ಕಪ್ ಗಳಲ್ಲಿ ಇತರ ಬ್ರಾಂಡ್ಗಳಿಗಿಂತ ಜಾಸ್ತಿ ಐಸ್‌ಕ್ರೀಂ ಇದೆ.

ಐಸ್‌ಕ್ರೀಂ ನಮ್ಮ ದೇಹಕ್ಕೆ ಸಾಕಷ್ಟು ಕ್ಯಾಲೋರಿ ಒದಗಿಸುತ್ತದೆ. ಆದ್ದರಿಂದ ತಮ್ಮ ದೇಹ ತೂಕದ ಬಗ್ಗೆ ಕಾಳಜಿ ಇರುವವರು ಐಸ್‌ಕ್ರೀಂ ತಿನ್ನುವ ಬಗ್ಗೆ ಜಾಗರೂಕರಾಗಿರಬೇಕು. ಐಸ್‌ಕ್ರೀಂನಲ್ಲಿ ಕನಿಷ್ಮ ಶೇ. 3.5 ಪ್ರೊಟೀನ್ ಇರಬೇಕು. ಆದರೆ ಹ್ಯಾವ್ ಮೋರ್,ಕ್ಲಾಸಿಕ್, ಶ್ರೀ ಜನತಾ ಮತ್ತು ನಿರುಚಿನ್ ಐಸ್‌ಕ್ರೀಂಗಳಲ್ಲಿ ಇದ್ದ ಪ್ರೊಟೀನ್ ಅಂಶ ಇದಕ್ಕಿಂತ ಕಡಿಮೆ.

ಕೀಟನಾಶಕಗಳ ಶೇಪಾಂಶ
ದನ ಎಮ್ಮೆಗಳ ಆಹಾರದ ಮೂಲಕ ಕೀಟನಾಶಕಗಳ  ಶೇಷಾಂಶ ಹಾಲಿಗೆ ಬರುತ್ತದೆ. ಹಾಲಿನ ಮೂಲಕ ಅದು
ಐಸ್‌ಕ್ರೀಂಗೂ ಬರಬಹುದು. ಐಸ್‌ಕ್ರೀಂಗಳ ಸ್ಯಾಂಪಲ್ ಗಳಲ್ಲಿ ಡಿಡಿಟಿ, ಆಲ್ಡ್ರೀನ್, ಡೀಲ್ಟ್ರೀನ್, ಹೆಪ್ಟಾಕ್ಲೋರ್, ಲಿಂಡೇನ್ ಮತ್ತು ಫೋರೇಟ್ ಗಳ ಶೇಷಾಂಶ ಇದೆಯೇ ಎಂದು ಪರೀಕ್ಷಿಸಲಾಯಿತು. ನಿರುಚಿನ್ ಐಸ್‌ಕ್ರೀಂನಲ್ಲಿ ಮಾತ್ರ ಕೀಟನಾಶಕಗಳ ಶೇಷಾಂಶಗಳು ಇರಲಿಲ್ಲ. ಬೇರೆಲ್ಲ ಐಸ್‌ಕ್ರೀಂಗಳಲ್ಲೂ ಇವು ನಿಗದಿತ ಮಿತಿಯೊಳಗೆ ಇದ್ದದ್ದರಿಂದ ಬಳಕೆದಾರರು ಬಚಾವ್. ಆದರೂ ಕೀಟನಾಶಕಗಳು ದೀರ್ಘಾವಧಿ ಶರೀರದಲ್ಲಿ ಇದ್ದರೆ ಮನುಷ್ಯರ ನರವ್ಯೂಹಕ್ಕೆ ಅಪಾಯ ಖಂಡಿತ.

ರುಚಿ ಮತ್ತು ಸ್ವಾದ
ನಮಗೆ ಖುಷಿ ನೀಡುವ ರುಚಿ, ಸ್ವಾದ ಮತ್ತು ಮೆದುತನ ಹೊಂದಿರುವ ಐಸ್‌ಕ್ರೀಮನ್ನು ನಾವು ಇಷ್ಟಪಡುತ್ತೇನೆ. ಇವುಗಳ ಪರೀಕ್ಷೆಯನ್ನು ವೈಜ್ಞಾನಿಕ ಪರಿಭಾಷೆಯಲ್ಲಿ ‘ಸೆನ್ಸರಿ ಟೆಸ್ಸಿಂಗ್’ಎನ್ನುತ್ತಾರೆ.

ವಿಶೇಷವಾಗಿ ತರಬೇತಾದ ಪರೀಕ್ಷಕರು ಈ ಪರೀಕ್ಷೆ ನಡೆಸುತ್ತಾರೆ. ಅವರಿಗೆ ಐಸ್‌ಕ್ರೀಂನ ಹೆಸರುಗಳನ್ನು ಗುಪ್ತವಾಗಿಟ್ಟು ಸ್ಯಾಂಪಲ್ಗಳನ್ನು ನೀಡಲಾಗುತ್ತದೆ. ಅವುಗಳ ರುಚಿ ಮತ್ತು ಸ್ವಾದ ಬಗ್ಗೆ ಅವರ ಅಭಿಪ್ರಾಯ ಪಡೆಯಲಾಗುತ್ತದೆ. ಈ ಮೌಲ್ಯಮಾಪನದಲ್ಲಿ ಅಮುಲ್ (84) ಮತ್ತು ವಡಿಲಾಲ್ (82) ಅತ್ಯಧಿಕ ಅಂಕ ಗಳಿಸಿದವು. ಪಟೇಲೇ ಡೈರಿ ಐಸ್‌ಕ್ರೀಂ (54) ಕನಿಷ್ಠ ಅಂಕ ಪಡೆಯಿತು.

ತೂಕದಲ್ಲಿ ವ್ಕತ್ಯಾಸ
ಐಸ್‌ಕ್ರೀಂನ ತೂಕದ್ದು ದೊಡ್ಡ ಸಮಸ್ಯೆ. ಐಸ್‌ಕ್ರೀಂನ ತೂಕ ಕಡಿಮೆ ಇದೆ ಎಂದು ನೀವು ದೂರು ನೀಡಿದಾಗ ಅದು ವಾತಾವರಣದ ಬಿಸಿಗೆ ಕರಗಿ ಹೋಗಿರಬೇಕು ಎಂದು ಮಾರಾಟಗಾರ ಹೇಳಿದರೆ ಏನು ಮಾಡುತ್ತೀರಿ? ಐಸ್‌ಕ್ರೀಂನ
ತೂಕ ಲೀಟರಿಗೆ 525 ಗ್ರಾಂಗಳಿಗಿಂತ ಕಡಿಮೆ ಇರಬಾರದು. ಆ ಪರೀಕ್ಷೆಯಲ್ಲಿ ಪ್ರತಿಯೊಂದು ಬ್ರಾಂಡಿನ ಐಸ್‌ಕ್ರೀಂನ 20 ಕಪ್ ಗಳನ್ನು ಪ್ರತ್ಯೇಕವಾಗಿ ತೂಕ ಮಾಡಲಾಯಿತು. ಅದರೆ ವಡಿಲಾಲ್ ಐಸ್ಕ್ರೀಂನ 12 ಕಪ್‌ಗಳ ತೂಕ ಕಡಿಮೆ ಇತ್ತು! ಅಮುಲ್ ಐಸ್‌ಕ್ರೀಂನ ಎಲ್ಲ 20 ಕಪ್‌ಗಳ ತೂಕವೂ ಸರಿಯಾಗಿತ್ತು.

ಕೊನೆಗೊಂದು ಮಾತು :
ಐಸ್‌ಕ್ರೀಂ ತಿಂದರೆ ನಮ್ಮ ಶರೀರ ತಂಪಾಗುತ್ತದೆ ಎಂಬುದೊಂದು ಭ್ರಾಂತು. ನಾವೇನು ತಿಂದರೂ ಅದರ ಉಷ್ಟತೆ ನಮ್ಮ ಶರೀರದ ಉಷ್ಣತೆಗೆ ಸಮಾನವಾಗಬೇಕು ತಾನೇ? ಹಾಗಾಗಿ ತಣ್ಣಗಿನ ಐಸ್‌ಕ್ರೀಂ ತಿಂದಾಗ ಅದರ ಉಷ್ಣತೆಯನ್ನು ಶರೀರದ ಉಷ್ಣತೆಯ ಮಟ್ಟಕ್ಕೆ ಏರಿಸಲಿಕ್ಕಾಗಿ ನಮ್ಮ ದೇಹದ ಸಾಕಷ್ಟು ಶಕ್ತಿ ವ್ಯಯವಾಗುತ್ತದೆ. ಇದನ್ನೇ ಐಸ್‌ಕ್ರೀಂನ ತಂಪಿನ ಬಿಸಿ ಅಂದದ್ದು!

****************************************
100% ಸಸ್ಯಾಹಾರಿ ಐಸ್‌ಕ್ರೀಂ ಎಂದರೇನು?

ಸಕ್ಕರೆ ಉತ್ಯಾದಿಸುವ ಕಂಪೆನಿಯೊಂದು ‘ನಮ್ಮ- ಸಕ್ಕರೆ 100% ಸಿಹಿ ಎಂದು ಜಾಹೀರಾತು ನೀಡಿದರೆ ಹೇಗಿರುತ್ತದೆ? ಇತರ ಕಂಪೆನಿಗಳು ತಯಾರಿಸಿದ ಸಕ್ಕರೆ 100% ಸಿಹಿಯಾಗಿಲ್ಲ ಎಂಬುದು ಇದರರ್ಥವೇ?

ವಡಿಲಾಲ್ ಎಂಟರ್ ಪ್ರೈಸರ್ಸ್‌ತನ್ನ ಐಸ್‌ಕ್ರೀಂ ಬಗ್ಗೆ ಇಂತಹದೇ ಹೇಳಿಕೆ ನೀಡುತ್ತಿದೆ. ಅದರ ಪ್ಯಾಕೆಟ್‌ಲ್ಲಿ ‘100% ವೆಜಿಟೇರಿಯನ್ ಐಸ್‌ಕ್ರೀಂ’ ಎಂದು ಮುದ್ರಿಸಲಾಗಿದೆ! ಇದರ ಅರ್ಥ ಇತರ ಐಸ್‌ಕ್ರೀಂಗಳು 100% ವೆಜಿಟೇರಿಯನ್ ಅಲ್ಲ ಎಂದಾಗುವುದಿಲ್ಲವೇ? ಹಾಗಾದರೆ ಮಾಂಸಾಹಾರಿ ಐಸ್‌ಕ್ರೀಂ ಎಂಬುದಿದೆಯೇ?

ಅಹ್ಮದಾಬಾದಿನ ಸಿಇಆರ್ ಸೊಸೈಟಿ ವಾಡಿಲಾಲ್ ಕಂಪೆನಿಗೆ ಪತ್ರ ಬರೆದು, ಆ ಹೇಳಿಕೆಗೆ ಸಮರ್ಥನೆ ಕೇಳಿತು. ಮಾಂಸಾಹಾರಿ ಅಂಶಗಳನ್ನು ಸೇರಿಸಲಾದ ಇತರ ಐಸ್‌ಕ್ರೀಂಗಳು ಯಾವುವು ಎಂದು ವಡಿಲಾಲ್ ತಿಳಿಸಬೇಕೆಂದು ವಿನಂತಿಸಿತು. ಅದಲ್ಲದೆ ವಡಿಲಾಲ್ ಐಸ್ಕ್ರೀಂನಲ್ಲಿ ಕೃತಕ ಅಥವಾ ಪ್ರಾಣಿ ಮೂಲದ ಅಂಶಗಳು ಇಲ್ಲವೇ ಇಲ್ಲವೆಂದು ಖಚಿತಪಡಿಸಬೇಕಂದು ಆಗ್ರಹಿಸಿತು. ಇತರ ಐಸ್‌ಕ್ರೀಂ ಕಂಪನಿಗಳಿಗೂ ಪತ್ರ ಬರೆದು ಅವರ ಐಸ್‌ಕ್ರೀಂಗಳು 100%
ವೆಜಿಟೇರಿಯನ್ ಹೌದೇ? ಎಂದು ಪ್ರಶ್ನಿಸಿತು.

ವಡಿಲಾಲ್ ಕಂಪೆನಿ ತನ್ನ ಐಸ್‌ಕ್ರೀಂಗೆ ಯಾವುದೇ ಮಾಂಸಾಹಾರಿ ಅಂಶ ಸೇರಿಸಿಲ್ಲ ಎಂಬುದು ತನ್ನ ಹೇಳಿಕೆಯ ಅರ್ಥ ಎಂದು ವಾದಿಸಿತು. ತನ್ನ ಐಸ್ಕ್ರೀಂನಲ್ಲಿ ಹಾಲು, ಹಾಲಿನ ಉತ್ಪನ್ನಗಳು, ಒಣ ಹಣ್ಣುಗಳು ಮತ್ತು ಹಣ್ಣಿನ ಅಂಶಗಳು ಮಾತ್ರ ಇರುವುದಾಗಿ ತಿಳಿಸಿತು. ಉಳಿದೆಲ್ಲ ಕಂಪನಿಗಳು ಸಿಇಆರ್ ಸೊಸೈಟಿಗೆ ಉತ್ತರಿಸುತ್ತಾ ತಮ್ಮ ಐಸ್‌ಕ್ರೀಂಗಳಲ್ಲಿ ಯಾವುದೇ ಮಾಂಸಾಹಾರಿ ಅಂಶವಿಲ್ಲ ಎಂದೂ ತಮ್ಮದೂ 100% ವೆಜಿಟೇರಿಯನ್ ಐಸ್‌ಕ್ರೀಂ ಎಂದೂ ಖಚಿತಪಡಿಸಿದವು

ಆದ್ದರಿಂದ ‘100% ವೆಜಿಟೇರಿಯನ್ ಐಸ್ಕ್ರೀಂ’ ಎಂಬ ಹೇಳಿಕೆ ಬಳಕೆದಾರರನ್ನು ಮರುಳು ಮಾಡುವ ತಂತ್ರ. ಬಳಕೆದಾರ ಸಂಘಟನೆಗಳು ಇಂಥ ಕುತಂತ್ರಗಳನ್ನು ಹೇಗೆ ಬಯಲಿಗೆಳೆಯಬಹುದು ಎಂಬುದಕ್ಕೆ ಈ ಪ್ರಕರಣ ಒಂದು ನಿದರ್ಶನ.

ಉದಯವಾಣಿ 12-06-2003

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನ್ಯಾಯ ಬೇಡುತಾವೆ
Next post ನಗೆಡಂಗುರ-೧೨೭

ಸಣ್ಣ ಕತೆ

 • ಪ್ರಥಮ ದರ್ಶನದ ಪ್ರೇಮ

  ಭಾಗೀರಥಿ ತೀರದಲ್ಲಿರುವದೊಂದು ಅತಿ ರಮಣೀಯವಾಗಿರುವ ಪ್ರದೇಶದಲ್ಲಿ ಕುಸುಮಪುರವೆಂಬ ಚಿಕ್ಕಿದಾದ ನಗರವಿತ್ತು. ಭೂಮಿಯ ಗುಣಕ್ಕಾಗಿ ಆ ಪ್ರದೇಶದಲ್ಲಿ ಬೆಳೆಯುವ ಬಕುಲ, ಚಂಪಕ, ಮಾಲತಿ, ಪುನ್ನಾಗ, ಗುಲಾಬೆ, ಸೇವಂತಿ ಮುಂತಾದ… Read more…

 • ಇರುವುದೆಲ್ಲವ ಬಿಟ್ಟು

  ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

 • ರಾಮಿ

  ‘ಸಲಾಮ್ರಿ’ ರೈಲಿನ ಹೊತ್ತಾಗಿದೆ. ವೆಂಕಟೇಶನು ಒಂದೇಸವನೆ ತನ್ನ ಕೈಯಲ್ಲಿಯ ಗಡಿಯಾರವನ್ನು ನೋಡುತ್ತಿದ್ದಾನೆ. ‘ಸಲಾಮ್ರೀಽ ಏಕ ಪೈಸಾ.’ ಆಗ ಮತ್ತೆ ಒದರಿದಳು. ಟಾಂಗಾದ ತುದಿ ಹಿಡಿದು ಕೊಂಡು ಓಡ… Read more…

 • ನಂಬಿಕೆ

  ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…

 • ಕರಾಚಿ ಕಾರಣೋರು

  ಮಳೆಗಾಲ ಆರಂಭವಾಯಿತೆಂದರೆ ಕುಂಞಿಕಣ್ಣ ಕುರುಪ್ಪನ ಏಣೆಲು ಗದ್ದೆಗೆ ನೇಜಿ ಕೆಲಸಕ್ಕೆ ಹೋಗಲು ಕಪಿಲಳ್ಳಿಯ ಹೆಂಗಸರು, ಗಂಡಸರು ತುದಿಗಾಲಲ್ಲಿ ಕಾಯುತ್ತಿರುತ್ತಾರೆ. ವರ್ಷವಿಡೀ ವಿಪ್ರರ ಮತ್ತು ವಿಪ್ರಾತಿವಿಪ್ರರ ಆಡಿಕೆ ತೋಟಗಳಲ್ಲಿ… Read more…