ಸಾಧನೆ

ಪ್ರಿಯ ಸಖಿ,

ಕೆಲವರು ಬಯಸುತ್ತಾರೆ
ತಾವು ಇಡುವ
ಪಾದಗಳ ಕೆಳಗೆ
ಇರಬೇಕೆಂದು ರತ್ನಕಂಬಳಿಗಳು
ಅಮೃತ ಶಿಲೆಗಳು
ಡಾಂಬರಿನ
ನಯ ನಾಜೂಕಿನ ರಸ್ತೆಗಳು
ಆದರೆ ತಮ್ಮ ಕಾಲುಗಳ ಕೆಳಗೆ
ಹಿಮಾಲಯ ಪರ್ವತ ಶಿಖರಗಳೆ
ಇರಬೇಕೆಂದು ಮೆಟ್ಟಿದವರು
ತೇನ್ಸಿಂಗ್ ಹಿಲೇರಿಗಳು.

ಜರಗನಹಳ್ಳಿ ಶಿವಶಂಕರ್ ಅವರ ‘ಸಾಧನೆ’ ಎಂಬ ಈ ಹನಿಗವನವನ್ನು ನೋಡಿದೆಯಾ ಸಖಿ, ಸಾಧನೆಯೆಂಬುದು ವ್ಯಕ್ತಿಯು ಹಾಕಿಕೊಂಡ ಮಿತಿಯನ್ನು ಅನುಸರಿಸಿ ನಿರ್ಮಿಸಲಾಗುತ್ತಿರುತ್ತದೆ. ಹಲವರು ಅಲ್ಪತೃಪ್ತರು. ಅವರಿಗೆ ತನ್ನ ಕಾಲ ಕೆಳಗೆ ರತ್ನಗಂಬಳಿ, ಅಮೃತ ಶಿಲೆಗಳಿದ್ದರೆ ಸಾಕು. ಆದರೆ ತೇನ್ಸಿಂಗ್, ಹಿಲೇರಿಗಳಂತಾ ಕೆಲವೇ ಸಾಧಕರು, ತಮ್ಮ ಕಾಲ ಕೆಳಗೆ ಹಿಮಾಲಯ ಪರ್ವತವೇ ಇರಬೇಕೆಂದು ಬಯಸುತ್ತಾರೆ. ಇಂತಹ ಸಾಧನೆಗಳು ಕಷ್ಟವಾದರೂ ಅಸಾಧ್ಯವಾದುದೇನಲ್ಲಾ.

ಇಂದಿನ ನಮ್ಮ ನಿತ್ಯ ಜೀವನದ ಎಷ್ಟೆಷ್ಟೋ ಸೂಕ್ಷ್ಮಾತಿಸೂಕ್ಷ್ಮ ಪರಿಕರಗಳು ಕೂಡ ಇಂತಹ ಸಾಧಕರಿಂದಲೇ ಮೂಡಿಬಂದಂತದು. ಇತರರ ಸುಖಕ್ಕಾಗಿ ತಮ್ಮ ಜೀವಿತದ ಅಮೂಲ್ಯ ಸಮಯವನ್ನೆಲ್ಲಾ ಇಂತಹ  ಸಂಶೋಧನೆಗಾಗಿಯೇ ಮುಡಿಪಿಟ್ಟು ತಮ್ಮ ಜೀವ, ಜೀವನವನ್ನೇ ತೇಯ್ದುಕೊಂಡ ಎಷ್ಟೊಂದು ಸಾಧಕರನ್ನು ನಮ್ಮ ಕಣ್ಣ ಮುಂದೆ ಕಾಣುತ್ತಲೇ ಇರುತ್ತೇವೆ.

ಪ್ರತಿಯೊಬ್ಬ ವ್ಯಕ್ತಿಯೂ ಜೀವನದಲ್ಲಿ ಏನಾದರೊಂದು ಸಾಧಿಸುವ ಛಲಹೊಂದಿರಬೇಕು. ಕಷ್ಟಪಡದೇ ಇಲ್ಲೇನನ್ನೂ ಸಾಧಿಸಲಾಗುವುದಿಲ್ಲ. ನಿರಂತರ ಪರಿಶ್ರಮದಿಂದ ಮಾತ್ರ ಗುರಿಸೇರಲು ಸಾಧ್ಯ High aim is not crime ಎತ್ತರದ ಗುರಿ ಹೊಂದಿರುವುದು ಅಪರಾಧವಲ್ಲ. ಎನ್ನುತ್ತಾನೆ ದಾರ್ಶನಿಕನೊಬ್ಬ. ಸಖಿ, ಅದಕ್ಕೆಂದೇ ಬದುಕಿನಲ್ಲಿ ಉತ್ತಮ ಧ್ಯೇಯವೊಂದನ್ನು ಹೊಂದಿರುವುದರಲ್ಲಿ ತಪ್ಪೇನೂ ಇಲ್ಲ. ಅದನ್ನು ಸಾಧಿಸಿಯೇ ತೀರುತ್ತೇವೊ ಇಲ್ಲವೋ ಗೊತ್ತಿಲ್ಲ. ಸಾಧನೆಯ ಹಾದಿಯಲ್ಲಿ ಅವಿರತವಾಗಿ ಹೆಜ್ಜೆ ಹಾಕುತ್ತಿದ್ದರೆ ಅಷ್ಟೇ ಸಾಕು. ಅಲ್ಲವೇ?
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಗಿಡ ಮರ ಪ್ರಾಣಿ ಎಲ್ಲ
Next post ಸಿಂಕ್ಲೇರನಿಗೆ

ಸಣ್ಣ ಕತೆ

  • ರಣಹದ್ದುಗಳು

    ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ನಂಬಿಕೆ

    ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…