ಹುಣ್ಣಿಮೆ

ನಿನ್ನ ಬರುವಿಕೆಗಾಗಿ ಕುಳಿತಿರುವೆ
ಏಕಾಂಗಿಯಾಗಿ ನೀಲಬಾನತುಂಬ
ಹಳದಿ ಹರಡಿ ದಕ್ಕಲಾಗದ ಭಾವಗಳ
ಚಿಕ್ಕೆಗಳು ಮೂಡಿದವು.

ಅಂತರಾಳ ತೆರೆದುಕೊಳ್ಳುವುದಿಲ್ಲ
ಸುಲಭದಲಿ ಎರಡು ಮನೆಗಳ
ಬಾಗಿಲುದಾಟಿ ಸಪ್ನಗಳು ದಿಕ್ಕೀ
ಹೊಡೆಯುವ ಕ್ಷಣ ಚಂದ್ರ ತೇಲಿದ.

ಹರಡಿ ಹಾಸಿದ ತಲೆಗೂದಲು
ತುಂಬ ಘಮ್ಮೆಂದು ಮಲ್ಲಿಗೆ
ಹೊರಳಿ ಸೂಸಿ ಹಂತ ಹಂತವಾಗಿ
ಮೇಲೇರಿ ಮೌಲ್ಯ ನೀಡಿತು ರಾತ್ರಿ ಪಹರೆಯಲಿ.

ಕಾಲಗೆಜ್ಜೆಯ ಝೇಂಕಾರದಲಿ
ಜೀರುಂಡೆ ಮೀಟಿ ಹಾಡಿದವು
ಬಯಲು ಆಲಯದಲಿ ಅವನ
ಹೆಜ್ಜೆಯ ಸಪ್ಪಳಕೆ ಕಾಯಿತು ಮನ ಅಂತಃಕರಣದಲಿ.

ಬಂದು ಒಮ್ಮೆ ತಬ್ಬಿ ಸಿಂಚನ ದೃಶ್ಯ
ಮಾಹಿತ ಕಂಪನಕಾದಿರುವ ಪ್ರಿಯಕರ
ಬೆಳದಿಂಗಳ ತಂಪು ಹೊತ್ತು ಬಂದಂತೆ
ಜಗಕ್ಕೆಲ್ಲಾ ಮಧುರ ಮಿಲನದ ಹುಣ್ಣಿಮೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕನ್ನಡ
Next post ಪಾವಿತ್ರ್‍ಯದೆಡೆಗೆ…

ಸಣ್ಣ ಕತೆ

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ಧರ್ಮಸಂಸ್ಥಾಪನಾರ್ಥಾಯ

    ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…

  • ಸಂಶೋಧನೆ

    ವೇಣುಗೋಪಾಲನ ಜೀವನ ಬೆಳಗು ರಾತ್ರಿಗಳಂತೆ ಒಂದೇ ಮಾಂತ್ರಿಕತೆಗೆ ಹೊಂದಿಕೊಂಡಿತ್ತು. ಬೆಳಿಗ್ಗೆ ಏಳುವುದು ನೈಸರ್ಗಿಕ ವಿಧಿಗಳಿಂದ ಮುಕ್ತನಾಗಿ ಕಾಫಿ ಕುಡಿಯುತ್ತಾ ಅಂದಿನ ದಿನಪತ್ರಿಕೆ ಓದುವುದು, ಓದಿದ್ದರ ಬಗ್ಗೆ ಚಿಂತಿಸುತ್ತಾ… Read more…

  • ಸ್ನೇಹಲತಾ

    ೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…