ಒಡಲ ಕುಂಡದಲ್ಲಿ ಹೀಗೆ ನರಳಿ ಹೊರಳಿ ಅರಳುವ ಒಂಟಿತನಕ್ಕೆ ಪಕ್ಕದಲ್ಲಿ ಮರದಲ್ಲಿ ಕುಳಿತು ಹಕ್ಕಿ ಹಾಡಿತು, ರೆಕ್ಕೆ ಬಿಚ್ಚಿ ಹಾರಲು ನೀಲಬಾನುವಿನ ಆಳ ನಿರಾಳ ಲೋಕಕ್ಕೆ ಕಣ್ಣುಗಳು ಹೊರಳಿದವು, ವಿವಶವಾಗಿ ಚಂಗನೆ ಚಿಗುರಿದ ವಿಸ್ಮಯಗಳು ಕಂಡು. ರಾಗವಿಲ್ಲ...
ಒಂದು ಕಾಲವಿತ್ತು ಒಂದು ಫಿಲ್ಮ್ ಮೂಲಕ ಬೆಳಕನ್ನು ಹರಿಸಿ ಫಿಲ್ಮಿನಲ್ಲಿರುವ ಚಿತ್ರಗಳನ್ನು ದೊಡ್ಡದನ್ನಾಗಿ ತೋರಿಸುವ ವಿಧಾನ. ಇದನ್ನು ತೋರಿಸುವ ಯಂತ್ರಕ್ಕೆ ಪ್ರೋಜೆಕ್ಟರ್ ಎಂದು ಕರೆದರೂ ಹೊಸ ಆವಿಷ್ಕಾರ ಬಂದ ನಂತರ ವಿನೂತನ ಪ್ರಯೋಗಗಳಾಗಿ ಹೊಸ ನಮೂನ...
ಚೆಂದಾದ ಮನೆ ಚೂಟಿಯಾದ ಮಕ್ಕಳು ಚುರುಕಾದ ಗಂಡ ಆದರೇನು ಮನಸ್ಸಿಲ್ಲದ ಒಡತಿ ಹವ್ಯಾಸಗಳ ಗೆಳತಿ. *****...
ಬೇಲಿಯ ಮೇಲಿನ ಬಡಕಲು ಬಳ್ಳಿಗಳು ಬಿರಿದು ಹೂಗಳು ಹಡೆದವು ಸೋರೆ ಕುಂಬಳ ಬೆರಗಾಗಿ ಕೊರಗಿ ಬಾಡಿ ಉದುರಿದವು ಬೀಗಿ ನಗುತ್ತಿದ್ದ ಸಂಪಿಗೆ ದಾಸವಾಳ *****...
-೧- ೮-೪-೧೯೨೪ ರಘು, ಇಲ್ಲಿಂದ ಹೊರಟು ಹೋದ ಮೇಲೆ ಕಾಗದಗಳನ್ನೇ ಬರೆಯುತ್ತಿಲ್ಲವೇಕೆ? ನೀನು ಹೋದಂದಿನಿಂದ ನಿನ್ನ ಕಾಗದಗಳಾದರು ನೋಡುತ್ತಿರುವುದೇ ನನಗೆ ಕೆಲಸವಾಗಿದೆ. ನೀನು ಇಲ್ಲಿದ್ದಾಗ ನನ್ನೊಡನೆ ಹೇಳಿದ ಮಾತುಗಳನ್ನೆಲ್ಲಾ ಮರೆತಂತಿದೆ. ರಘು, ಯಾವ...
ಗಂಡಂದಿರು ಹೆಂಡತಿಯರಿಗೆ ಬಿಡುತ್ತಾರೆ ಸುಳ್ಳಿನ ರೈಲು ನಿಜಗೊತ್ತಾದ ಮೇಲೆ ಹಿಡಿಯುತ್ತಾರೆ ಕಾಲು *****...
ಕಾಮನಬಿಲ್ಲು ಅಷ್ಟೂ ಬಣ್ಣಗಳನ್ನು ಚೆಲ್ಲಿತು ನನಗೆ ನಾನೆ ಕೇಳಿಕೊಂಡೆ ನಿನಗೆ ಯಾವ ಬಣ್ಣ ಇಷ್ಟ? ಗೊರಟೆ, ಗುಲಾಬಿ, ಸೇವಂತಿಗೆ ದಾಸವಾಳ, ಕನಕಾಂಬರ, ಮಲ್ಲಿಗೆ ಹೆಣೆದು ನಿಂತವು ಅನ್ನಿಸಿತು: ಆಯ್ಕೆ ಬಹಳ ಕಷ್ಟ. ೨ ಹುಲಿ, ಕರಡಿ, ಆನೆ, ಅಳಿಲು? ಜಿಂಕೆ,...
ನೆನಪುಗಳು ನುಂಗಿ ನೊಣೆಯುತ್ತಿರುವಾಗ ಬೆಚ್ಚಿ ಎಚ್ಚೆತ್ತಳು ಶಬರಿ. ಹುಚ್ಚೀರ ಕಣ್ಣಲ್ಲಿ ಎಣ್ಣೆ ಹೊಯ್ದುಕೊಂಡಂತೆ ನೋಡುತ್ತ ಕೂತಿದ್ದಾನೆ. ಅಂದು-ಒಂದಾದ ರಾತ್ರಿಯ ಕತ್ತಲು; ಒಳಗೆಲ್ಲ ಬೆತ್ತಲು. ಇಂದು- ಅದೇರೀತಿಯ ಕತ್ತಲು; ಬಿರುಗಾಳಿ ಸುತ್ತಲು ಆದರೆ...
ಜಗದೊಳಗೆ ಹುಟ್ಟಿಬೆಳೆದರೂ ಜನರೊಳಗೆ ಬೆಳೆಯುವುದೇ ಸಾಧನೆ ವೇಮುಲ. ಇಲ್ಲದ ಮೂಲದಲ್ಲೇ ಹುಟ್ಟಿದರೂ ಇಲಾಖೆಗಳನ್ನೇ ಕಟ್ಟಬಲ್ಲವರು ಇಲ್ಲಿಹರು ಇದ್ದರಮನೆಯ ಮಾರಿ ತಿಂದವರು ಇಹರು ಪರಿಪರಿಯ ಪಂಡಿತರು, ಪಾಮರರು, ಅರೆಬರೆಯ ಶಿಕ್ಷಿತರು ಎಲ್ಲರ ಗೂಡಲ್ಲವೇ ಇದ...
ಫಿಲ್ (ಅರ್ಥಾತ್ ಫಿಲಿಪ್ ಕಾರ್ನಬಿ) ಶೆಲ್ಫಿನಲ್ಲಿ ಪುಸ್ತಕಗಳ ನಡುವೆ ತಲೆಬುರುಡೆಯೊಂದನ್ನ ಇರಿಸಿಕೊಂಡಿದ್ದಾನೆ. ಸಾಹಿತ್ಯದ ವಿದ್ಯಾರ್ಥಿ ಫಿಲ್ ತುಂಬಾ ಓದುತ್ತಾನೆ- ಶೇಕ್ಸ್‌ಪಿಯರ್, ಮಿಲ್ಟನ್, ಲಾರೆನ್ಸ್, ಇತ್ಯಾದಿ ಇತ್ಯಾದಿ ನಾಟಕದ ಹುಚ್ಚು ಬೇರೆ...
ಮಳೆ ಎಂದರೆ ಅಂತಹ ಇಂತಹ ಮಳೆಯಲ್ಲ. ಕೈ ಹೊರುವುದನ್ನು ಮೈ ಹೊರಲಿ ಎಂದು ಎಲ್ಲಾ ಬಟ್ಟೆ ಬರೆಗಳನ್ನೂ ಮೈಯ ಮೇಲೆಯೇ ಹಾಕಿಕೊಂಡಿದ್ದೆ. ಹಿಡಿದುಕೊಂಡಿದ್ದ ಛತ್ರಿ, ಹೊದ್ದಿದ್ದ ಜಮಖಾನೆ, ಉಟ್ಟಿದ್ದ ಎರಡು ಗಾಂಧಿಪಂಚೆ, ತೊಟ್ಟಿದ್ದ ಕಾಕಿಚೆಡ್ಡಿ, ಇಷ್ಟೆಲ್ಲಾ ನೆನೆದುದಲ್ಲದೆ, ಕಟ್ಟಿದ್ದ ಕಾಚ ...
(ದುಡ್ಡೇ ಧರ್ಮ, ದುಡ್ಡೇ ನೀತಿ, ದುಡ್ಡೇ ನ್ಯಾಯ, ದುಡ್ಡೇ ದೊಡ್ಡಪ್ಪ. ದುಡ್ಡಿಗಾಗಿ ಯಾವ ಹೇಸಿಕೆಲಕಕ್ಕೂ ಹಿಂಜರಿಯದ ಕೆಲವು ಸ್ವಾರ್ಥಿಗಳು ಇರುತ್ತಾರೆ. ಸ್ವಾರ್ಥ ಸಾಧನೆಗಾಗಿ, ದುರಾಶೆಯನ್ನು ಈಡೇರಿಸಿಕೊಳ್ಳುವದಕ್ಕಾಗಿ, ಹೊತ್ತು ಸಾಧಿಸಿ ಕತ್ತೆಯ ಕಾಲನ್ನು ಕೂಡ ಹಿಡಿದು ಕೊಳ್ಳಲು ಅವರು...
ಅವನ ಈಗಿನ ಸ್ಥಿತಿಗೆ ಭಗವದ್ಗೀತಾ, ಉಪನಿಷತ್ತುಗಳು, ಪುರಾಣ, ವೇದಗಳು, ಕುರಾನ್, ಬೈಬಲ್‌ಗಳೇ ಬಹು ಮಟ್ಟಿಗೆ ಕಾರಣವೆಂದು ಹೇಳಬಹುದು. ಅವನ್ಯಾವ ಗ್ರಂಥಗಳನ್ನೂ ಓದಿದವನಲ್ಲ. ಯಾವ ಧರ್ಮಕ್ಕೂ ಗಟ್ಟಿಯಾಗಿ ಅಂಟಿಕೊಂಡು ಬದುಕುವವನಲ್ಲ. ದೇವರಿದ್ದಾನೋ ಇಲ್ಲವೋ ಎಂಬುವುದವನಿಗೆ ಗೊತ್ತಿಲ್ಲ. ಹು...








